ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ, ವೇತನ ಕಡಿತದ ಘೋಷಣೆ ಮಾಡಿದ ಝೊಮ್ಯಾಟೋ

|
Google Oneindia Kannada News

ನವದೆಹಲಿ, ಮೇ 15 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್ ಡೌನ್ ಫುಡ್ ಡೆಲಿವರಿ ಅಪ್ಲಿಕೇಶನ್ ಝೊಮ್ಯಾಟೋ ಮೇಲೆಯೂ ಪ್ರಭಾವ ಬೀರಿದೆ. ಉದ್ಯೋಗ ಕಡಿತ ಮಾಡುವುದಾಗಿ ಅದು ಘೋಷಣೆ ಮಾಡಿದೆ.

ಶುಕ್ರವಾರ ಝೆಮ್ಯಾಟೋ ಸಿಇಒ ದೀಪಿಂದರ್ ಗೋಯೆಲ್ ಶೇ 13ರಷ್ಟು ಸಿಬ್ಬಂದಿ ಕಡಿತ ಮಾಡುವುದಾಗಿ ಘೋಷಣೆ ಮಾಡಿದರು. ಜೂನ್‌ನಿಂದ ಮುಂದಿನ ಆರು ತಿಂಗಳ ಕಾಲ ವೇತನ ಕಡಿತ ಸಹ ಮಾಡಲಾಗುತ್ತದೆ ಎಂದು ಹೇಳಿದರು.

ಕೆಲಸದಿಂದ ಕಿತ್ತು ಹಾಕಿದ್ದು, ವೇತನ ಕಡಿತ; 2 ಸಾವಿರ ದೂರು ಕೆಲಸದಿಂದ ಕಿತ್ತು ಹಾಕಿದ್ದು, ವೇತನ ಕಡಿತ; 2 ಸಾವಿರ ದೂರು

ಝೆಮ್ಯಾಟೋನಲ್ಲಿ ಸುಮಾರು 600 ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಮತ್ತು ವೇತನ ಕಡಿತದ ಪ್ರಸ್ತಾವನೆ ಘೋಷಣೆ ಮಾಡಿದರು. ಹಿರಿಯ ಉದ್ಯೋಗಿಗಳಿಗೆ ಶೇ 50ರಷ್ಟು ವೇತನ ಕಡಿತವಾಗಲಿದೆ ಎಂದರು.

Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್? Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್?

Zomato Announces 13 Per Cent Of Lay OFF

ಸಮಯಕ್ಕೆ ತಕ್ಕಂತೆ ಬದಲಾಗಬೇಕಾದ ಅನಿವಾರ್ಯತೆ ಇದೆ. ಕಳೆದ ಎರಡು ತಿಂಗಳಿನಿಂದ ಉದ್ಯಮ ಹೇಗೆ ನಷ್ಟವನ್ನು ಎದುರಿಸುತ್ತಿದೆ ಎಂಬುದನ್ನು ವಿವರಿಸಿದ ದೀಪಿಂದರ್ ಗೋಯೆಲ್, ಬದಲಾವಣೆ ಅಗತ್ಯವಾಗಿದೆ ಎಂದು ತಿಳಿಸಿದರು.

ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ

ಉದ್ಯೋಗ ಕಳೆದುಕೊಳ್ಳಲಿರುವ ನೌಕರರ ಜೊತೆ ಝೂಮ್ ಕಾಲ್ ಮೂಲಕ ಕಂಪನಿ ಸಂಪರ್ಕದಲ್ಲಿ ಇರಲಿದೆ. ಅವರಿಗೆ ಬೇರೆ ಕೆಲಸ ಹುಡುಕಲು ಸಹಾಯವನ್ನು ಮಾಡಲಿದೆ ಎಂದು ಸಿಇಒ ವಿವರಿಸಿದ್ದಾರೆ. ಹಿರಿಯ ಉದ್ಯೋಗಿಗಳಿಗೆ ಮುಂದಿನ ಆರು ತಿಂಗಳು ಶೇ 50ರಷ್ಟು ವೇತನ ಕಡಿತವಾಗಲಿದೆ ಎಂದು ವಿವರಿಸಿದ್ದಾರೆ.

ಉದ್ಯೋಗ ಕಳೆದುಕೊಳ್ಳುವವರಿಗೆ ಕಂಪನಿ ನೀಡಿರುವ ಮೊಬೈಲ್, ಲ್ಯಾಪ್‌ ಟಾಪ್ ಜೊತೆಗೆ ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ. ಜೂನ್‌ನಿಂದ ಕಂಪನಿಯ ಎಲ್ಲಾ ಉದ್ಯೋಗಿಗಳ ವೇತನ ಕಡಿತ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಝೊಮ್ಯಾಟೋ ವಿಶ್ವದಾದ್ಯಂತ 150ಕ್ಕೂ ಅಧಿಕ ಕಚೇರಿಗಳನ್ನು ಹೊಂದಿದೆ. ಮನೆಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸುವ ಸುಳಿವನ್ನು ಸಹ ನೀಡಲಾಗಿದೆ.

English summary
Zomato announced around 13 per cent of lay off and salary cut up to 50 per cent across its workforce for six months starting from June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X