ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದು ಯಾವ ಆತ್ಮವಿಶ್ವಾಸದಿಂದ ಮೋದಿ ಸಂಸತ್ತಿನಲ್ಲಿ ಈ ಮಾತನ್ನು ಹೇಳಿದ್ರು?

|
Google Oneindia Kannada News

ಕೆಲಸಕ್ಕೆ ಹೋದವರೆಲ್ಲಾ ಮನೆಗೆ ಬಂದು,ಊಟ ಮಾಡಿಕೊಂಡು ಟಿವಿ ನೋಡುವ ಪ್ರೈಂಟೈಮ್ ನಲ್ಲೇ ಮೋದಿಯವರ ಭಾಷಣಕ್ಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಅನುವು ಮಾಡಿಕೊಟ್ಟಾಗಲೇ, ಪ್ರಧಾನಿಯಿಂದ ಇನ್ನೊಂದು ಭರ್ಜರಿ ಭಾಷಣಕ್ಕೆ ವೇದಿಕೆ ಸಿದ್ದವಾಗಿದೆ ಎಂದು ಯಾರಿಗಾದರೂ ಅನಿಸದೇ ಇರದು.

ಯಾಕೆಂದರೆ ಸಂಜೆ ಆರೂವರೆಗೆ ಆರಂಭವಾಗಬೇಕಿದ್ದ ಪ್ರಧಾನಿಯ ಭಾಷಣ ಶುರುವಾಗಿದ್ದು ರಾತ್ರಿ 9.15ಗೆ. ಸುಮಾರು ತೊಂಬತ್ತು ನಿಮಿಷಗಳ ತಮ್ಮ ನಿರರ್ಗಳ (ಟಿಡಿಪಿ ಸದಸ್ಯರ ಪ್ರತಿಭಟನೆಯ ನಡುವೆಯೂ) ಭಾಷಣದಲ್ಲಿ ಸುಮಾರು ನಾಲ್ಕರಿಂದ ಐದು ಬಾರಿ ಪ್ರಧಾನಿ ಒಂದು ಮಾತನ್ನು ಪುನರುಚ್ಚಿಸಿದರು.

ರಾಹುಲ್ ಅಪ್ಪುಗೆ, ಮೋದಿ ಮಾತು, ರಮ್ಯಾ ಮೇಡಂ ಸರಣಿ ಟ್ವೀಟು! ರಾಹುಲ್ ಅಪ್ಪುಗೆ, ಮೋದಿ ಮಾತು, ರಮ್ಯಾ ಮೇಡಂ ಸರಣಿ ಟ್ವೀಟು!

ಅಸಲಿಗೆ, ಯಾವ ವಿಚಾರಕ್ಕೆ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿತ್ತೋ, ಅದನ್ನು ಬಿಟ್ಟು ಪ್ರಧಾನಿ ಸಂಸತ್ತಿನಲ್ಲಿ ಮಾಡಿದ ಭಾಷಣ 'ಮುಂಬರುವ ಸಾರ್ವತ್ರಿಕ ಚುನಾವಣಾ ಸ್ಪೀಚ್' ಎಂದೇ ರಾಜಕೀಯ ಪಂಡಿತರು ವ್ಯಾಖ್ಯಾನಿಸುತ್ತಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳಿಗೆ ಸ್ಪಷ್ಟ ಸುಳಿವೂ ಇತ್ತು.

ಆಂಧ್ರಪ್ರದೇಶದ ಬಗ್ಗೆ ಕೆಲವು ನಿಮಿಷಗಳನ್ನು ಮಾತ್ರ ತಮ್ಮ ಭಾಷಣಕ್ಕೆ ಸೀಮಿತಗೊಳಿಸಿದ ಮೋದಿ, ತಮ್ಮ ಸರಕಾರದ ಸಾಧನೆ ಮತ್ತು ಕಾಂಗ್ರೆಸ್ ಅನ್ನು ಟೀಕಿಸಲು ಭಾಷಣದಲ್ಲಿ ಪ್ರಾಮುಖ್ಯತೆಯನ್ನು ನೀಡಿದರು. ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆಯೂ ಸಂಶಯ ವ್ಯಕ್ತ ಪಡಿಸಿದರು, ಕಾಂಗ್ರೆಸ್ ಬಗ್ಗೆ ಜಾಗರೂಕತೆಯಿಂದ ಇರಿ ಎಂದು ಪರೋಕ್ಷವಾಗಿ ಅಣಕವಾಡಿದರು.

ಕನ್ನಡ ದಿನಪತ್ರಿಕೆಗಳು ಕಂಡಂತೆ ಅಪ್ಪುಗೆ, ಕಣ್ಮಿಟುಕು ಮತ್ತು ಅವಿಶ್ವಾಸ! ಕನ್ನಡ ದಿನಪತ್ರಿಕೆಗಳು ಕಂಡಂತೆ ಅಪ್ಪುಗೆ, ಕಣ್ಮಿಟುಕು ಮತ್ತು ಅವಿಶ್ವಾಸ!

ಯಾವ ಪೂರ್ವತಯಾರಿಯೂ ಇಲ್ಲದೇ, ಸಂಖ್ಯಾಬಲದ ಕೊರತೆಯಿದ್ದರೂ, ಅವಿಶ್ವಾಸ ಗೊತ್ತುವಳಿ ಮಂಡಿಸಿದ ವಿರೋಧ ಪಕ್ಷಗಳಿಗೆ ಭಾಷಣದುದ್ದಕ್ಕೂ ಟಾಂಗ್ ನೀಡಿದ ಪ್ರಧಾನಿ, ಇನ್ನುಮುಂದೆಯಾದರೂ ಸ್ವಲ್ಪ ಪೂರ್ವತಯಾರಿ ಮಾಡಿಕೊಂಡು ಬನ್ನಿ ಎಂದು ಚೇಡಿಸಿದರು. ಪ್ರಧಾನಿ ನಾಲ್ಕೈದು ಬಾರಿ ಪುನರುಚ್ಚಿಸಿದ ಅವರ ಹೇಳಿಕೆ, ಮುಂದಿನ ಎರಡು ಚುನಾವಣೆಯಲ್ಲಿ ನಾವೇ ಗೆದ್ದು ಬರುತ್ತೇವೆ ಎನ್ನುವ ವಿಶ್ವಾಸ ಅವರಲ್ಲಿತ್ತು.

ಗೊತ್ತುವಳಿ ಮಂಡಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ

ಗೊತ್ತುವಳಿ ಮಂಡಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ

ಯಾವುದೇ ಲೆಕ್ಕಾಚಾರವಿಲ್ಲದೇ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೀರಿ, '2024ರಲ್ಲೂ ಅವಿಶ್ವಾಸ ಗೊತ್ತುವಳಿ ಮಂಡಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ' ಎಂದು ಪ್ರಧಾನಿ ಹೇಳಿದಾಗ ಎನ್ಡಿಎ ಸದಸ್ಯರ ಕರತಾಡನ ಮುಗಿಲುಮುಟ್ಟಿತ್ತು. ಇನ್ನೆರಡು ಚುನಾವಣೆಯಲ್ಲೂ ಗೆಲುವು ನಮ್ಮದೇ ಎನ್ನುವುದು ಮೋದಿಯ ಹೇಳಿಕೆ ಇದಾಗಿತ್ತು. (ಚಿತ್ರ: ಪಿಟಿಐ)

ವಿಶ್ವಾಸ ಗೆದ್ದಿದ್ದಕ್ಕೆ ಜನತೆಗೆ ಟ್ವಿಟ್ಟರ್ ನಲ್ಲಿ ಮೋದಿ ಕೃತಜ್ಞತೆ ವಿಶ್ವಾಸ ಗೆದ್ದಿದ್ದಕ್ಕೆ ಜನತೆಗೆ ಟ್ವಿಟ್ಟರ್ ನಲ್ಲಿ ಮೋದಿ ಕೃತಜ್ಞತೆ

ಅವಿಶ್ವಾಸ ಗೊತ್ತುವಳಿಯ ವೇಳೆ ಪುನರುಚ್ಚಿಸಿದ ಮೋದಿ

ಅವಿಶ್ವಾಸ ಗೊತ್ತುವಳಿಯ ವೇಳೆ ಪುನರುಚ್ಚಿಸಿದ ಮೋದಿ

ಪ್ರಧಾನಿ ಮೋದಿವರು ನಾಲ್ಕೈದು ಬಾರಿ ಈ ಮಾತನ್ನು ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಯ ವೇಳೆ ಈ ಮಾತನ್ನು ಪುನರುಚ್ಚಿಸಿದ್ದರು. 2019ರಲ್ಲಿ ಬಿಡಿ 2024ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ, ಬರೆದಿಟ್ಟುಕೊಳ್ಳಿ ಎನ್ನುವ ಮಾತನ್ನು ಮೋದಿ ಅದಮ್ಯ ವಿಶ್ವಾಸದಿಂದ ಹೇಳಿದ್ದಾರೆ. (ಚಿತ್ರ: ಪಿಟಿಐ)

ಸಂಸತ್‌ನಲ್ಲಿ ಮೋದಿ ಭಾಷಣ : 7 ಪ್ರಮುಖ ಹೇಳಿಕೆಗಳು ಸಂಸತ್‌ನಲ್ಲಿ ಮೋದಿ ಭಾಷಣ : 7 ಪ್ರಮುಖ ಹೇಳಿಕೆಗಳು

ಉತ್ತರಪ್ರದೇಶದಲ್ಲಿ ಕಳೆದ ಚುನಾವಣೆಯಷ್ಟು ಸೀಟು ಸಿಗುವ ಸಾಧ್ಯತೆ ಕಮ್ಮಿ

ಉತ್ತರಪ್ರದೇಶದಲ್ಲಿ ಕಳೆದ ಚುನಾವಣೆಯಷ್ಟು ಸೀಟು ಸಿಗುವ ಸಾಧ್ಯತೆ ಕಮ್ಮಿ

ಎನ್ಡಿಎ ಮೈತ್ರಿಕೂಟದಿಂದ ಟಿಡಿಪಿ ದೂರವಾಗಿದ್ದು, ಶಿವಸೇನೆಯ ಅಪಸ್ವರ, ಉತ್ತರಪ್ರದೇಶದಲ್ಲಿ ಕಳೆದ ಚುನಾವಣೆಯಷ್ಟು ಸೀಟು ಸಿಗುವ ಸಾಧ್ಯತೆ ಕಮ್ಮಿ, ಈ ಎಲ್ಲಾ ರಾಜಕೀಯ ಲೆಕ್ಕಾಚಾರದ ನಡುವೆಯೂ, ಮೋದಿಯವರ '2024ರಲ್ಲೂ ಅವಿಶ್ವಾಸ ಗೊತ್ತುವಳಿ ಮಂಡಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ' ಎನ್ನುವ ಹೇಳಿಕೆ, ಅದ್ಯಾವ ಮಟ್ಟಿಗೆ ಪ್ರಧಾನಿ ಮೋದಿ ವಿಶ್ವಾಸದಲ್ಲಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. (ಚಿತ್ರ: ಪಿಟಿಐ)

ತಮ್ಮನ್ನೇ ನಂಬದ ಅವರು, ಇನ್ನು ತಮ್ಮವರನ್ನು ಹೇಗೆ ನಂಬಿಯಾರು

ತಮ್ಮನ್ನೇ ನಂಬದ ಅವರು, ಇನ್ನು ತಮ್ಮವರನ್ನು ಹೇಗೆ ನಂಬಿಯಾರು

ತಮ್ಮನ್ನೇ ನಂಬದ ಅವರು (ಗಾಂಧಿ ಕುಟುಂಬ) ಇನ್ನು ತಮ್ಮವರನ್ನು ಹೇಗೆ ನಂಬಿಯಾರು ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, 2019ರ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಾಯೋಜಿತ ಗೊತ್ತುವಳಿಯೇ ಇದು ಹೊರತು, ಆಂಧ್ರದ ಮೇಲಿನ ಪ್ರೀತಿಯಿಂದಲ್ಲ. ಒಂದು ಮೋದಿಯನ್ನು ಸೋಲಿಸಲು, ಎಷ್ಟೆಲ್ಲಾ ಮುಖಂಡರು ಒಟ್ಟಾಗಿದ್ದಾರೆ - ಪ್ರಧಾನಿ ಮೋದಿ. (ಚಿತ್ರ: ಪಿಟಿಐ)

ಇನ್ನೆರಡು ಅವದಿಗೂ ನಮ್ಮದೇ ಸರಕಾರ ಎನ್ನುವ ವಿಶ್ವಾಸದಿಂದ ಭಾಷಣ

ಇನ್ನೆರಡು ಅವದಿಗೂ ನಮ್ಮದೇ ಸರಕಾರ ಎನ್ನುವ ವಿಶ್ವಾಸದಿಂದ ಭಾಷಣ

ಬಹುಪಾಲು ಮುಂಬರುವ ಚುನಾವಣೆಗೆ ವೇದಿಕೆಯಾಗಿಯೇ ಸಂಸತ್ತನ್ನು ಬಳಸಿಕೊಂಡ ಪ್ರಧಾನಿ, ಇನ್ನೆರಡು ಅವದಿಗೂ ನಮ್ಮದೇ ಸರಕಾರ ಎನ್ನುವ ವಿಶ್ವಾಸದಿಂದ ಭಾಷಣ ಮಾಡುತ್ತಾ, ವಿರೋಧ ಪಕ್ಷಗಳನ್ನು ಕೆಣಕಿದರು. '2024ರಲ್ಲೂ ಅವಿಶ್ವಾಸ ಗೊತ್ತುವಳಿ ಮಂಡಿಸಲು ದೇವರು ನಿಮಗೆ ಶಕ್ತಿಯನ್ನು ನೀಡಲಿ' ಎಂದು ಪ್ರಧಾನಿ ಹೇಳಿದಾಗ, ಕಾಂಗ್ರೆಸ್ ಮುಖಂಡರ ಮೋರೆ ಸಪ್ಪೆಯಾಗಿದ್ದಂತೂ ಹೌದು. (ಚಿತ್ರ: ಪಿಟಿಐ)

English summary
Replying to the debate in Lok Sabha on Friday (July 20), Prime Minister Narendra Modi took a swipe at the Congress and the Opposition and repeatedly said, “I pray to God to give you the strength to bring a no-confidence motion in 2024 also.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X