ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಫ್ ಪೈಲಟ್ ಅಭಿನಂದನ್ ಗೆ ಸಂಬಂಧಿಸಿದ 11 ವಿಡಿಯೋ ಬಂದ್

|
Google Oneindia Kannada News

ಬೆಂಗಳೂರು, ಮಾರ್ಚ್ 01: ಭಾರತೀಯ ವಾಯುಸೇನೆ ವಿಂಗ್ ಕಮಾಂಡರ್, ಪೈಲಟ್ ಅಭಿನಂದನ್ ವರ್ತಮಾನ್ ಅವರಿಗೆ ಸಂಬಂಧಿಸಿದ 11 ಆಕ್ಷೇಪಾರ್ಹ ವಿಡಿಯೋಗಳನ್ನು ಗೂಗಲ್ ಸ್ವಾಮ್ಯದ ಯೂಟ್ಯೂಬಿನಿಂದ ತೆಗೆದು ಹಾಕಲಾಗಿದೆ.

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ಈ ವಿಡಿಯೋಗಳನ್ನು ತೆಗೆದು ಹಾಕುವಂತೆ ಮನವಿ ಬಂದಿತ್ತು. ಆಯಾ ನೆಲದ ಕಾನೂನಾತ್ಮಕ ವಿಷಯಗಳಿಗೆ ನಾವು ಬೆಲೆ ನೀಡುತ್ತೇವೆ. ತಕ್ಷಣವೇ ಮನವಿಯನ್ನು ಪುರಸ್ಕರಿಸಿ, ಆಕ್ಷೇಪಾರ್ಹ ವಿಡಿಯೋಗಳನ್ನು ತೆಗೆದು ಹಾಕಲಾಗಿದೆ ಎಂದು ಗೂಗಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಅಭಿನಂದನ್ಗೆ ಸಂಬಂಧಿಸಿದ ವಿಡಿಯೋ ಡಿಲೀಟ್ ಮಾಡಲು ಯೂಟ್ಯೂಬ್‌ಗೆ ಮನವಿಅಭಿನಂದನ್ಗೆ ಸಂಬಂಧಿಸಿದ ವಿಡಿಯೋ ಡಿಲೀಟ್ ಮಾಡಲು ಯೂಟ್ಯೂಬ್‌ಗೆ ಮನವಿ

ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದುರುಳಿಸುವ ಭರದಲ್ಲಿ ಮಿಗ್ 21ರಲ್ಲಿದ್ದ ಪೈಲಟ್ ಅಭಿನಂದನ್ ಅವರು ಪಾಕ್ ಗಡಿ ಪ್ರವೇಶಿಸಿದ್ದಾರೆ. ಯುದ್ಧ ವಿಮಾನದಿಂದ ಪ್ಯಾರಚ್ಯೂಟ್ ಬಳಸಿ ನೆಲಕ್ಕೆ ಬಿದ್ದ ಅಭಿನಂದನ್ ಅವರನ್ನು ಪಾಕಿಸ್ತಾನಿ ಸೇನೆ ಸೆರೆ ಹಿಡಿದಿತ್ತು.

YouTube removes 11 videos of Abhinandan

ಅಭಿನಂದನ್ ಅವರು ಸೆರೆ ಸಿಕ್ಕಾಗ ಅವರ ಮೇಲೆ ಹಲ್ಲೆಯಾಗಿದೆ. ಮುಖ ರಕ್ತಮಯವಾಗಿದೆ. ಪಾಕ್ ಸೈನಿಕರು ಹಲ್ಲೆ ಮಾಡಿದ್ದಾರೆ. ಕಣ್ಣುಪಟ್ಟಿ ಕಟ್ಟಿ ಹಿಂಸೆ ನೀಡಿದ್ದಾರೆ ಎಂಬ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬುಧವಾರದಿಂದಲೆ ಹರಿದಾಡುತ್ತಿದ್ದವು. ಜಿನೀವಾ ಒಪ್ಪಂದ ಹಾಗೂ ಅಂತಾರಾಷ್ಟ್ರೀಯ ಮಾನವತಾವಾದ ಕಾನೂನಿನ ಪ್ರಕಾರ ಈ ರೀತಿ ಯಾವುದೇ ದೇಶದ ಯುದ್ಧ ಕೈದಿಯ ಕುರಿತ ಮಾಹಿತಿ, ಚಿತ್ರ ಹಾಗೂ ವಿಡಿಯೋಗಳನ್ನು ಯಾವ ದೇಶ ಕೂಡಾ ಪ್ರಸಾರ ಮಾಡುವಂತಿಲ್ಲ.

ಸ್ವಾಗತ 'ಸಿಂಗಂ' ವಿಂಗ್ ಕಮಾಂಡರ್ ಅಭಿನಂದನ್, ನೀವೇ ನಿಜವಾದ ಹೀರೋ!ಸ್ವಾಗತ 'ಸಿಂಗಂ' ವಿಂಗ್ ಕಮಾಂಡರ್ ಅಭಿನಂದನ್, ನೀವೇ ನಿಜವಾದ ಹೀರೋ!

ಜಾಗತಿಕ ಮಟ್ಟದಲ್ಲಿ ಭಾರಿ ಒತ್ತಡ ಕಂಡು ಬಂದಿದ್ದರಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಜಂಟಿ ಸಂಸತ್ ಅಧಿವೇಶನದಲ್ಲಿ, ಐಎಎಫ್ ಪೈಲಟ್ ಅಭಿನಂದನ್ ಅವರನ್ನು ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

English summary
The IT Ministry has asked Google owned YouTube to remove 11 video links pertaining to Wing Commander Abhinandan Varthaman, who was captured by Pakistan during an air combat on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X