ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಡಸ್ ಕ್ಯಾಡಿಲಾ ಕಂಪನಿಯ ಕೊರೊನಾ ಲಸಿಕೆಗೆ ಅನುಮೋದನೆ

|
Google Oneindia Kannada News

ನವದೆಹಲಿ, ಏಪ್ರಿಲ್ 23: ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆ ಹರಡುವಿಕೆ ನಡುವೆ ಮತ್ತೊಂದು ಕೊವಿಡ್-19 ಲಸಿಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ.

ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ (Zydus Cadila) ಉತ್ಪಾದಿಸಿದ 'ವಿರಫಿನ್' ಲಸಿಕೆಗೆ ಅನುಮತಿ ನೀಡಲಾಗಿದೆ. ಮಧ್ಯಮ ಕ್ರಮಾಂಕದ ಕೊರೊನಾವೈರಸ್ ಸೋಂಕಿತರ ತುರ್ತು ಚಿಕಿತ್ಸೆಗೆ ಈ ಲಸಿಕೆಯನ್ನು ಬಳಸಲು ಅನುಮತಿಸಲಾಗಿದೆ.

Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮೋದನೆ ಸಿಗುತ್ತಿದ್ದಂತೆ ವಿರಫಿನ್‌ನ ಲಸಿಕೆಯ ಒಂದು ಡೋಸ್ ನಿಂದ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಲಿದೆ. ಕೊವಿಡ್-19 ಸೋಂಕಿತರಿಗೆ ವಿರಫಿನ್ ಲಸಿಕೆ ನೀಡುವುದರಿಂದ ಕ್ಷಿಪ್ರಗತಿಯಲ್ಲಿ ಚೇತರಿಸಿಕೊಳ್ಳುವುದಕ್ಕೆ ಹಾಗೂ ಹೆಚ್ಚಿನ ಅಪಾಯದಿಂದ ರಕ್ಷಣೆ ಸಿಗಲಿದೆ ಎಂದು ಕಂಪನಿ ಹೇಳಿದೆ.

Zydus Cadila Gets Emergency use Approval to Treat Moderate COVID-19 in India

ವಿರಫಿನ್ ಲಸಿಕೆ ಎಲ್ಲಿ ಸಿಗುತ್ತದೆ?

ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಡೆಟ್ ಉತ್ಪಾದಿಸಿದ ವಿರಫಿನ್ ಲಸಿಕೆಯು ತಜ್ಞವೈದ್ಯರ ಸಲಹೆ ಮೇರೆಗೆ ಸಾಂಸ್ಥಿಕ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ.

20 ರಿಂದ 25 ಕೇಂದ್ರಗಳಲ್ಲಿ ಪರೀಕ್ಷೆ:

ಭಾರತದಾದ್ಯಂತ 20 ರಿಂದ 25 ಪ್ರಯೋಗಾಲಯಗಳಲ್ಲಿ ವಿರಫಿನ್ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕೊವಿಡ್-19 ಸೋಂಕಿತರಲ್ಲಿ ಆಮ್ಲಜನಕ ಕೊರತೆ ಹೆಚ್ಚಾಗಿ ಬಾಧಿಸುತ್ತಿದೆ. ಇಂಥ ಸಂದರ್ಭದಲ್ಲಿ ವಿರಫಿನ್ ಲಸಿಕೆಯು ಹೆಚ್ಚು ಉಪಯೋಗಕ್ಕೆ ಬರಲಿದೆ. ಏಕೆಂದರೆ ಈ ಲಸಿಕೆಯು ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಆಮ್ಲಜನಕ ಕೊರತೆಯನ್ನು ನೀಗಿಸುವ ಉಸಿರಾಟ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ವಿರಫಿನ್ ಲಸಿಕೆಗೆ ಇತರೆ ಸಾಂಕ್ರಾಮಿಕ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯಿದೆ ಎಂದು ಕಂಪನಿ ತಿಳಿಸಿದೆ.

ದೇಶದಲ್ಲಿ ತೀರಾ ಅಗತ್ಯವಿರುವ ಸಂದರ್ಭದಲ್ಲಿ ಈ ಲಸಿಕೆಗೆ ಅನುಮೋದನೆ ನೀಡಲಾಗಿದ್ದು, ಕೊವಿಡ್-19 ಯುದ್ಧದ ವಿರುದ್ಧ ಗೆಲ್ಲುವುದಕ್ಕಾಗಿ ನಾವು ಸೋಂಕಿತರ ಚಿಕಿತ್ಸೆಗಾಗಿ ಈ ಲಸಿಕೆಯನ್ನು ಒದಗಿಸುತ್ತೇವೆ ಎಂದು ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಾರ್ವಿಲ್ ಪಟೇಲ್ ತಿಳಿಸಿದ್ದಾರೆ. ವಿರಫಿನ್ ಲಸಿಕೆಯು ಮೂರನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆ ಅಗತ್ಯವಿರುವ ಸುಧಾರಣೆಯನ್ನು ತೋರಿಸಿದೆ ಎಂದಿದ್ದಾರೆ.

English summary
Zydus Cadila Gets Emergency use Approval to Treat Moderate COVID-19 in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X