ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ನಂ. 1 ಆಗಲು ನೆರವು ನೀಡಿದ ಜಿಂಬಾಬ್ವೆǃ

|
Google Oneindia Kannada News

ಬೆಂಗಳೂರು, ಸೆ. 1 : 31 ವರ್ಷಗಳ ನಂತರ ಭಾನುವಾರ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಜಿಂಬಾಬ್ವೆ ನಂಬರ್‌ 1 ಸ್ಥಾನದಿಂದ ಕಾಂಗರೂಗಳನ್ನು ಕೆಳಗಿಸಿದೆ. ಇತ್ತ ಭಾರತ ಇಂಗ್ಲೆಂಡ್‌ ವಿರುದ್ಧದ ಉತ್ತಮ ಪ್ರದರ್ಶನಕ್ಕೆ ನಂ.1 ಸ್ಥಾನ ಅಲಂಕರಿಸಿದೆ.

ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಜಿಂಬಾಂಬ್ವೆ ನಾಯಕ ಚಿಗುಂಬರಾ ಅರ್ಧ ಶತಕ ಆಸ್ಟೇಲಿಯಾಕ್ಕೆ ಸೋಲು ತಂದಿಟ್ಟಿತು. ಸಂಘಟಿತ ಹೋರಾಟ ನಡೆಸಿದ ಜಿಂಬಾಬ್ವೆ ವಿಜಯದ ನಗೆ ಬೀರಿತು.

zimbabve

ಮೊದಲು ಬ್ಯಾಟಿಂಗ್‌ ಮಾಡಿ ನಿಗದಿತ 50 ಓವರ್‌ಗಳಲ್ಲಿ 209 ರನ್‌ ಗಳಿಸಿದ್ದ ಆಸ್ಟ್ರೇಲಿಯಾಕ್ಕೆ ಈ ಮೊತ್ತ ಮ್ಯಾಚ್‌ ಉಳಿಸಿಕೊಳ್ಳಲು ಸಾಕಾಗಲಿಲ್ಲ. 48 ಓವರ್‌ಗಳಲ್ಲೇ ಜಿಂಬಾಬ್ವೆ ಗೆಲುವಿನ ದಡ ಸೇರಿತು.

ಜಿಂಬಾಬ್ವೆ ಅಧ್ಯಕ್ಷ ಮುಗಾಂಬೆ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಆಸ್ಟ್ರೇಲಿಯಾ ಕೋಚ್‌ ಲೆಹಮೆನ್‌ ತಮ್ಮ ತಂಡದ ಆಟಗಾರರಿಗಿದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಆಸ್ಟ್ರೇಲಿಯಾ ಸೋಲು
ಇತ್ತ ಜಿಂಬಾಬ್ವೆ ಗೆಲ್ಲುತ್ತಿದ್ದಂತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಬಗೆಬಗೆಯ ಕಾಮೆಂಟ್‌ಗಳು ಹರಿದಾಡಿದವು. ಅವುಗಳ ಕೆಲ ಸ್ಯಾಂಪಲ್‌ ನಿಮಗಾಗಿ...

* ದೊಡ್ಡ ಸುದ್ದಿ: ಜಿಂಬಾಬ್ವೆ ವಿರುದ್ಧ ಸೋತು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ್ನು ಏಕಕಾಲಕ್ಕೆ ಸೋಲಿಸಿದ ಭಾರತ ಏಕದಿನ ಶ್ರೇಯಾಂಕದಲ್ಲಿ ನಂ.1.
* 11,406 ದಿನದ ಶಾಪವನ್ನು ಕೊನೆಯ ಎಸೆತಕ್ಕೆ ಸಿಡಿಸಿದ ಸಿಕ್ಸರ್‌ ತೊಡೆದು ಹಾಕಿತು.
* ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತು ಇಲ್ಲಿ ನಿಜವಾಗಿದೆ.
* ಅತ್ತ ಆಸ್ಟ್ರೇಲಿಯಾ ಸೋತರೆ ಇತ್ತ ಭಾರತಕ್ಕೆ ನಂ.1 ಪಟ್ಟ.
* ಜಿಂಬಾಬ್ವೆ ನೆರವಿನೊಂದಿಗೆ ಭಾರತಕ್ಕೆ ನಂ.1 ಪಟ್ಟ ಒಲಿಯಿತು.
* 1983 ನಂತರ ಆಸ್ಟ್ರೇಲಿಯಾ ಮಣಿಸಿದ್ದಕ್ಕೆ ನಿಮಗೆ ಅಭಿನಂದನೆ.
* ಆಫ್ರಿಕಾ ಖಂಡದ ಜನರಿಗೆ ಇಂಥ ಸಿಹಿಸುದ್ದಿ ಕೇಳಲು ಇಷ್ಟು ದಿನ ಬೇಕಾಯಿತು.
* ಕ್ರಿಕೆಟ್‌ಗೆ ಇದೊಂದು ವಿಶೇಷವಾದ ಜಯ.

English summary
Captain Elton Chigumbura hit an unbeaten half century as Zimbabwe defeated Australia for only the second time in a one-day international.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X