• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರವಾದಿಯನ್ನು ನಿಂದಿಸುವ ಬಿಜೆಪಿ ಭಕ್ತರನ್ನು ಜೈಲಿಗೆ ಹಾಕಿ: ಮುಸ್ಲಿಂ ದೇಶಗಳಿಗೆ ಝಕೀರ್ ನಾಯ್ಕ್ ಕರೆ

|

ನವದೆಹಲಿ, ಅಕ್ಟೋಬರ್ 23: ಇಸ್ಲಾಂ ಅಥವಾ ಪ್ರವಾದಿಯನ್ನು ಅವಮಾನಿಸಿದ್ದರೆ ಮುಸ್ಲಿಮೇತರ ಭಾರತೀಯರು ದೇಶಕ್ಕೆ ಬರುತ್ತಿದ್ದಂತೆಯೇ ಅವರನ್ನು ಜೈಲಿಗೆ ಹಾಕುವಂತೆ ಗಲ್ಫ್ ದೇಶಗಳಿಗೆ ವಿವಾದಾತ್ಮಕ ಇಸ್ಲಾಂ ಪ್ರಚಾರಕ ಝಕೀರ್ ನಾಯ್ಕ್ ಆಗ್ರಹಿಸಿದ್ದಾನೆ.

ಹಾಗೆಯೇ ಅಂತಹ ಭಾರತೀಯರ ಬಗ್ಗೆ ಡೇಟಾಬೇಸ್ ತಯಾರಿಸಬೇಕು. ಇದರಿಂದ ಅವರು ತಮ್ಮ ದೇಶಕ್ಕೆ ಭೇಟಿ ನೀಡುತ್ತಿದ್ದಂತೆಯೇ ಅವರ ಮೇಲೆ ಪ್ರಕರಣ ದಾಖಲಿಸಬಹುದು ಎಂದು ಹೇಳಿದ್ದಾನೆ..

ಮುಸ್ಲಿಮರಿಗೆ ಕೇರಳ ಸೂಕ್ತ ರಾಜ್ಯ: ಇಸ್ಲಾಂ ಪ್ರಚಾರಕ ಝಾಕೀರ್ ನಾಯ್ಕ್

ಝಕೀರ್ ನಾಯ್ಕ್ ಭಾಷಣದ ವಿಡಿಯೋವೊಂದು ವೈರಲ್ ಆಗಿದ್ದು, ಭಾರತದಲ್ಲಿ ನಿಂದನೆ ಹಾಗೂ ಅವಹೇಳನಾಕಾರಿ ಹೇಳಿಕೆಗಳನ್ನು ನೀಡುವ ಮುಸ್ಲಿಮೇತರರ ವಿವರಗಳನ್ನು ಸಂಗ್ರಹಿಸಿ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲು ಡೇಟಾಬೇಸ್ ತಯಾರಿಸಬೇಕು ಎಂದು ಅವರು ಇಸ್ಲಾಮಿಕ್ ದೇಶಗಳಿಗೆ ಸೂಚಿಸಿರುವುದು ದಾಖಲಾಗಿದೆ.

ಮುಂದಿನ ಸಲ ಅವರು ಕುವೈತ್, ಸೌದಿ ಅರೇಬಿಯಾ, ದುಬೈ ಅಥವಾ ಇಂಡೋನೇಷ್ಯಾ ಇರಲಿ, ಯಾವುದೇ ಗಲ್ಫ್ ದೇಶಕ್ಕೆ ಬಂದಾಗ ಅವರು ಇಸ್ಲಾಂಅನ್ನು ನಿಂದಿಸಿದ್ದಾರೆಯೇ ಅಥವಾ ಪ್ರವಾದಿಯನ್ನು ಅವಹೇಳನೆ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಂಬಿಯ ಹಿಂದೆ ಕೂರಿಸಬೇಕು ಎಂದು ಝಕೀರ್ ನಾಯ್ಕ್ ಸಲಹೆ ನೀಡಿದ್ದಾನೆ.

ಆರ್ಟಿಕಲ್ 370 ಬೆಂಬಲಿಸಿದರೆ ಕೇಸು ಕೈಬಿಡುವುದಾಗಿ ಆಮಿಷ: ಝಕೀರ್ ನಾಯ್ಕ್‌

'ನಾವು ಡೇಟಾಬೇಸ್ ತಯಾರಿಸಿದ್ದೇವೆ ಎಂದು ಬಹಿರಂಗಪಡಿಸಿ. ಆದರೆ ಅವರ ಹೆಸರನ್ನು ಬಹಿರಂಗಪಡಿಸಬೇಡಿ. ಅವರು ಬಂದ ಕೂಡಲೇ ಬಂಧಿಸಿ. ಕಾನೂನಿನ ನ್ಯಾಯಾಲಯಕ್ಕೆ ಕರೆದೊಯ್ದು ಶಿಕ್ಷಿಸಿ. ನನ್ನನ್ನು ನಂಬಿ, ಇಸ್ಲಾಂ ಹಾಗೂ ಮುಸ್ಲಿಮರ ವಿರುದ್ಧ ನಂಜು ಹರಡುತ್ತಿರುವ ಬಿಜೆಪಿಯ ಭಕ್ತರಾಗಿರುವ ಅನೇಕ ಜನರು ಭಯಪಡುತ್ತಾರೆ' ಎಂದು ಝಕೀರ್ ಹೇಳಿದ್ದಾನೆ.

English summary
Controversial Islamic preacher Zakir Naik has instigated the gulf countries to put non-Muslim Indians in jail if they insult Islam or Prophet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X