• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಟೋಬರ್ ವೇಳೆಗೆ ಝೈಡಸ್ ಕ್ಯಾಡಿಲಾದ ಒಂದು ಕೋಟಿ ಡೋಸ್ ಲಸಿಕೆ ಲಭ್ಯ

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಭಾರತದಲ್ಲಿ 12-18 ವರ್ಷದವರಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ಝೈಡಸ್ ಕ್ಯಾಡಿಲಾದ ಕೊರೊನಾ ಲಸಿಕೆಗಳ ಒಂದು ಕೋಟಿ ಡೋಸ್‌ಗಳು ಅಕ್ಟೋಬರ್‌ನಲ್ಲಿ ಲಭ್ಯವಿರಲಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಅಕ್ಟೋಬರ್ ಆರಂಭದ ವೇಳೆಗೆ ಝೈಡಸ್‌ ಕ್ಯಾಡಿಲಾದ ಸೂಜಿರಹಿತ ಲಸಿಕೆ "ಝೈಕೋವ್-ಡಿ' ಲಭ್ಯವಾಗಲಿದ್ದು, ಲಸಿಕೆ ಅಭಿಯಾನದಲ್ಲಿ ಈ ಲಸಿಕೆಯನ್ನು ಒಳಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಸೂಜಿ ಇಲ್ಲದ, ನೋವುಂಟು ಮಾಡದ ಮಕ್ಕಳ ಕೊರೊನಾ ಲಸಿಕೆ ZyCoV-Dಸೂಜಿ ಇಲ್ಲದ, ನೋವುಂಟು ಮಾಡದ ಮಕ್ಕಳ ಕೊರೊನಾ ಲಸಿಕೆ ZyCoV-D

ಆಗಸ್ಟ್‌ 20ರಂದು ಔಷಧ ನಿಯಂತ್ರಕ ಸಂಸ್ಥೆ, ದೇಶದಲ್ಲಿ 12-18 ವಯಸ್ಸಿನವರಿಗೆ ನೀಡಲು ಝೈಡಸ್ ಕ್ಯಾಡಿಲಾದ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತು. ಆದರೆ ಈ ಲಸಿಕೆಯ ಬೆಲೆ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. 'ಝೈಡಸ್ ಕ್ಯಾಡಿಲಾ ಲಸಿಕೆಯ ಬೆಲೆ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಶೀಘ್ರವೇ ಈ ಸಂಬಂಧ ನಿರ್ಧಾರಕ್ಕೆ ಬರಲಾಗುವುದು' ಎಂದು ನೀತಿ ಆರೋಗ್ಯದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ.

ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ ಎಂದು ಕರೆಸಿಕೊಂಡಿರುವ ಝೈಕೋವ್-ಡಿ ಮೂರು ಡೋಸ್‌ಗಳ ಲಸಿಕೆಯಾಗಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿನ ಕ್ಯಾಡಿಲಾ ಹೆಲ್ತ್ ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಝೈಕೋವ್‌-ಡಿ ಕೊರೊನಾ ಲಸಿಕೆ ದಕ್ಷತೆಯು ಶೇ.66.60ರಷ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಡೆಲ್ಟಾ ಪ್ರಭೇದದ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದಿದೆ.

ನೇರವಾಗಿ ಸೂಜಿ ಮೂಲಕ ಚುಚ್ಚುವ ಲಸಿಕೆಯಲ್ಲದೇ ಜೆಟ್ ಇಂಜೆಕ್ಟರ್ ಬಳಸಿ ದೇಹದ ಚರ್ಮದ ಕೋಶಗಳಿಗೆ ಚುಚ್ಚುವ ಔಷಧ ಇದಾಗಿರುವುದು ವಿಶೇಷವೆನಿಸಿದೆ. ಹೀಗಾಗಿ ಮಕ್ಕಳಿಗೆ ಸುಲಭವಾಗಿ ಈ ಲಸಿಕೆ ನೀಡಬಹುದಾಗಿದೆ.

ಕೊರೊನಾ ಚಿಕಿತ್ಸೆ; ಸಿಆರ್‌ಡಿಐ Umifenovir ಔಷಧ ಪ್ರಯೋಗ ಯಶಸ್ವಿಕೊರೊನಾ ಚಿಕಿತ್ಸೆ; ಸಿಆರ್‌ಡಿಐ Umifenovir ಔಷಧ ಪ್ರಯೋಗ ಯಶಸ್ವಿ

ದೇಶಾದ್ಯಂತ 50 ಕ್ಲಿನಿಕಲ್ ಟ್ರಯಲ್ ಸೈಟ್‌ಗಳಲ್ಲಿ ಕೋವಿಡ್ -19 ಎರಡನೇ ಅಲೆ ಆರಂಭವಾಗಿದ್ದ ಸಂದರ್ಭ ಈ ಲಸಿಕೆಯ ಪ್ರಯೋಗವನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಯಿತು ಹಾಗೂ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂಬುದನ್ನು ತೋರಿಸಿಕೊಟ್ಟಿತು ಎಂದು ZyCov-D ಕಂಪನಿ ಹೇಳಿದೆ. ZyCov-D ಅನ್ನು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

Zydus Cadila Covid Vaccines For 12-18 Years Likely Next Month

ಈ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಭಾರತದಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಗಿತ್ತು. ದೇಶಾದ್ಯಂತ 28,000 ಜನರನ್ನು ಬಳಸಿಕೊಂಡು ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. 12 ರಿಂದ 18 ವರ್ಷದ 1,000 ಮಕ್ಕಳನ್ನು ಲಸಿಕೆ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗಿದ್ದು, ಝೈಕೋವ್-ಡಿ ಲಸಿಕೆಯು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ರೋಗಲಕ್ಷಣಗಳಿಲ್ಲದ ಪಾಸಿಟಿವ್ ಕೇಸ್​ಗಳಲ್ಲಿ ಇದು ಶೇ. 100ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ. ಕಂಪನಿಯು ವಾರ್ಷಿಕವಾಗಿ 100 ದಶಲಕ್ಷದಿಂದ 120 ಮಿಲಿಯನ್ ಡೋಸ್‌ಗಳ ಝೈಕೋವ್-ಡಿ ಲಸಿಕೆ ಉತ್ಪಾದನೆ ಮಾಡಲು ಯೋಜನೆ ರೂಪಿಸಿದೆ.

ಲಸಿಕೆಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಕನಿಷ್ಠ ಮೂರು ತಿಂಗಳವರೆಗೆ 25 ಡಿಗ್ರಿ ತಾಪಮಾನದಲ್ಲಿ ಇರಬಲ್ಲದು. ಇದು ಲಸಿಕೆಗಳ ಸಾಗಾಟ ಹಾಗೂ ಸಂಗ್ರಹ ಕಾರ್ಯವನ್ನು ಸುಲಭಗೊಳಿಸುತ್ತದೆ ಎಂದು ಕಂಪನಿ ವಿವರಣೆ ನೀಡಿದೆ.

ಈ ಲಸಿಕೆಗಳು ಶೀಘ್ರ ಲಭ್ಯವಾದರೆ, ಇತರೆ ಆರೋಗ್ಯ ಸಮಸ್ಯೆಗಳುಳ್ಳ ಹನ್ನೆರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲು ಆದ್ಯತೆ ನೀಡಲಾಗುತ್ತದೆ ಎಂದು ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ತಂಡದ ಸರ್ಕಾರಿ ಸಲಹಾ ಸಮಿತಿ ತಿಳಿಸಿದೆ. 2022ರ ಜನವರಿ ಅಥವಾ ಫೆಬ್ರವರಿಯಲ್ಲಿ 12-18 ವರ್ಷದವರಿಗೆ ಲಸಿಕೆ ನೀಡುವ ಕಾರ್ಯ ಶುರುವಾಗಲಿದೆ ಎಂದು ತಿಳಿದುಬಂದಿದೆ.

ಭಾರತ ಸರ್ಕಾರವು ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಆರು ಲಸಿಕೆಗಳನ್ನು ಅಧಿಕೃತಗೊಳಿಸಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್, ಮಾಡೆರ್ನಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್‌ನ ಒಂದೇ ಡೋಸ್ ಲಸಿಕೆ. ಈಚೆಗೆ ಝೈಕೋವ್ ಡಿ ಲಸಿಕೆ ಸೇರ್ಪಡೆಯಾಗಿದೆ.

English summary
Cadila Healthcare will supply 10 million coronavirus vaccine doses in October, according to government sources
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X