ಅವಿವಾಹಿತ ಸಿಎಂಗಳು: ಯೋಗಿ ಆದಿತ್ಯನಾಥ್ ಹೊಸ ಸೇರ್ಪಡೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ಲಕ್ನೋ, ಮಾರ್ಚ್ 20: ಉತ್ತರಪ್ರದೇಶದ 'ಖಾವಿಧಾರಿ ಸಿಎಂ' ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಅವಿವಾಹಿತ ಯೋಗಿ ಆದಿತ್ಯನಾಥ್ ಅವರು ದೇಶದ ಅತಿದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ವಿಶಿಷ್ಟ ಕ್ಲಬ್ ಸೇರಿದ್ದಾರೆ.

44 ವರ್ಷ ವಯಸ್ಸಿನ 5 ಬಾರಿ ಸಂಸದರಾಗಿರುವ ಯೋಗಿ ಆದಿತ್ಯನಾಥ್ ಅವರ ಜತೆಗೆ ಉತ್ತರಾಖಂಡ್ ನ ನೂತನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡಾ ಅವಿವಾಹಿತರು ಎಂಬುದು ಗಮನಾರ್ಹ.[ಯೋಗಿ ಆದಿತ್ಯನಾಥ್ ಯಾರು? ಏನವರ ಹಿನ್ನೆಲೆ?]

Yogi joins the bachelor's club of chief ministers

ಬ್ಯಾಚುಲರ್ ಸಿಎಂ ಗಳ ಪಟ್ಟಿಯಲ್ಲಿ ಮನೋಹರ್ ಲಾಲ್ ಖಟ್ಟರ್ 62 ವರ್ಷ (ಹರ್ಯಾಣ), ಸರ್ಬಾನಂದ ಸೊನೊವಾಲ್ 54 ವರ್ಷ (ಅಸ್ಸಾಂ), ನವೀನ್ ಪಟ್ನಾಯಕ್ 70 ವರ್ಷ (ಒಡಿಶಾ) ಇದ್ದಾರೆ. [ಆದಿತ್ಯನಾಥರ ಟಾಪ್ 5 ವಿವಾದಾತ್ಮಕ ಹೇಳಿಕೆ]

ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶದ ಪ್ರಪ್ರಥಮ ಅವಿವಾಹಿತ ಸಿಎಂ ಆಗಿದ್ದಾರೆ. ಇದಕ್ಕೂ ಮುನ್ನ ಬಿಎಸ್ಪಿಯ ಮಾಯಾವತಿ ಅವರು ಪ್ರಥಮ ಅವಿವಾಹಿತೆ ಸಿಎಂ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಒಡಿಶಾದ ನವೀನ್ ಪಟ್ನಾಯಕ್ ಹೊರತುಪಡಿಸಿದರೆ ಮಿಕ್ಕವರು ಬಿಜೆಪಿ ಸರ್ಕಾರ ನಡೆಸುತ್ತಿರುವ ಸಿಎಂಗಳಾಗಿದ್ದಾರೆ. ಒಟ್ಟಾರೆ ಈ ಎಲ್ಲಾ ರಾಜ್ಯಗಳು ಕುಟುಂಬ ರಾಜಕೀಯ, ಸ್ವಜನಪಕ್ಷಪಾತದಿಂದ ಮುಕ್ತವಾಗಿದೆ ಎನ್ನಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yogi Adityanath is the talk of the town and interestingly he is the new member in the bachelor's club of chief ministers. The 44 year old 5 time MP joins the likes of Trivendra Singh Rawat, Chief Minister of Uttarakhand among others in the bachelor's club.
Please Wait while comments are loading...