ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು; ZRC-3308 ಪ್ರಯೋಗಕ್ಕೆ ಅನುಮತಿ ಕೋರಿದ ಝೈಡಸ್

|
Google Oneindia Kannada News

ನವದೆಹಲಿ, ಮೇ 27: ಕೊರೊನಾ ಸೋಂಕಿನ ಚಿಕಿತ್ಸೆಗೆ ತನ್ನ ZRC-3308 ಔಷಧಿ ಬಳಸಲು ಮಾನವ ಪ್ರಯೋಗಕ್ಕೆ ಅನುಮತಿ ಕೋರಿ ಭಾರತೀಯ ಔಷಧ ತಯಾರಿಕಾ ಕಂಪನಿ ಝೈಡಸ್ ಕಾಡಿಲಾ, ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯವ- ಡಿಸಿಜಿಐ ಅಅನ್ನು ಕೋರಿದೆ.

ZRC-3308 ಔಷಧಿ ಸುರಕ್ಷಿತವಾಗಿದೆ. ಹೀಗಾಗಿ ಕೊರೊನಾ ಸೋಂಕಿಗೆ ಮಾನವರ ಮೇಲೆ ವೈದ್ಯಕೀಯ ಪ್ರಯೋಗ ನಡೆಸಲು ಅವಕಾಶ ನೀಡಬೇಕು ಎಂದು ಝೈಡಸ್ ಕ್ಯಾಡಿಲಾ ಸಮೂಹದ ಭಾಗವಾಗಿರುವ ಕ್ಯಾಡಿಲಾ ಹೆಲ್ತ್‌ ಕೇರ್ ತಿಳಿಸಿದೆ.

ಝೈಡಸ್ ಕೋವಿಡ್ ಲಸಿಕೆ ಪ್ರಯೋಗ; ಕರ್ನಾಟಕದ 20 ಮಕ್ಕಳು ಭಾಗಿಝೈಡಸ್ ಕೋವಿಡ್ ಲಸಿಕೆ ಪ್ರಯೋಗ; ಕರ್ನಾಟಕದ 20 ಮಕ್ಕಳು ಭಾಗಿ

ಕೊರೊನಾ ಸೋಂಕಿನ ಚಿಕಿತ್ಸೆಗೆ ಮೋನೊಕ್ಲೋನಲ್ ಆ್ಯಂಟಿಬಾಡಿಗಳನ್ನು ತಟಸ್ಥಗೊಳಿಸುವ ಕಾಕ್‌ಟೇಲ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಕಂಪನಿ ಇದಾಗಲಿದೆ. ಈ ಔಷಧದಿಂದ ದೀರ್ಘಾವಧಿಯಲ್ಲಿ ಸೋಂಕಿನಿಂದ ರಕ್ಷಣೆ ಪಡೆಯಬಹುದು. ಜೀವಕೋಶಗಳ ಹಾನಿ ಸರಿಪಡಿಸಿ ಸಮಸ್ಯೆ ಗಂಭೀರವಾಗುವುದನ್ನು ತಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.

 Zydus Seeks DCGI Approval To Clinical Trial Of Its ZRC 3308

ಈ ಔಷಧವನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಈ ಸಂದರ್ಭ, ಶ್ವಾಸಕೋಶದ ಮೇಲಿನ ಹಾನಿ ತಗ್ಗಿರುವುದು ಕಂಡುಬಂದಿದೆ. ಔಷಧಿ ಸುರಕ್ಷಿತವಾಗಿದ್ದು, ಮನುಷ್ಯರ ಮೇಲೆ ಪ್ರಯೋಗಿಸಲು ಅನುಮತಿ ನೀಡಬೇಕಿದೆ ಎಂದು ಕಂಪನಿ ತಿಳಿಸಿದೆ.

ದೇಶದಲ್ಲಿ ಕೊರೊನಾ ಲಸಿಕೆಗಳಿಗೆ ಅಭಾವ ಉಂಟಾಗಿದೆ. ಜೊತೆಗೆ ಸೋಂಕಿಗೆ ಪರಿಣಾಮಕಾರಿ ಚಿಕಿತ್ಸೆಯ ಅಗತ್ಯವೂ ಹೆಚ್ಚಿದೆ. ಸಮಸ್ಯೆಯನ್ನು ತಗ್ಗಿಸುವ ಸಂಬಂಧ ಹಲವು ಪ್ರಯೋಗಗಳು ನಡೆಯಬೇಕಿವೆ. ಈ ವಿಷಯದಲ್ಲಿ ZRC-3308 ಪರಿಣಾಮಕಾರಿಯಾಗಬಹುದೆಂಬ ವಿಶ್ವಾಸವಿದೆ ಎಂದು ಕ್ಯಾಡಿಲಾ ಹೆಲ್ತ್ ಕೇರ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಶರ್ವಿಲ್ ಪಟೇಲ್ ತಿಳಿಸಿದ್ದಾರೆ.

ಮತ್ತೊಂದೆಡೆ ಝೈಡಸ್ ಕ್ಯಾಡಿಲಾ ಕಂಪನಿ ಲಸಿಕೆಯ 3ನೇ ಹಂತದ ಪ್ರಯೋಗ ಮಕ್ಕಳ ಮೇಲೆ ನಡೆಯುತ್ತಿದೆ. ಗುಜರಾತ್ ಮೂಲದ ಝೈಡಸ್ ಕ್ಯಾಡಿಯಾ ಕಂಪನಿಯ ಕೋವಿಡ್ ಸೋಂಕಿನ ವಿರುದ್ಧದ ಲಸಿಕೆಯ 3ನೇ ಹಂತದ ಪ್ರಯೋಗ ಕರ್ನಾಟಕದಲ್ಲಿ 1,700 ಸ್ವಯಂ ಸೇವಕರ ಮೇಲೆ ನಡೆದಿದೆ.

English summary
Zydus seeks DCGI approval to undertake clinical trials for monoclonal antibodies cocktail ZRC-3308 that can neutralise COVID infection
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X