ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಹೆಸರು ಹೇಳಿಕೊಂಡು ಎಷ್ಟು ಸಮಯ ಉಳಿಯುತ್ತೀರಿ?: ಸರ್ಕಾರಕ್ಕೆ ಖರ್ಗೆ ತರಾಟೆ

|
Google Oneindia Kannada News

ನವದೆಹಲಿ, ಫೆಬ್ರವರಿ 5: 'ಕನಿಷ್ಠ ಬೆಂಬಲ ಬೆಲೆ ಕುರಿತಂತೆ ನೀವು ಸುಳ್ಳು ಹೇಳುತ್ತಿದ್ದೀರಿ' ಎಂದು ಕಾಂಗ್ರೆಸ್‌ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾಳಿರುವ ನೀತಿಯನ್ನು ಕಟುವಾಗಿ ಟೀಕಿಸಿದರು. ಇದೇ ಸಂದರ್ಭದಲ್ಲಿ ಬಜೆಟ್ ಅಧಿವೇಶನದ ಮೊದಲ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣ 'ಸರ್ಕಾರಿ ಭಾಷಣ' ಎಂದು ಲೇವಡಿ ಮಾಡಿದರು.

'ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ 1917ರಲ್ಲಿ ನಡೆದ ಚಂಪಾರಣ್ಯ ಸತ್ಯಾಗ್ರಹವನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಈ ಇತಿಹಾಸದ ಭಾಗವಾಗಿದೆ. ನಿಮ್ಮನ್ನು ರಕ್ಷಿಸದ ಕಾನೂನುಗಳನ್ನು ಪಾಲಿಸಬೇಡಿ. ಅದು ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಗಾಂಧೀಜಿ ಹೇಳಿದ್ದರು' ಎಂದು ಖರ್ಗೆ ನೆನಪಿಸಿದರು. ಮುಂದೆ ಓದಿ.

ರಾಜ್ಯಗಳಿಗೆ ಬೆದರಿಕೆ ಹಾಕಿದರು

ರಾಜ್ಯಗಳಿಗೆ ಬೆದರಿಕೆ ಹಾಕಿದರು

ಈ ಸರ್ಕಾರವು ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಯಾವಾಗಲೂ ಹೇಳುತ್ತಲೇ ಇದೆ. ಆದರೆ ಪ್ರಧಾನಿಯಾಗಿ ಮೋದಿ ಅವರು ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗೆಯೇ 2014ರ ಜೂನ್‌ನಲ್ಲಿ, ಎಂಎಸ್‌ಪಿಗಿಂತ ಒಂದೇ ಒಂದು ರೂಪಾಯಿ ಹೆಚ್ಚು ನೀಡಿದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಲ್ಲ ರಾಜ್ಯಗಳಿಗೂ ಎಚ್ಚರಿಕೆ ನೀಡಿದ್ದರು. ಅಲ್ಲಿಂದ ರಾಜ್ಯಗಳು ರೈತರಿಗೆ ಬೋನಸ್ ನೀಡುವುದನ್ನು ನಿಲ್ಲಿಸಿದವು' ಎಂದು ಖರ್ಗೆ ಹೇಳಿದರು.

ಭೂಮಿ ಕಿತ್ತುಕೊಳ್ಳಲು ಸುಗ್ರೀವಾಜ್ಞೆ

ಭೂಮಿ ಕಿತ್ತುಕೊಳ್ಳಲು ಸುಗ್ರೀವಾಜ್ಞೆ

ಅವರು ರೈತರ ಜಮೀನನ್ನು ಅತಿಕ್ರಮಿಸಿಕೊಂಡು ಅವುಗಳನ್ನು ಕಾರ್ಪೊರೇಟ್‌ಗಳಿಗೆ ನೀಡಲು ಸಂಚು ರೂಪಿಸಿದ್ದಾರೆ. ರೈತರಿಗೆ ನಾಲ್ಕು ಪಟ್ಟು ಪರಿಹಾರ ನೀಡುವಂತೆ ಭೂ ಸ್ವಾಧೀನ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಸಂಪುಟಕ್ಕೆ ರಾಹುಲ್ ಗಾಂಧಿ ಮನವೊಲಿಸಿದ್ದರು.


2018ರ ಡಿಸೆಂಬರ್‌ನಲ್ಲಿ ಮೋದಿ ಸರ್ಕಾರ ಅದನ್ನು ಅಂತ್ಯಗೊಳಿಸಲು ಸುಗ್ರೀವಾಜ್ಞೆಯೊಂದನ್ನು ತಂದಿತು. ಬಳಿಕ ಎನ್‌ಜಿಒಗಳು, ರೈತರು ಮತ್ತು ಇತರೆ ಸಂಘಟನೆಗಳು ವಿರೋಧವಾಗಿ ನಿಂತವು. ಬಳಿಕ ಅವರು ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆಯಬೇಕಾಯಿತು ಎಂದು ಹೇಳಿದರು.

ದಾಖಲೆಗಳನ್ನು ಸರ್ಕಾರವೇ ಓದಿಲ್ಲ

ದಾಖಲೆಗಳನ್ನು ಸರ್ಕಾರವೇ ಓದಿಲ್ಲ

'ನೀವು ಹೇಳುತ್ತೀರಿ ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ ಎಂದು. ಆದರೆ ಆರು ವರ್ಷಗಳಲ್ಲಿ ರೈತರ ಉತ್ಪಾದನಾ ವೆಚ್ಚದ ಶೇ 50ರಷ್ಟು ಕೂಡ ಅವರಿಗೆ ನೀಡಿಲ್ಲ. ಸರ್ಕಾರ ದಾಖಲೆಗಳ ಪ್ರಕಾರ ದೇಶ 24.65 ಕೋಟಿ ಒಟ್ಟು ರೈತರ ಪೈಕಿ ಆರು ಕೋಟಿಗೂ ಅಧಿಕ ರೈತರಿಗೆ ಒಂದೇ ಒಂದು ಆಣೆ ಹಣ ಸಿಕ್ಕಿಲ್ಲ. ಸರ್ಕಾರವು ತನ್ನ ದಾಖಲೆಗಳನ್ನು ತಾನೇ ಓದಿಲ್ಲ ಎನಿಸುತ್ತದೆ' ಎಂದು ಟೀಕಿಸಿದರು.

ಎಷ್ಟು ದಿನ ಉಳಿಯುತ್ತೀರಿ?

ಎಷ್ಟು ದಿನ ಉಳಿಯುತ್ತೀರಿ?

ಎಂಎಸ್‌ಪಿ ಕುರಿತಾಗಿ ಅವರು ಸುಳ್ಳು ಹೇಳಿದ್ದಾರೆ. ಮೋದಿ ಅವರೇ ಕಾಂಗ್ರೆಸ್ ಎಂಎಸ್‌ಪಿ ಹೆಚ್ಚಿಸಿಲ್ಲ ಎಂದು ಹೇಳುವುದನ್ನು ನಿಲ್ಲಿಸಿ. ಕಾಂಗ್ರೆಸ್ ಹೆಸರನ್ನು ಹೇಳಿಕೊಂಡು ಎಷ್ಟು ದಿನ ಉಳಿಯುತ್ತೀರಿ? ನಾವು 70 ವರ್ಷದಲ್ಲಿ ಏನು ಮಾಡಿದ್ದೇವೆಯೋ ಅದು ಜನರ ಮುಂದೆ ಇದೆ. ನೀವು ಮಾತನಾಡುವುದನ್ನು ನಿಲ್ಲಿಸಿಲ್ಲ. ಅದು ನಿಮ್ಮ ಹವ್ಯಾಸ, ನಾವೇನು ಮಾಡುವುದು? ಜನರನ್ನು ವಿಭಜಿಸಿದಿರಿ ಮತ್ತು ರೈತರಿಗೆ ಕಿರುಕುಳ ನೀಡಿದಿರಿ. ಜನವರಿ 26ರ ಘಟನೆ ಒಂದು ಸಂಚು. ಅದು ರೈತರನ್ನು ವಿಭಜಿಸುವ ಸಂಚು ಎಂದು ಆರೋಪಿಸಿದರು.

ಕಾಂಗ್ರೆಸ್ ಇದ್ದಾಗ ಹೆಚ್ಚಿಸಲಾಗಿತ್ತು

ಕಾಂಗ್ರೆಸ್ ಇದ್ದಾಗ ಹೆಚ್ಚಿಸಲಾಗಿತ್ತು

ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಎಂಎಸ್‌ಪಿಯನ್ನು ಶೇ 219 ಪಟ್ಟು ಹೆಚ್ಚಿಸಲಾಗಿತ್ತು ಎನ್ನುವುದು ವಾಸ್ತವ. ಆದರೆ ಇವರು ಶೇ 40ಕ್ಕಿಂತ ಕೊಂಚ ಮಾತ್ರ ಏರಿಸಿದ್ದಾರೆ. ಯುಪಿಎ-1ರ ಅಧಿಕಾರಾವಧಿಯಲ್ಲಿ ಎಂಎಸ್‌ಪಿಯ ಸರಾಸರಿ ಬೆಳವಣಿಗೆ ಶೇ 11.10ರಷ್ಟಿತ್ತು. ಮೋದಿ ಸರ್ಕಾರದ ಅವಧಿಯಲ್ಲಿ ಶೇ 5.53ರಷ್ಟಿದೆ ಎಂದರು.

English summary
Congress Rajya Sabha Member Mallikarjun Kharge slams the centre over their assurance on MSP and said you are lying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X