ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರಾರು ಅಮಾಯಕರನ್ನು ಕೊಂದು ಹಾಕಿದ ಸರ್ವಾಧಿಕಾರಿಗಳು

|
Google Oneindia Kannada News

ನಿರಂತರವಾಗಿ ಕಚ್ಚಾಡುತ್ತಿರುವ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಈವರೆಗೂ 1,119 ಅಮಾಯಕ ಜೀವಗಳನ್ನು ಬಲಿಪಡೆದಿದ್ದಾರೆ. ಎರಡೂ ದೇಶಗಳ ಸರ್ಕಾರಗಳು ನೀಡಿರುವ ಅಂಕಿ-ಅಂಶಗಳ ಪ್ರಕಾರ ಈವರೆಗೆ 1,119 ಮಂದಿ ಬಲಿಯಾಗಿದ್ದಾರೆ. ಆದರೆ ಲೆಕ್ಕಕ್ಕೆ ಸಿಗದಷ್ಟು ಜನರು ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಈ ರೀತಿ ಕಾಣೆಯಾದವರ ಸಂಖ್ಯೆಯೇ ಹತ್ತಾರು ಸಾವಿರ ದಾಟುತ್ತದೆ. ಇದನ್ನೆಲ್ಲಾ ಲೆಕ್ಕಾ ಹಾಕಿ ಹೇಳುವುದಾದರೆ ಈಗಾಗಲೇ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿರಬಹುದು.

ಅರ್ಮೇನಿಯ-ಅಜೆರ್ಬೈಜಾನ್ ಯುದ್ಧ ಆರಂಭವಾಗಿ 2 ತಿಂಗಳು ಕಳೆಯುತ್ತಾ ಬಂದರೂ ಹಿಂಸೆಗೆ ಬ್ರೇಕ್ ಬಿದ್ದಿಲ್ಲ. ಎರಡೂ ದೇಶಗಳ ಮಧ್ಯೆ ಹಲವು ಬಾರಿ ಕದನ ವಿರಾಮ ಒಪ್ಪಂದವಾದರೂ, ಪದೇಪದೆ ಉಲ್ಲಂಘನೆಯಾಗುತ್ತಿದೆ. ಅರ್ಮೇನಿಯ ದಾಳಿಗೆ ಅಜೆರ್ಬೈಜಾನ್, ಹಾಗೇ ಅಜೆರ್ಬೈಜಾನ್ ಅಟ್ಯಾಕ್‌ಗೆ ಅರ್ಮೇನಿಯ ಕೌಂಟರ್ ಅಟ್ಯಾಕ್ ಕೊಡುತ್ತಲೇ ಇವೆ. ಇದನ್ನೆಲ್ಲಾ ಮೊದಲೇ ಅರಿತಿದ್ದ ರಷ್ಯಾ ಎರಡೂ ದೇಶಗಳ ನಡುವೆ ಸಂಧಾನ ಮಾಡಿಸಿತ್ತು, ಆದರೆ ರಷ್ಯಾ ಮಾತಿಗೂ ಈ ದೇಶಗಳ ನಾಯಕರು ಬೆಲೆ ಕೊಡಲಿಲ್ಲ. ನಂತರ ಅಮೆರಿಕದ ಬಳಿ ಶಾಂತಿ ಮಾತುಕತೆ ಮಾಡಿಸಿ ಎಂದು ಹೋದವು. ಅಲ್ಲಿ ಕೂಡ ಅಮೆರಿಕ ಶಾಂತಿ ಒಪ್ಪಂದ ಮಾಡಿ ಕಳುಹಿಸಿದ್ದರೂ ಹಿಂಸೆಗೆ ಬ್ರೇಕ್ ಬಿದ್ದಿಲ್ಲ.

ಬದುಕುವುದಾದರೂ ಹೇಗೆ, ಹೋಗುವುದಾದರೂ ಎಲ್ಲಿಗೆ..?

ಬದುಕುವುದಾದರೂ ಹೇಗೆ, ಹೋಗುವುದಾದರೂ ಎಲ್ಲಿಗೆ..?

ಈಗಾಗಲೇ ಕೊರೊನಾ ಹೊಡೆತಕ್ಕೆ ಸಿಲುಕಿ ನರಳಾಡುತ್ತಿರುವ ಅರ್ಮೇನಿಯ-ಅಜೆರ್ಬೈಜಾನ್‌ನ ಸಾಮಾನ್ಯ ಜನರು, ಯುದ್ಧ ಆರಂಭವಾದ ನಂತರ ಕಂಗಾಲಾಗಿ ಹೋಗಿದ್ದಾರೆ. ಇವರಲ್ಲಿ ಬಹುತೇಕರಿಗೆ ಎಲ್ಲಿಗೆ ಹೋಗಿ, ಹೇಗೆ ಬಾಳುವುದು ಎಂಬುದೇ ತಿಳಿಯದಾಗಿದೆ. ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಕೈಯಲ್ಲಿ ಕಾಸಿಲ್ಲ, ದುಡಿಯಲು ಕೆಲಸವಿಲ್ಲ. ಅರ್ಮೇನಿಯ-ಅಜೆರ್ಬೈಜಾನ್‌ನ ದುರಹಂಕಾರಿ ನಾಯಕರು ಪದೇ ಪದೆ ಯುದ್ಧಕ್ಕೆ ಬೆಂಬಲ ನೀಡುತ್ತಿದ್ದಾರೆ. ಕದನ ವಿರಾಮ ಉಲ್ಲಂಘನೆ ಮಾಡಿ, ಸಾವಿರಾರು ಜನರನ್ನು ಕೊಂದಿದ್ದಾರೆ. ಹೀಗಾಗಿ ತಾವಿದ್ದ ಜಾಗದಲ್ಲೂ ಬದುಕಲು ಆಗದೆ, ಬೇರೆಡೆ ಹೋಗುವುದಕ್ಕೂ ಆಗದೆ ಅರ್ಮೇನಿಯ-ಅಜೆರ್ಬೈಜಾನ್ ಗಡಿ ನಿವಾಸಿಗಳು ನರಳಾಡುತ್ತಿದ್ದಾರೆ.

'ದೊಡ್ಡಣ್ಣ'ನ ಮಾತಿಗೂ ಕೇರ್ ಮಾಡಲಿಲ್ಲ ಈ ಮೊಂಡರು..!'ದೊಡ್ಡಣ್ಣ'ನ ಮಾತಿಗೂ ಕೇರ್ ಮಾಡಲಿಲ್ಲ ಈ ಮೊಂಡರು..!

ಯುದ್ಧಕ್ಕೆ ಕಾರಣ ಏನು..?

ಯುದ್ಧಕ್ಕೆ ಕಾರಣ ಏನು..?

ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್‌ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯದ ವರದಿಗಳ ಪ್ರಕಾರ ಈಗಾಗಲೇ ಸಾವಿರಾರು ನಾಗರಿಕರು ಯುದ್ಧದ ಕೆನ್ನಾಲಿಗೆಗೆ ಬಲಿಯಾಗಿ ಹೋಗಿದ್ದಾರೆ.

ಡಿಸೆಂಬರ್ ವೇಳೆಗೆ ಅಸಹನೀಯ ಚಳಿ

ಡಿಸೆಂಬರ್ ವೇಳೆಗೆ ಅಸಹನೀಯ ಚಳಿ

ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಕಾರಣ ಡಿಸೆಂಬರ್ ವೇಳೆಗೆಲ್ಲಾ ಅಲ್ಲಿ ಅಸಹನೀಯ ಚಳಿ ತಾಗಲಿದೆ. ಕೆಲವು ಸಂದರ್ಭದಲ್ಲಿ ಉಷ್ಣಾಂಶ ಮೈನಸ್‌ ಡಿಗ್ರಿ ಮುಟ್ಟಲಿದೆ. ಕೆಲವೆಡೆ -40 ಡಿಗ್ರಿಗೆ ಉಷ್ಣಾಂಶ ಕುಸಿದರೆ, ಮತ್ತೆ ಕೆಲವು ಕಡೆ ಉಷ್ಣಾಂಶ (+) ಚಿಹ್ನೆ ಮುಟ್ಟುವುದೇ ಇಲ್ಲ. ಹೀಗೆ ಕೊರೆಯುವ ಚಳಿಯಲ್ಲಿ ಅಲ್ಲಿನ ಜನ ಬೆಚ್ಚನೆಯ ಮನೆಯಿದ್ದರೂ ನಡುಗುತ್ತಲೇ ಬದುಕುತ್ತಾರೆ. ಆದರೆ ಈಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ ಸಾವಿರಾರು ಮನೆಗಳು ನಾಶವಾಗಿಬಿಟ್ಟಿವೆ. ಲಕ್ಷಾಂತರ ನಿರಾಶ್ರಿತರಿಗೆ ಚಳಿಯದ್ದೇ ಚಿಂತೆಯಾಗಿ ಹೋಗಿದೆ. ಮಕ್ಕಳು, ಸಂಸಾರ ಕರೆದುಕೊಂಡು ಎಲ್ಲಿಗೆ ಹೋಗೋದು ಅಂತಾ ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಸಂತ್ರಸ್ತರ ಉಸಿರಲ್ಲಿ ಹಿಡಿ ಶಾಪವೂ ಇದೆ.

ರಷ್ಯಾ ನಿರೀಕ್ಷೆ ಹುಸಿ, ಅಮೆರಿಕ ಕಡೆ ವಾಲಿದ ಅರ್ಮೇನಿಯರಷ್ಯಾ ನಿರೀಕ್ಷೆ ಹುಸಿ, ಅಮೆರಿಕ ಕಡೆ ವಾಲಿದ ಅರ್ಮೇನಿಯ

 ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ

ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ

ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.

Recommended Video

ಮಾನವೀಯತೆಗೆ ಮನಸೋತ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan | Munirathna | Oneindia Kannada
ರಷ್ಯಾ ಕನಸು ನನಸಾಯ್ತು, ಅಮೆರಿಕಗೆ ಶಾಕ್ ಸಿಕ್ಕಿತು..!

ರಷ್ಯಾ ಕನಸು ನನಸಾಯ್ತು, ಅಮೆರಿಕಗೆ ಶಾಕ್ ಸಿಕ್ಕಿತು..!

ಒಂದಾನೊಂದು ಕಾಲದಲ್ಲಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಸೋವಿಯತ್ ರಷ್ಯಾ ಭಾಗವಾಗಿದ್ದವು. ಆದರೆ ಸೋವಿಯತ್ ರಷ್ಯಾ ವಿಭಜನೆ ಬಳಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬೇರೆ ಬೇರೆ ದೇಶಗಳಾಗಿ ಹಂಚಿ ಹೋದವು. ಒಂದು ಕಾಲದಲ್ಲಿ ತಮ್ಮದೇ ದೇಶದ ಭಾಗವಾಗಿದ್ದ ಎರಡೂ ದೇಶಗಳು ಸಂಧಾನಕ್ಕಾಗಿ ದೂರದ ಅಮೆರಿಕ ಬಳಿ ಹೋಗುವುದು ಪುಟಿನ್‌ಗೆ ಬಿಲ್‌ಕುಲ್ ಇಷ್ಟವಿರಲಿಲ್ಲ. ಇದಕ್ಕೆಲ್ಲಾ ಕೇರ್ ಮಾಡದೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಅಮೆರಿಕ ನೇತೃತ್ವದಲ್ಲಿ ಕದನ ವಿರಾಮಕ್ಕೆ ಒಪ್ಪಿದ್ದರು. ಆದರೆ ಹೀಗೆ ಒಪ್ಪಿ ಒಂದೆರಡು ದಿನಗಳು ಕಳೆಯುವುದರ ಒಳಗೆ ಮತ್ತೆ ಜಗಳ ಆರಂಭಿಸಿದ್ದವು. ಅಮೆರಿಕದ ಮಾತಿಗೂ ಬೆಲೆ ನೀಡಿಲ್ಲ, ಇದು ರಷ್ಯಾಗೆ ಒಳಗೊಳಗೆ ಖುಷಿ ಕೊಟ್ಟಿದೆ.

ಯುದ್ಧ ನಿಲ್ಲಿಸದ ಅರ್ಮೇನಿಯ-ಅಜೆರ್ಬೈಜಾನ್‌ಗೆ ಶಾಕ್..?ಯುದ್ಧ ನಿಲ್ಲಿಸದ ಅರ್ಮೇನಿಯ-ಅಜೆರ್ಬೈಜಾನ್‌ಗೆ ಶಾಕ್..?

English summary
According to official sources, 1,119 people have died in the war Between Armenia and Azerbaijan. Millions of people lost their homes and leaving town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X