ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಮಂದಿ ಲಷ್ಕರ್ ಉಗ್ರರ ಸದೆಬಡಿದ ಯೋಧರು

By Mahesh
|
Google Oneindia Kannada News

ಶ್ರೀನಗರ, ನವೆಂಬರ್ 19: 2008ರ ಮುಂಬೈ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಝಕಿರ್-ಉಲ್​-ರೆಹಮಾನ್ ಲಖ್ವಿಯ ಸೋದರಳಿಯ ಸೇರಿದಂತೆ 6 ಮಂದಿ ಲಷ್ಕರ್ ಉಗ್ರರನ್ನು ಭಾರತೀಯ ವಾಯುಸೇನೆ ಯೋಧರು ಸದೆಬಡಿದಿದ್ದಾರೆ.

ಇನ್ನು ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಗರುಡ ಕಮಾಂಡೊ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದು, ಮತ್ತೊಬ್ಬ ಸೈನಿಕನಿಗೆ ಗಾಯವಾಗಿದೆ.

26/11 mastermind Zaki-ur Rehman Lakhvi’s nephew, 5 LeT militants killed in J-K

ಜಮ್ಮು-ಕಾಶ್ಮೀರದ ಬಂಡಿಪೋರ ಗಡಿಯಲ್ಲಿ ಭಾರತೀಯ ಸೇನೆ 6 ಮಂದಿ ಉಗ್ರರನ್ನು ಸದೆಬಡಿದಿದೆ. ಹತ್ಯೆಯಾದ ಉಗ್ರರು ಲಷ್ಕರ್-ಇ-ತೊಯ್ಬಾ ಮತ್ತು ಜೈಷ್- ಇ- ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದು ತಿಳಿದು ಬಂದಿದೆ.

ಮುಂಬೈ ದಾಳಿಯ ಸಂಚುಕೋರ ಝಕಿರ್-ಉಲ್​-ರೆಹಮಾನ್ ಲಖ್ವಿಯ ಸೋದರಳಿಯ ಒವೈದ್ ಹತ್ಯೆಯಾಗಿದ್ದಾನೆ. ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಜಿನ್​ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು.

English summary
Security forces shot dead six Lashkar-e-Taiba (LeT) militants, including the nephew of a Pakistan-based terror mastermind accused of planning the 2008 Mumbai attacks, in north Kashmir on Saturday, the state’s top police official and the army said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X