ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದು ಹೋದ ಮೊಬೈಲ್ ಹುಡುಕಾಟಕ್ಕೆ ಸರ್ಕಾರದಿಂದ ದತ್ತಾಂಶ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 20: ಮೊಬೈಲ್ ಫೋನ್ ಕಳೆದು ಕೊಂಡವರಿಗೆ ಮತ್ತೆ ಮೊಬೈಲ್ ಸಿಗುವ ಸಾಧ್ಯತೆ ಅತ್ಯಂತ ಕಡಿಮೆ ಎಂಬುದು ಅಘೋಷಿತ ಸತ್ಯ. ಆದರೆ, ಈ ದೊಡ್ಡ ಸಮಸ್ಯೆಗೆ ಪರಿಹಾರ ರೂಪವಾಗಿ ಟೆಲಿಕಾಂ ಸಚಿವಾಲಯವು ಹೊಸ ದತ್ತಾಂಶವನ್ನು ಪರಿಚಯಿಸುತ್ತಿದೆ.

ಕೇಂದ್ರ ಸಾಧನಗಳ ನೋಂದಣಿಯನ್ನು ನವೀಕರಿಸಲಾಗುತ್ತಿದ್ದು, ಇದರಲ್ಲಿ ಐಎಂಇಐಗಳ ದೊಡ್ಡ ಸಂಗ್ರಹವೆ ಸಿಗಲಿದೆ. ಇದರ ನೆರವಿನಿಂದ ತನಿಖಾಧಿಕಾರಿಗಳು ಸುಲಭವಾಗಿ ಮೊಬೈಲ್ ಬಳಕೆ ಟ್ರ್ಯಾಕ್ ಮಾಡಬಹುದು ಎಂದು ಸಚಿವಾಲಯ ಹೇಳಿದೆ.

ಸ್ಮಾರ್ಟ್ ಫೋನಿಗೂ ದೇಶಿ ಜಿಪಿಎಸ್ 'ನಾವಿಕ್' : ಇಸ್ರೋ ಸ್ಮಾರ್ಟ್ ಫೋನಿಗೂ ದೇಶಿ ಜಿಪಿಎಸ್ 'ನಾವಿಕ್' : ಇಸ್ರೋ

IMEI 15 ಅಂಕಿಗಳ ವಿಶಿಷ್ಟ ಸಂಖ್ಯೆಯಾಗಿದ್ದು, ಪ್ರತಿ ಮೊಬೈಲ್ ನ ಗುರುತು ಸಂಖ್ಯೆಯಾಗಿರುತ್ತದೆ. ಇನ್ನು ಕೆಲ ವಾರಗಳಲ್ಲೇ ಈ ಹೊಸ ದತ್ತಾಂಶ ತಯಾರಾಗಲಿದೆ. ನಂತರ, ಮೊಬೈಲ್ ಕಳೆದುಕೊಂಡ ಗ್ರಾಹಕರು, ಟೆಲಿಕಾಂ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಬಹುದು.

You can soon track your stolen mobile: Govt set to roll out IMEI database

ಮೊಬೈಲ್ ಕಳ್ಳತನವಾದ ಬಳಿಕ ಸ್ಥಳೀಯ ಪೊಲೀಸರಿಗೆ ದೂರು ನೀಡಬೇಕು. ನಂತರ ಸಹಾಯವಾಣಿ ಬಳಸಿ ದೂರಸಂಪರ್ಕ ಇಲಾಖೆಗೆ ಮಾಹಿತಿ ನೀಡಬಹುದು. ಸೂಕ್ತ ಮಾಹಿತಿ ಪಡೆದ ಬಳಿಕ ಆ ಮೊಬೈಲ್ ಸಂಖ್ಯೆಯ ಐಎಂಇಐ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುತ್ತದೆ. ಇದರಿಂದ ಮೊಬೈಲ್ ಕಸಿದುಕೊಂಡವರು ಕದ್ದ ಮೊಬೈಲಿನಿಂದ ಯಾವುದೇ ಸೆಲ್ಯುಲಾರ್ ನೆಟ್ವರ್ಕ್ ಬಳಸಲು ಸಾಧ್ಯವಾಗದಂತೆ ಮಾಡಲಾಗುತ್ತದೆ.

ಮೊಬೈಲ್ ಗುರುತು ಪತ್ತೆ ಸಂಖ್ಯೆಯ ನೋಂದಣಿ ಪಟ್ಟಿ ತಯಾರಿಸುವ ಯೋಜನೆ ಜಾರಿಯಲ್ಲಿದೆ. 2012ರ ರಾಷ್ಟ್ರೀಯ ಟೆಲಿಕಾಂ ನೀತಿಯ ಅನ್ವಯ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಕಳೆದ ಬಜೆಟ್ ನಲ್ಲಿ ಸಿಇಐಆರ್ ಯೋಜನೆಗೆ 15 ಕೋಟಿ ರು ಅನುದಾನ ನೀಡಲಾಗಿದೆ.

English summary
There would be a major solution in sight for those affected by cloning and theft of mobile phones. The Telecom Ministry is all set to roll out a Central Equipment Register, which would comprise a database of IMEIs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X