ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿ ವಿರುದ್ಧ ಅನುರಾಗ್ ಠಾಕೂರ್ ಎಚ್ಚರಿಕೆ

|
Google Oneindia Kannada News

ನವ ದೆಹಲಿ ಜನವರಿ 20: ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡುವವರ ವಿರುದ್ಧ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಎಚ್ಚರಿಕೆ ನೀಡಿದ್ದಾರೆ. ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡುತ್ತಿದ್ದ 20 ಯೂಟ್ಯೂಬ್ ಚಾನೆಲ್‌ಗಳು ಮತ್ತು ಎರಡು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ಕೆಲವು ದಿನಗಳ ನಂತರ ಅನುರಾಗ್ ಠಾಕೂರ್ ಬುಧವಾರ ದೇಶದ ವಿರುದ್ಧ ಪಿತೂರಿ ಮಾಡುವವರ ವಿರುದ್ಧ ಸರ್ಕಾರ ಕ್ರಮವನ್ನು ಮುಂದುವರೆಸುತ್ತದೆ ಎಂದು ಎಚ್ಚರಿಸಿದ್ದಾರೆ.

"ನಾನು ಅವರ ವಿರುದ್ಧ ಕ್ರಮಕ್ಕೆ ಆದೇಶ ನೀಡಿದ್ದೇನೆ. ಪ್ರಪಂಚದಾದ್ಯಂತ ಅನೇಕ ದೊಡ್ಡ ದೇಶಗಳು ಇದನ್ನು ಅರಿತುಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಯೂಟ್ಯೂಬ್ ಕೂಡ ಮುಂದೆ ಬಂದು ಅವರನ್ನು ನಿರ್ಬಂಧಿಸಲು ಕ್ರಮ ಕೈಗೊಂಡಿದೆ"ಎಂದು ಠಾಕೂರ್ ಸುದ್ದಿಗಾರರಿಗೆ ಈ ವಿಷಯದ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವಾಗ ಹೇಳಿದರು. "ಭವಿಷ್ಯದಲ್ಲಿ, ಭಾರತದ ವಿರುದ್ಧ ಪಿತೂರಿ ನಡೆಸುವುದು, ಸುಳ್ಳುಗಳನ್ನು ಹರಡುವುದು ಮತ್ತು ಸಮಾಜವನ್ನು ವಿಭಜಿಸುವಂತಹ ಯಾವುದೇ ಖಾತೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಸಚಿವರು ಪ್ರತಿಪಾದಿಸಿದರು.

ಭಾರತ ವಿರೋಧಿ ಪ್ರಚಾರ

ಭಾರತ ವಿರೋಧಿ ಪ್ರಚಾರ

ಈ 20 ಯೂಟ್ಯೂಬ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ "ಸಂಯೋಜಿತ ತಪ್ಪು ಮಾಹಿತಿ ನೆಟ್‌ವರ್ಕ್" ಗೆ ಸೇರಿವೆ ಮತ್ತು ಭಾರತಕ್ಕೆ ಸಂಬಂಧಿಸಿದ ವಿವಿಧ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡುತ್ತಿವೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿವೆ. "ಕಾಶ್ಮೀರ, ಭಾರತೀಯ ಸೇನೆ, ಭಾರತದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳು, ರಾಮಮಂದಿರ, ಜನರಲ್ ಬಿಪಿನ್ ರಾವತ್ ಮುಂತಾದ ವಿಷಯಗಳ ಕುರಿತು ಸಂಘಟಿತ ರೀತಿಯಲ್ಲಿ ವಿಭಜಿಸುವ ವಿಷಯವನ್ನು ಪೋಸ್ಟ್ ಮಾಡಲು ಚಾನೆಲ್‌ಗಳನ್ನು ಬಳಸಲಾಗಿದೆ" ಎಂದು ಅದು ಹೇಳಿದೆ.

ಎರಡು ವೆಬ್‌ಸೈಟ್‌ಗಳ ನಿರ್ಬಂಧ

ಎರಡು ವೆಬ್‌ಸೈಟ್‌ಗಳ ನಿರ್ಬಂಧ

ಈ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಸಂಗತಿಗಳು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಬಹಳ ಸೂಕ್ಷ್ಮವಾಗಿವೆ ಮತ್ತು ವಾಸ್ತವಾಂಶಗಳಿಂದ ದೂರ ಇವೆ ಎಂದು ಸರ್ಕಾರ ಹೇಳಿದೆ. ಗುಪ್ತಚರ ಸಂಸ್ಥೆಗಳ ನಿಕಟ ಸಂಪರ್ಕದೊಂದಿಗೆ ಯೂಟ್ಯೂಬ್ ಚಾನೆಲ್‌ಗಳು ಹಾಗೂ ವೆಬ್‌ಸೈಟ್‌ ನಿರ್ಬಂಧಿಸುವ ನಿರ್ಧಾರವನ್ನು ಸಚಿವಾಲಯ ತೆಗೆದುಕೊಂಡಿದೆ. ಪಾಕಿಸ್ತಾನದಿಂದ ಸುಳ್ಳು ಮಾಹಿತಿಗಳನ್ನು ಹರಡುವ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಭಾರತೀಯ ಸೇನೆ, ರಾಮ ಮಂದಿರ, ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ಭಾರತಕ್ಕೆ ಸಂಬಂಧಿಸಿದ ಅನೇಕ ಸೂಕ್ಷ್ಮ ಸಂಗತಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಬಿತ್ತರಿಸಲಾಗುತ್ತಿತ್ತು ಎಂದು ಸಚಿವಾಲಯ ತಿಳಿಸಿದೆ.

 35 ಲಕ್ಷಕ್ಕೂ ಅಧಿಕ ಚಂದಾದಾರರು

35 ಲಕ್ಷಕ್ಕೂ ಅಧಿಕ ಚಂದಾದಾರರು

ಪಾಕಿಸ್ತಾನ ಮೂಲದ ನಯಾ ಪಾಕಿಸ್ತಾನ್ ಗ್ರೂಪ್‌ನ (ಎನ್‌ಪಿಜಿ) ಯೂಟ್ಯೂಬ್ ಚಾನೆಲ್‌ಗಳ ಜಾಲ ಹಾಗೂ ಇತರೆ ಕೆಲವು ಸ್ವತಂತ್ರ ಚಾನೆಲ್‌ಗಳು ಒಟ್ಟಾರೆ 35 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದು, ಈ ಸುಳ್ಳು ಮಾಹಿತಿ ಹರಡುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವು. ನಯಾ ಪಾಕಿಸ್ತಾನ ಗ್ರೂಪ್‌ನ ಯೂಟ್ಯೂಬ್ ಚಾನೆಲ್‌ಗಳು ಪಾಕಿಸ್ತಾನ ಸುದ್ದಿ ವಾಹಿನಿಗಳ ನಿರೂಪಕರಿಂದ ನಡೆಸಲ್ಪಡುತ್ತಿದ್ದವು ಎಂದು ಹೇಳಿದೆ.

ನಿರ್ಬಂಧಕ್ಕೆ ಒಳಗಾದ ತಾಣಗಳು

ನಿರ್ಬಂಧಕ್ಕೆ ಒಳಗಾದ ತಾಣಗಳು

ದಿ ಪಂಚ್ ಲೈನ್, ಇಂಟರ್‌ನ್ಯಾಷನಲ್ ವೆಬ್ ನ್ಯೂಸ್, ಖಲ್ಸಾ ಟಿವಿ, ದಿ ನೇಕೆಡ್ ಟ್ರುಥ್, 48 ನ್ಯೂಸ್, ಫಿಕ್ಷನಲ್, ಹಿಸ್ಟಾರಿಕಲ್ ಫ್ಯಾಕ್ಟ್ಸ್, ಪಂಜಾಬ್ ವೈರಲ್, ನಯಾ ಪಾಕಿಸ್ತಾನ ಗ್ಲೋಬಲ್, ಕವರ್ ಸ್ಟೋರಿ, ಗೋ ಗ್ಲೋಬಲ್, ಇ ಕಾಮರ್ಸ್, ಜುನೈದ್ ಹಲೀಮ್ ಅಫಿಷಿಯಲ್, ತಯ್ಯಬ್ ಹನೀಫ್, ಜೈನ್ ಅಲಿ ಅಫಿಷಿಯಲ್, ಮೊಹ್ಸಿನ್ ರಜಪೂತ್, ಅಫಿಷಿಯಲ್, ಕನೀಜ್ ಫಾತಿಮಾ, ಸದಾಫ್ ದುರಾನಿ, ಮಿಯಾನ್ ಇಮ್ರಾನ್, ಅಹ್ಮದ್, ನಜಾಮ್ ಉಲ್ ಹಸನ್, ಬಾಜ್ವಾ ಮತ್ತು ನ್ಯೂಸ್ 24 ನಿರ್ಬಂಧಕ್ಕೆ ಒಳಗಾದ ತಾಣಗಳಾಗಿವೆ.

English summary
Days after 20 YouTube channels and two websites were blocked for spreading anti-India propaganda and fake news, Information and Broadcasting Minister Anurag Thakur on Wednesday warned that the government will continue to take such action against those "hatching conspiracy” against the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X