• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1 ಕ್ವಿಂಟಾಲ್ ರೇಷನ್ ಬೇಕಿದ್ದರೆ, 20 ಮಕ್ಕಳನ್ನು ಹೊಂದಬೇಕು; ಸಿಎಂ ಬಾಯಲ್ಲಿ ಇದೆಂಥಾ ಮಾತು?

|
Google Oneindia Kannada News

ನವದೆಹಲಿ, ಮಾರ್ಚ್ 22: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಬಡ ಕುಟುಂಬಗಳು ಆಹಾರ ಧಾನ್ಯಗಳಿಲ್ಲದೇ ನರಳಾಡಿವೆ ಎಂದಿರುವ ಉತ್ತರಾಖಂಡ್ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉತ್ತರಾಖಂಡದ ರಾಮ್ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ಬಡ ಕುಟುಂಬಗಳು ಹೆಚ್ಚು ಹೆಚ್ಚು ಪಡಿತರ ಪಡೆದುಕೊಳ್ಳಲು 20 ಮಕ್ಕಳನ್ನು ಹೊಂದಬೇಕಿದೆ ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಕುಂಭಮೇಳಕ್ಕೆ ಹೋಗಲು ಕೊವಿಡ್-19 ನೆಗಟಿವ್ ವರದಿ ಬೇಕಿಲ್ಲ: ಸಿಎಂ ಆದೇಶ ಕುಂಭಮೇಳಕ್ಕೆ ಹೋಗಲು ಕೊವಿಡ್-19 ನೆಗಟಿವ್ ವರದಿ ಬೇಕಿಲ್ಲ: ಸಿಎಂ ಆದೇಶ

"ರಾಜ್ಯದಲ್ಲಿ ಪ್ರತಿಯೊಂದು ಮನೆಗೆ 5 ಕೆಜಿ ಪಡಿತರವನ್ನು ನೀಡಲಾಗುತ್ತದೆ. ಒಂದು ಕುಟುಂಬದಲ್ಲಿ ಒಂದು ವೇಳೆ 10 ಜನರಿದ್ದರೆ 50 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. 20 ಜನರಿದ್ದರೆ 1 ಕ್ವಿಂಟಾಲ್ ಪಡಿತರವನ್ನು ನೀಡಲಾಗುತ್ತದೆ. 20 ಜನರ ಕುಟುಂಬಕ್ಕೆ 100 ಕೆಜಿ ಪಡಿತರ ಸಿಕ್ಕಿದ್ದನ್ನು ನೋಡಿ, 10 ಕೆಜಿ ಪಡಿತರ ಪಡೆದ ಇಬ್ಬರು ಅಸೂಯೆ ಪಟ್ಟರು. ಏಕೆ, ನೀವು ಸಮಯವಿದ್ದಾಗ ಇಬ್ಬರಿಗೆ ಮಾತ್ರ ಜನ್ಮ ನೀಡಿದ್ದೇಕೆ, 20 ಜನರು ಏಕೆ ಆಗಲಿಲ್ಲ" ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಭಾರತ ಲಾಕ್ ಡೌನ್ ವೇಳೆ ಮನೆಮನೆಗೆ ಪಡಿತರ:

   ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡುತ್ತೆ !! | Kumaraswamy | Oneindia Kannada

   ಕಳೆದ 2020ರ ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ಅವಧಿಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ಪ್ರತಿ ಮನೆಗೂ 5 ಕೆಜಿ ಅಕ್ಕಿ, ಆಹಾರ ಧಾನ್ಯ ಮತ್ತು 1 ಕೆಜಿ ಬೇಳೆಕಾಳುಗಳನ್ನು ವಿತರಿಸಲಾಗಿತ್ತು. ಈ ಬಗ್ಗೆ ಉಲ್ಲೇಖಿಸಿದ ಉತ್ತರಾಖಂಡ್ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲರನ್ನೂ ಸಮಾನ ದೃಷ್ಟಿಕೋನದಿಂದ ನೋಡಿದ್ದಾರೆ ಎಂದರು. ನೀವು 10 ಕೆಜಿ ಪಡಿತರ ಪಡೆಯುವುದಕ್ಕೂ, 1 ಕ್ವಿಂಟಾಲ್ ಪಡಿತರ ಪಡೆಯುವುದಕ್ಕೂ ನೀವೇ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

   English summary
   You Gave Birth To 2... Why Not 20?, Uttarakhand CM Controversial Statement.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X