• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಂಗ್ ಆರ್ಟಿಸ್ಟ್ 2020: ರಾಷ್ಟ್ರಮಟ್ಟದ ಪ್ರತಿಭಾ ಸ್ಪರ್ಧೆಗೆ ಅರ್ಜಿಗಳ ಆಹ್ವಾನ

|

ಬೆಂಗಳೂರು, ಡಿಸೆಂಬರ್ 11: ಯಂಗ್ ಆರ್ಟಿಸ್ಟ್ 2020, ರಾಷ್ಟ್ರಮಟ್ಟದ ಸಂಗೀತ ಮತ್ತು ನೃತ್ಯದ ಪ್ರತಿಭಾ ಸ್ಪರ್ಧೆಯು ಭಾರತದಾದ್ಯಂತ ಶಾಲಾ ಮಕ್ಕಳನ್ನು ಶಾಸ್ತ್ರೀಯ ಮತ್ತು ಸಮಕಾಲೀನ ಕಲೆಗಳಲ್ಲಿ ವಿವಿಧ ಪ್ರಕಾರಗಳು ಮತ್ತು ಅಭಿವ್ಯಕ್ತಿಗಳನ್ನು ಅನುಸರಿಸಲು ರೂಪಿಸಲಾಗಿದೆ.

ಭಾಗವಹಿಸುವವರು ಉದ್ಯಮದ ಖ್ಯಾತನಾಮರಾದ ಅಮ್ಜದ್ ಅಲಿ ಖಾನ್, ಶೋವಾನಾ ನಾರಾಯಣ್, ಅರುಣಾ ಸಾಯಿರಾಮ್, ಟೆರೆನ್ಸ್ ಲೆವಿಸ್ ಮತ್ತು ಶಾಲ್ಮಲಿ ಖೋಲ್ಗಡೆ ಮುಂತಾದ ಕಲಾವಿದರಿಂದ ಮಾರ್ಗದರ್ಶನ ಪಡೆಯುವ ಅವಕಾಶ ಪಡೆಯುತ್ತಾರೆ. ಈ ವೇದಿಕೆಯು 20 ವಿಭಿನ್ನ ವಿಭಾಗಗಳಲ್ಲಿ ಫೈನಲಿಸ್ಟ್ ಗಳಿಗೆ 100 ಶಿಷ್ಯವೇತನಗಳನ್ನು ಪ್ರದಾನ ಮಾಡುವ ಮೂಲಕ ಅವರ ಕಲಿಕೆ ಮತ್ತು ಪ್ರಗತಿ ಸಾಧಿಸಲು ಯುವ ಪ್ರತಿಭೆಗಳಿಗೆ ನೆರವಾಗುತ್ತಾರೆ. ಇದು ಸಮಾನ ಮನಸ್ಕ ಕಲಾವಿದರ ಸಮುದಾಯ ನಿರ್ಮಿಸುವ ಗುರಿ ಹೊಂದಿದ್ದು ಭಾರತದಲ್ಲಿ ಕಲಾ ವಿದ್ಯಾರ್ಥಿಗಳಲ್ಲಿ ಕಲಾ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸಲಿದೆ.

ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್, ''ಶಾಸ್ತ್ರೀಯ, ಜಾನಪದ ಅಥವಾ ಚಲನಚಿತ್ರ ಸಂಗೀತವಾಗಿರಲಿ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮುಂದುವರಿಸಲು ನಮಗೆ ಯುವ, ಬದ್ಧತೆ ಹಾಗೂ ಅರ್ಪಣಾ ಮನೋಭಾವದ ಯುವ ಸಂಗೀತಗಾರರು ಅಗತ್ಯವಿದೆ" ಎಂದರು. ''ಯುವ ಕಲಾವಿದರೊಂದಿಗೆ ಸಹಯೋಗ ಹೊಂದಬೇಕು ಹಾಗೂ ಅವರೊಂದಿಗೆ ನನ್ನ ಅನುಭವ ಹಂಚಿಕೊಳ್ಳಬೇಕು ಎನ್ನುವುದು ಸದಾ ನನ್ನ ಕನಸಾಗಿತ್ತು ಮತ್ತು ಯಂಗ್ ಆರ್ಟಿಸ್ಟ್ 2020 ನನಗೆ ಈ ಕನಸು ನನಸಾಗಿಸಲು ನೆರವಾಗಿದೆ'' ಎಂದರು.

ಎಲ್ಲಾ ಬಗೆಯ ನೃತ್ಯಪ್ರಕಾರಕ್ಕೂ ವೇದಿಕೆ

ಎಲ್ಲಾ ಬಗೆಯ ನೃತ್ಯಪ್ರಕಾರಕ್ಕೂ ವೇದಿಕೆ

20 ವಿಭಾಗಗಳನ್ನು ಭಾರತೀಯ ಶಾಸ್ತ್ರೀಯ ವಿಭಾಗದಲ್ಲಿ ಕರ್ನಾಟಕ ಮತ್ತು ಹಿಂದೂಸ್ಥಾನಿ ಗಾಯನ, ತಬಲಾ, ಮೃದಂಗಂ, ಕೊಳಲು, ಸಿತಾರ್ ಮತ್ತು ಸರೋದ್, ವಯೊಲಿನ್, ಭರತನಾಟ್ಯಂ, ಒಡಿಸ್ಸಿ ಮತ್ತು ಕಥಕ್ ಎಂದು ವಿಂಗಡಿಸಲಾಗಿದೆ ಮತ್ತು ಕಾಂಟೆಂಪೊರರಿ ವಿಭಾಗದಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಗಾಯನ, ಪಿಯಾನೊ ಮತ್ತು ಕೀಬೋರ್ಡ್, ಗಿಟಾರ್, ಡ್ರಮ್ಸ್, ವೆಸ್ಟ್ರನ್ ವಯೊಲಿನ್, ಬ್ಯಾಲೆ, ಹಿಪ್-ಹಾಪ್ ಮತ್ತು ಬಾಲಿವುಡ್ ಹಾಗೂ ಸಮಕಾಲೀನ ನೃತ್ಯ ಒಳಗೊಂಡಿದೆ.

ಯಂಗ್ ಆರ್ಟಿಸ್ಟ್ 2020ರ ಮಾದರಿಯಲ್ಲಿ ಪ್ರಾಥಮಿಕ ಆನ್‍ಲೈನ್ ಆಡಿಷನ್ ಇದ್ದು ಇದರಲ್ಲಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ಅವರ ವಿಡಿಯೋಗಳನ್ನು ಈ ಪ್ಲಾಟ್‍ಫಾರಂನಲ್ಲಿ ಅಪ್‍ಲೋಡ್ ಮಾಡಬಹುದು, ನಂತರ ಸುಧಾರಿತ ಥೀಮ್-ಆಧರಿತ ಸುತ್ತು ಇರುತ್ತದೆ. ಗ್ರಾಡ್ ಯಂಗ್ ಆರ್ಟಿಸ್ಟ್ ಫೆಸ್ಟಿವಲ್ ಆಗಸ್ಟ್ 2020ರಂದು ಬೆಂಗಳೂರಿನಲ್ಲಿ ನಡೆಯಲಿದ್ದು ಇದರಲ್ಲಿ ಖ್ಯಾತನಾಮ ಕಲಾವಿದ ಮಾರ್ಗದರ್ಶಕರು ಮತ್ತು ತೀರ್ಪುಗಾರರ ಉಪಸ್ಥಿತಿಯಲ್ಲಿ 100 ಯುವ ಕಲಾವಿದರ ಸಂಭ್ರಮವನ್ನು ಕಾಣಲಿದೆ.

ಖ್ಯಾತ ಗಾಯಕಿ ಶಾಮಲಿ ಖೋಲ್ಗಡೆ

ಖ್ಯಾತ ಗಾಯಕಿ ಶಾಮಲಿ ಖೋಲ್ಗಡೆ

ಖ್ಯಾತ ಗಾಯಕಿ ಶಾಮಲಿ ಖೋಲ್ಗಡೆ, ''ಯಂಗ್ ಆರ್ಟಿಸ್ಟ್ ರೀತಿಯ ವೇದಿಕೆಗಳು ಅಗತ್ಯವಾಗಿದ್ದು ಇದರಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು. ಮಕ್ಕಳಿಗೆ ಸಾಧನೆಯ ಭಾವನೆ ಮೂಡಿಸುವುದು ಮುಖ್ಯ ಅದು ಅವರನ್ನು ಮತ್ತಷ್ಟು ಶ್ರಮ ವಹಿಸಲು ಮತ್ತು ಅವರ ಕೌಶಲ್ಯವನ್ನು ಉತ್ತಮಪಡಿಸಿಕೊಳ್ಳಲು ಉತ್ತೇಜಿಸುತ್ತದೆ''ಎಂದರು.

ಉದ್ಯಮದ ಪ್ರಮುಖರಾದ ರುಕ್ಮಿಣಿ ವಿಜಯ್‍ಕುಮಾರ್, ಅಶ್ವತ್ಥ್ ನಾರಾಯಣ್, ಗುರುಮೂರ್ತಿ ವೈದ್ಯ, ಕೌಶಿಕ್ ಐತಾಳ್, ನಿಖಿತಾ ಗಾಂಧಿ, ಸಾಗರ್ ಬೋರಾ, ಲಿಪ್ಸಾ ಆಚಾರ್ಯ ಅವರಲ್ಲಿ ಕೆಲವರಾಗಿದ್ದು ಮಕ್ಕಳಿಗೆ ಶ್ರೇಷ್ಠತೆಯತ್ತ ಅವರ ಪ್ರಯಾಣದಲ್ಲಿ ನೆರವಾಗಲಿದ್ದಾರೆ. ಮಾರ್ಗದರ್ಶಕರು ತಮ್ಮ ವಿಧಾನ ಮತ್ತು ಫೀಡ್‍ಬ್ಯಾಕ್ ಅನ್ನು ನೇರ ಉಪನ್ಯಾಸಗಳು ಮತ್ತು ಆನ್‍ಲೈನ್ ಸಂವಹನಗಳ ಮೂಲಕ ಈ ಸ್ಪರ್ಧೆಯಲ್ಲಿ ನೀಡುತ್ತಾರೆ.

ಖ್ಯಾತ ನೃತ್ಯ ನಿರ್ದೇಶಕ ಟೆರ್ರೆನ್ಸ್ ಲೆವಿಸ್

ಖ್ಯಾತ ನೃತ್ಯ ನಿರ್ದೇಶಕ ಟೆರ್ರೆನ್ಸ್ ಲೆವಿಸ್

ಖ್ಯಾತ ನೃತ್ಯ ನಿರ್ದೇಶಕ ಟೆರ್ರೆನ್ಸ್ ಲೆವಿಸ್, ''ಈ ಪ್ಲಾಟ್‍ಫಾರಂ ಮಕ್ಕಳಿಗೆ ತಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ಅವರ ಶಕ್ತಿಯನ್ನು ಕಲೆಯ ಸಹಾಯದಿಂದ ಹರಿಸಲು ಅವಕಾಶ ಕಲ್ಪಿಸುತ್ತದೆ. ಇದು ಉದಯೋನ್ಮುಖ ಕಲಾವಿದರಿಗೆ ತಮ್ಮ ಆಕಾಂಕ್ಷೆಯಲ್ಲಿ ಸಮಯ ಹೂಡಿಕೆ ಮಾಡಲು ಅದ್ಭುತ ಅವಕಾಶ ನೀಡುವುದಲ್ಲದೆ ಏಕಕಾಲಕ್ಕೆ ಕಲಿಯುವುದನ್ನೂ ಸಾಧ್ಯವಾಗಿಸುತ್ತದೆ. ಈ ಪ್ಲಾಟ್‍ಫಾರಂ ಮೂಲಕ ನೀಡಲಾಗುವ ಶಿಷ್ಯವೇತನಗಳು ಈ ಮಕ್ಕಳಿಗೆ ಅವರ ಕಲೆಯಲ್ಲಿ ಮತ್ತಷ್ಟು ಆಳವಾಗಿ ಇಳಿಯಲು ನೆರವಾಗುತ್ತದೆ'' ಎಂದರು.

ಸಹ-ಸಂಸ್ಥಾಪಕಿ ಕವಿತಾ ಅಯ್ಯರ್

ಸಹ-ಸಂಸ್ಥಾಪಕಿ ಕವಿತಾ ಅಯ್ಯರ್

ಯಂಗ್ ಆರ್ಟಿಸ್ಟ್ ಸಹ-ಸಂಸ್ಥಾಪಕಿ ಕವಿತಾ ಅಯ್ಯರ್, ''ಹಿಂದೂಸ್ಥಾನಿ ಗಾಯಕಿಯಾಗಿ, ನಾನು ಕಲೆ ನಿಮ್ಮ ಜೀವನಕ್ಕೆ ತರುವ ಆನಂದವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಯಂಗ್ ಆರ್ಟಿಸ್ಟ್ ಆಲೋಚನೆಯು ಕಲೆಗಳ ಅನ್ವೇಷಣೆಯಲ್ಲಿರುವವರಿಗೆ ಸ್ಫೂರ್ತಿ ತುಂಬುವ ಮತ್ತು ಮೊದಲ ಹೆಜ್ಜೆಗಳನ್ನು ಇರಿಸಲು ನೆರವಾಗುವ ಬಯಕೆಯಿಂದ ಹುಟ್ಟಿಕೊಂಡಿತು. ಯಂಗ್ ಆರ್ಟಿಸ್ಟ್ ವಿದ್ಯಾರ್ಥಿ ಕಲಾವಿದರಿಗೆ ಅವರು ಎಲ್ಲಿ ನಿಂತಿದ್ದಾರೆ ಮತ್ತು ಅವರ ಸಾಮರ್ಥ್ಯವೇನು ಎಂದು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ನಾವು ರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ವಿದ್ಯಾರ್ಥಿ ಪ್ರತಿಭೆಯನ್ನು ಕಂಡುಕೊಳ್ಳಲು ಮತ್ತು ಸಂಭ್ರಮಿಸಲು ಬಯಸಿದ್ದೇವೆ ಹಾಗೂ ಅವರಿಗೆ ಕಲೆಗಳೊಂದಿಗೆ ತಮ್ಮ ಪ್ರಯಾಣ ಮುಂದುವರಿಸಲು ಬೆಂಬಲಿಸಲು ಉದ್ದೇಶಿಸಿದ್ದೇವೆ'' ಎಂದರು.

ಪ್ರವೇಶ ಮಾರ್ಗದರ್ಶನ:

ಪ್ರವೇಶ ಮಾರ್ಗದರ್ಶನ:

ಯಂಗ್ ಆರ್ಟಿಸ್ಟ್ 2020 ಈಗ 11-18 ವರ್ಷಗಳ ಎಲ್ಲ ವಿದ್ಯಾರ್ಥಿಗಳಿಗೂ ಮುಕ್ತವಾಗಿದೆ.

ಯಂಗ್ ಆರ್ಟಿಸ್ಟ್ 2020 ಭಾರತದಾದ್ಯಂತ ಶಾಲಾ ಮಕ್ಕಳಿಗೆ ರಾಷ್ಟ್ರ ಮಟ್ಟದ ಪ್ರತಿಭಾ ಸ್ಪರ್ಧೆಯಾಗಿದೆ. ಈ ವೇದಿಕೆ ವಿದ್ಯಾರ್ಥಿಗಳಿಗೆ ಉತ್ತೇಜನ ಮತ್ತು ಮಾನ್ಯತೆ ನೀಡುತ್ತದೆ. ಯಂಗ್ ಆರ್ಟಿಸ್ಟ್ ಎಷ್ಟು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳಿಗೆ ಪುರಸ್ಕರಿಸುತ್ತದೆ ಮತ್ತು ಉತ್ತೇಜಿಸುತ್ತದೆ ಮತ್ತು ಆದ್ದರಿಂದ ಎಲ್ಲ 20 ವಿಭಾಗಗಲ್ಲಿ ಟಾಪ್ 5 ಫೈನಲಿಸ್ಟ್‍ಗಳಿಗೆ 25 ಲಕ್ಷ ರೂ. ಮೌಲ್ಯದ 100 ಶಿಷ್ಯವೇತನಗಳನ್ನು ಒದಗಿಸುತ್ತದೆ.

ಇದು ನಿಜಕ್ಕೂ ಅಸಾಧಾರಣ ವಿದ್ಯಾರ್ಥಿ ಪ್ರತಿಭೆಯನ್ನು ಕಂಡುಕೊಳ್ಳುವ ಮತ್ತು ಸಂಭ್ರಮಿಸುವ ಗುರಿ ಹೊಂದಿದೆ ಮತ್ತು ಅವರಿಗೆ ಕಲೆಯ ಮೂಲಕ ಪ್ರಯಾಣದಲ್ಲಿ ಬೆಂಬಲಿಸುತ್ತದೆ. ಈ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸುವ, ಗುರುತಿಸಲ್ಪಡುವ ಮತ್ತು ದೇಶದ ಶ್ರೇಷ್ಠ ಕಲಾವಿದರಾದ ಅಮ್ಜದ್ ಅಲಿ ಖಾನ್, ಟೆರೆನ್ಸ್ ಲೆವಿಸ್, ಶೊವನಾ ನಾರಾಯಣ್, ಶಾಮಲಿ ಖೋಲ್ಗಡ್, ಅರುಣಾ ಸಾಯಿರಾಮ್ ಮತ್ತಿತರರಿಂದ ಮಾರ್ಗದರ್ಶನ ಪಡೆಯುವ ಅವಕಾಶ ನೀಡುತ್ತದೆ. ಅವರ ಮಾರ್ಗದರ್ಶನ ಮತ್ತು ಜ್ಞಾನ ಯುವ ಕಲಾವಿದರ ಅನುಭವ ಸೃಷ್ಟಿಸುವಲ್ಲಿ ಬಹಳ ಮುಖ್ಯವಾಗಿದೆ.

ಎಸ್‍ಐಎಫ್‍ಎಫ್-ಯಂಗ್ ಆರ್ಟಿಸ್ಟ್ 2020 ಕುರಿತು:

ಎಸ್‍ಐಎಫ್‍ಎಫ್-ಯಂಗ್ ಆರ್ಟಿಸ್ಟ್ 2020 ಕುರಿತು:

ಸಿಂಘಾಲ್ ಅಯ್ಯರ್ ಫ್ಯಾಮಿಲಿ ಫೌಂಡೇಷನ್(ಎಸ್‍ಐಎಫ್‍ಎಫ್) ಬೆಂಗಳೂರು ಮೂಲದ ಸೇವಾ ಸಂಸ್ಥೆಯಾಗಿದ್ದು ಉತ್ತಮ ಶಿಕ್ಷಣ ಹಾಗೂ ಭಾರತೀಯ ಸಂಗೀತದ ಪ್ರೀತಿ ಮತ್ತು ಕಲೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ.

ಯಂಗ್ ಆರ್ಟಿಸ್ಟ್ 2020 ಶಾಸ್ತ್ರೀಯ ಮತ್ತು ಸಮಕಾಲೀನ ಕಲೆಗಳ ರಾಷ್ಟ್ರ ಮಟ್ಟದ ವೇದಿಕೆಯಾಗಿದ್ದು ಭಾರದಾದ್ಯಂತ ಶಾಲಾ ಮಕ್ಕಳಿಗೆ ಶಿಷ್ಯವೇತನಗಳನ್ನು ನೀಡುತ್ತದೆ. ಈ ವೇದಿಕೆಯ ಉದ್ದೇಶ ತಮ್ಮ ಆಯ್ಕೆಯ ಕಲೆಯಲ್ಲಿ ಶ್ರೇಷ್ಠತೆಯನ್ನು ಬಯಸುವ ವಿದ್ಯಾರ್ಥಿಗಳಿಗೆ ಉತ್ತೇಜನ ಮತ್ತು ಮಾನ್ಯತೆ ನೀಡುವುದಾಗಿದೆ.

ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ:

ಶ್ರೇಯಾ ಆರ್.ಶಾ:Shreya.Shah@genesis-bcw.com

ಲಾವಣ್ಯ ರಂಗರಾಜನ್:lavanya.rangarajan@genesis-bcw.com

English summary
Young Artist 2020: Application invited from music and dancers across India for National Level Talent Competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X