ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಮತ್ತೊಂದು ಸಮೀಕ್ಷೆ: ಭರ್ಜರಿ ಜಯದತ್ತ ಬಿಜೆಪಿ ಮೈತ್ರಿಕೂಟ

|
Google Oneindia Kannada News

ಪಾಟ್ನಾ, ನವದೆಹಲಿ ಸೆ 19: ಬಿಹಾರ ಅಸೆಂಬ್ಲಿಗೆ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೇ ವಿವಿಧ ವಾಹಿನಿ, ಸುದ್ದಿಸಂಸ್ಥೆಗಳು ಚುನಾವಣಾಪೂರ್ವ ಸಮೀಕ್ಷೆ ಪ್ರಕಟಿಸಲಾರಂಭಿಸಿದೆ.

ಇಂಡಿಯಾ ಟುಡೆ - ಸಿಸಿರೋ, ಎಬಿಪಿ ನ್ಯೂಸ್ - ನೀಲ್ಸನ್, ಇಂಡಿಯಾ ಟಿವಿ - ಸಿವೋಟರ್ ಈಗಾಗಲೇ ಒಂದು ಹಂತದ ತಮ್ಮ ಸಮೀಕ್ಷೆಯನ್ನು ಪ್ರಕಟಿಸಿದೆ. ಈಗ ಜೀ ಮೀಡಿಯಾ ಗ್ರೂಪ್ ಸರದಿ.

ಜೀ ಗ್ರೂಪ್ ಶುಕ್ರವಾರ (ಸೆ 18) ಪ್ರಕಟಿಸಿರುವ ಸಮೀಕ್ಷೆಯ ಫಲಿತಾಂಶ ಇತರ ಸುದ್ದಿಸಂಸ್ಥೆಗಳು ಪ್ರಕಟಿಸಿದ್ದ ಸಮೀಕ್ಷೆಗಿಂತ ವಿಭಿನ್ನವಾಗಿದೆ. (ಬಿಹಾರ ಸಮೀಕ್ಷೆ: ನಿತೀಶ್ ಗೆ ಮುಖಭಂಗ)

ಜೀ ಚುನಾವಣಾಪೂರ್ವ ಸಮೀಕ್ಷೆಯನ್ವಯ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ. ಅಲ್ಪಸಂಖ್ಯಾತರ ಒಲವು ಎನ್ಡಿಎ ಮೈತ್ರಿಕೂಟದತ್ತ ಹೆಚ್ಚಾಗುತ್ತಿರುವುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಜೊತೆಗೆ ಸಮೀಕ್ಷೆಯ ಪ್ರಕಾರ, ಯುವ ಸಮುದಾಯವು ಬಿಹಾರ ಚುನಾವಣೆಯಲ್ಲಿ ಮೋದಿ ನಾಯಕತ್ವದತ್ತ ಒಲವು ತೋರಲಿದೆ. ಬಿಹಾರದಲ್ಲಿ ಒಟ್ಟು 6.68 ಕೋಟಿ ಮತದಾರರಿದ್ದು, ಅದರಲ್ಲಿ 2.04 ಕೋಟಿ ಮತದಾರರು 18 ರಿಂದ 29 ವಯೋಮಿತಿಯವರು.

243 ಶಾಸಕರ ಬಲದ ಬಿಹಾರ ಅಸೆಂಬ್ಲಿಗೆ ಅಕ್ಟೋಬರ್ 12, 16, 28, ನವೆಂಬರ್ 1 ಮತ್ತು ಐದಕ್ಕೆ ಮತದಾನ ನಡೆಯಲಿದೆ, ಫಲಿತಾಂಶ ನವೆಂಬರ್ ಎಂಟರಂದು ಹೊರಬೀಳಲಿದೆ. (ಬಿಹಾರ ಸಮೀಕ್ಷೆ: ಜಿದ್ದಾಜಿದ್ದಿನ ಫೈಟ್)

ಜೀಗ್ರೂಪಿನ ಸಮೀಕ್ಷೆಯ ಇತರ ಅಂಶಗಳು ಸ್ಲೈಡಿನಲ್ಲಿ..

ಬಿಹಾರದಲ್ಲಿ ಯಾವ ಸರಕಾರ ಬರಬೇಕು

ಬಿಹಾರದಲ್ಲಿ ಯಾವ ಸರಕಾರ ಬರಬೇಕು

ಮುಂಬರುವ ಚುನಾವಣೆಯಲ್ಲಿ ಬಿಹಾರದಲ್ಲಿ ಯಾರ ಸರಕಾರ ಆಯ್ಕೆಯಾದರೆ ಉತ್ತಮ ಎನ್ನುವ ಸಮೀಕ್ಷೆಯಲ್ಲಿನ ಪ್ರಶ್ನೆಗೆ ಶೇ. 50.8 ಎನ್ಡಿಎ, ಶೇ. 42.5 ಮಹಾಮೈತ್ರಿಕೂಟ ಮತ್ತು ಇಬ್ಬರನ್ನು ಹೊರತಾಗಿ ಬೇರೆ ಸರಕಾರ ಇರಬೇಕೆಂದು ಶೆ. 6.7 ಜನ ಅಭಿಪ್ರಾಯ ಪಟ್ಟಿದ್ದಾರೆ.

ನಿರ್ಣಾಯಕ ಅಲ್ಪಸಂಖ್ಯಾತ ಮತಬ್ಯಾಂಕ್

ನಿರ್ಣಾಯಕ ಅಲ್ಪಸಂಖ್ಯಾತ ಮತಬ್ಯಾಂಕ್

ಕಳೆದ ಚುನಾವಣೆಗೆ ಹೋಲಿಸಿದರೆ ಅಲ್ಪಸಂಖ್ಯಾತರು ಈ ಬಾರಿ ಎನ್ದಿಎ ಮೈತ್ರಿಕೂಟದತ್ತ ಹೆಚ್ಚಿನ ಒಲವು ತೋರುತ್ತಿರುವುದು ಬಿಜೆಪಿಗೆ ಅನುಕೂಲವಾಗಲಿದೆ. ಶೇ. 41.2 ಎನ್ಡಿಎಗೆ ಶೇ. 52.4 ಮಹಾಮೈತ್ರಿಕೂಟದತ್ತ ಒಲವು ತೋರಿದ್ದಾರೆ.

ಜೀ ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಲಭಿಸಲಿದೆ?

ಜೀ ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಲಭಿಸಲಿದೆ?

ಎನ್ಡಿಎ - 140
ಮಹಾಮೈತ್ರಿಕೂಟ - 70
ತುರುಸಿನ ಸ್ಪರ್ಧೆಯಿರುವ ಕ್ಷೇತ್ರಗಳು - 33

ಹಿಂದೂ ಮತದಾರರು

ಹಿಂದೂ ಮತದಾರರು

ಹಿಂದೂ ಮತದಾರರು ಎನ್ಡಿಎ ಕೂಟದತ್ತ ತನ್ನ ಒಲವು ತೋರಿದ್ದಾರೆ. ಶೇ. 52.6 ಎನ್ಡಿಎ ಮೈತ್ರಿಕೂಟಕ್ಕೆ, ಶೇ. 40.8 ಮಹಾಮೈತ್ರಿಕೂಟಕ್ಕೆ ಮತ್ತು ಶೇ. 6ರಷ್ಟು ಇತರರತ್ತ ಹಿಂದೂ ಮತದಾರ ಒಲವು ತೋರಿದ್ದಾನೆ.

ಮಹಿಳಾ ಮತದಾರರ ಒಲವು ಎತ್ತ?

ಮಹಿಳಾ ಮತದಾರರ ಒಲವು ಎತ್ತ?

ಎನ್ಡಿಎ - ಶೇ. 52
ಮಹಾಮೈತ್ರಿಕೂಟ - ಶೇ. 40.5
ಇತರರು - ಶೇ. 7.5

English summary
Zee Media Group Poll survey predicts massive win for Narendra Modi-led NDA in Bihar elections 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X