ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಟ; 1 ಕೋಟಿ ಮಾಸ್ಕ್ ಗಳು ಉಚಿತ ಉಚಿತ!

|
Google Oneindia Kannada News

ಹಾಂಗ್ ಕಾಂಗ್, ಏಪ್ರಿಲ್.09: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಘೋಷಿಸಿದ್ದು ಆಗಿದೆ. ಕೊವಿಡ್19 ನಿಂದ ರಕ್ಷಿಸಿಕೊಳ್ಳಲು ಹಲವು ದೇಶಗಳಲ್ಲಿ ಮಾಸ್ಕ್ ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

Recommended Video

ಬೆಂಗಳೂರಿನ ಶ್ರೀನಗರದಲ್ಲಿ ಕೊರೊನಾ ವೈರಸ್ ಭಯ ಇಲ್ಲ | Srinagara | No Fear Corona | Oneindia kannada

ಹಾಂಗ್ ಕಾಂಗ್ ನಲ್ಲಿ ಮಾಸ್ಕ್ ಕೊರತೆಯ ಸಮಸ್ಯೆ ನೀಗಿಸಲು ಕೋಟ್ಯಾಧಿಪತಿ ಕಲಾ ಸಂಗ್ರಹಕಾರರಾಗಿರುವ ಆಡ್ರಿಯನ್ ಚೆಂಗ್ 1 ಕೋಟಿ ಮಾಸ್ಕ್ ಗಳನ್ನು ಬಡವರಿಗೆ ಅಸಹಾಯಕರಿಗೆ ಉಚಿತವಾಗಿ ವಿತರಿಸುವುದಾಗಿ ಘೋಷಿಸಿದ್ದಾರೆ.

ಕೊರೊನಾ ಚಿಂತೆ ಬಿಡಿ ವಿಟಮಿನ್ ಡಿ ವೃದ್ಧಿಸಿ; ಇದು ಹೃದಯದ ವಿಷಯ ಕೊರೊನಾ ಚಿಂತೆ ಬಿಡಿ ವಿಟಮಿನ್ ಡಿ ವೃದ್ಧಿಸಿ; ಇದು ಹೃದಯದ ವಿಷಯ

ದೇಶಾದ್ಯಂತ 35 ಮಾಸ್ಕ್ ಮಷಿನ್ ಗಳನ್ನು ಇರಿಸಲಾಗಿದ್ದು, ಸ್ಮಾರ್ಟ್ ಕಾರ್ಡ್ ಗಳನ್ನು ಹಾಕಿದರೆ ಮಾಸ್ಕ್ ಗಳು ಸಿಗುವಂತಾ ವ್ಯವಸ್ಥೆಯನ್ನು ಮಾಡಲಾಗಿದೆ. ಮೊದಲ ಹಂತದಲ್ಲಿ ಒಂದು ಕೋಟಿ ಮಾಸ್ಕ್ ಗಳನ್ನು ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಹಾಂಗ್ ಕಾಂಗ್ ನಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯ

ಹಾಂಗ್ ಕಾಂಗ್ ನಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯ

ಹಾಂಗ್ ಕಾಂಗ್ ಸೇರಿದಂತೆ ಏಷ್ಯಾ ಖಂಡದ ಹಲವು ರಾಷ್ಟ್ರಗಳಲ್ಲಿ ಮೊದಲೇ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇತ್ತೀಚಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸೇರಿಂದೆತ ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಈ ನಿಯಮವನ್ನು ಕಡ್ಡಾಯಗೊಳಿಸಲಾಯಿತು.

ಅಸಹಾಯಕರ ನೆರವಿಗೆ ಕಲಾ ಸಂಗ್ರಹಕಾರ ಆಡ್ರಿಯನ್ ಚೆಂಗ್

ಅಸಹಾಯಕರ ನೆರವಿಗೆ ಕಲಾ ಸಂಗ್ರಹಕಾರ ಆಡ್ರಿಯನ್ ಚೆಂಗ್

ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ವ್ಯಾಪಿಸಿದ್ದು, ಅಸಹಾಯಕ ಸ್ಥಿತಿಯಲ್ಲಿರುವ ಜನರು ಮಾಸ್ಕ್ ಖರೀದಿಸುವುದಕ್ಕೂ ಹಣವಿಲ್ಲದೇ ಪರದಾಡುತ್ತಿರುವುದನ್ನು ಕಂಡು ಮನಸು ವೇದನೆ ಪಡುತ್ತದೆ. ಹೀಗಾಗಿ ಬಡವರಿಗೆ ಅಸಹಾಯಕರಿಗೆ ಸಹಾಯವಾಗಲಿ ಎಂದು ಈ ತೀರ್ಮಾನವನ್ನು ತೆಗೆದುಕೊಂಡಿದ್ದೀನಿ ಎಂದು ಆಡ್ರಿಯನ್ ಚೆಂಗ್ ತಿಳಿಸಿದ್ದಾರೆ.

ಮಾಸ್ಕ್ ಗಳ ಮರು ಬಳಕೆಯೇ ಮಹಾ ಅಪಾಯ

ಮಾಸ್ಕ್ ಗಳ ಮರು ಬಳಕೆಯೇ ಮಹಾ ಅಪಾಯ

ಮಾಸ್ಕ್ ಕೊರತೆಯಿಂದ ಜನರು ತೊಟ್ಟ ಮಾಸ್ಕ್ ಗಳನ್ನೇ ಮರು ಬಳಕೆ ಮಾಡುತ್ತಿದ್ದರು. ಇದರಿಂದ ಸೋಂಕು ಅಪಾಯವೂ ಎದುರಾಗುವ ಸಾಧ್ಯತೆಯಿತ್ತು. ಈ ಸಮಸ್ಯೆಯನ್ನು ಮನಗಂಡು ಉಚಿತವಾಗಿ ಮಾಸ್ಕ್ ವಿತರಿಸಲು ಮುಂದಾಗಿದ್ದೇನೆ. ಇದರಿಂದ ಸಾವಿರಾರು ಜನರಿಗೆ ಉಚಿತವಾಗಿ ಮಾಸ್ಕ್ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಸ್ಮಾರ್ಟ್ ಕಾರ್ಡ್ ತೋರಿಸಿದರೆ ಮಾಸ್ಕ್ ಬರುತ್ತೆ

ಸ್ಮಾರ್ಟ್ ಕಾರ್ಡ್ ತೋರಿಸಿದರೆ ಮಾಸ್ಕ್ ಬರುತ್ತೆ

ಏಪ್ರಿಲ್ ವೇಳೆಗೆ ಹಾಂಗ್ ಕಾಂಗ್ 18 ಜಿಲ್ಲೆಗಳಲ್ಲಿ ಈ ಮಾಸ್ಕ್ ವಿತರಣೆ ಮಷಿನ್ ಗಳನ್ನು ಇರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸ್ಮಾರ್ಟ್ ರಿಡಿಪ್ಷನ್ ಕಾರ್ಡ್ ಗಳಲ್ಲಿ ಇರುವ ಕ್ಯುಆರ್ ನಂಬರ್ ಆಧಾರದ ಮೇಲೆ ಈ ಮಷಿನ್ ಗಳು ಕಾರ್ಯ ನಿರ್ವಹಿಸಲಿದೆ. ಮೊದಲೇ ಈ ಮಷಿನ್ ಗಳಲ್ಲಿ ಮಾಸ್ಕ್ ಗಳನ್ನು ತುಂಬಿ ಇರಿಸಲಾಗಿರುತ್ತದೆ. ಕಾರ್ಡ್ ಉಳ್ಳವರು ಸ್ಕಾನ್ ಮಾಡುವ ಮೂಲಕ ಮಾಸ್ಕ್ ಗಳನ್ನು ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.

English summary
Fight Against Coronavirus: 1 Crore Free Surgical Face Mask For Vulnerable People In Honk Kong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X