ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡ್ಡಿಲ್ಲದೆ ಪರದಾಡುತ್ತಿದ್ದ ಯುವ ಮಹಿಳಾ ಶೂಟರ್‌ಗೆ ಯೋಗಿ ಸರ್ಕಾರ ನೆರವು

|
Google Oneindia Kannada News

ಲಖನೌ, ಜೂನ್ 9: ಜರ್ಮನಿಯಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್ ಶೂಟಿಂಗ್‌ನಲ್ಲಿ ಹಣಕಾಸಿನ ಸಮಸ್ಯೆಯಿಂದಾಗಿ ಪಾಲ್ಗೊಳ್ಳಲು ಸಾಧ್ಯವಾಗದೆ ಕೊರಗುತ್ತಿದ್ದ 19ರ ಯುವ ಶೂಟರ್‌ಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಸಹಾಯಹಸ್ತ ಚಾಚಿದೆ.

ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್‌ನಲ್ಲಿ ಪಾಲ್ಗೊಳ್ಳಲು ಶೂಟರ್ ಪ್ರಿಯಾ ಸಿಂಗ್‌ಗೆ ನೆರವಾಗಲು ಯೋಗಿ ಆದಿತ್ಯನಾಥ ಅವರು 4.5 ಲಕ್ಷ ರೂ. ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ.

ಮೀರಟ್‌ನ ದಲಿತ ಕಾರ್ಮಿಕ ಕುಟುಂಬದ ಪೋಷಕರ ಮಗಳಾದ ಪ್ರಿಯಾ, ಜೂನ್ 22ರಂದು ಜರ್ಮನಿಯಲ್ಲಿ ಆರಂಭವಾಗಲಿರುವ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್‌ನ 50 ಮೀಟರ್ ರೈಫಲ್ ಪ್ರೋನ್‌ಗೆ ಆಯ್ಕೆಯಾದ ಆರು ಕ್ರೀಡಾಪಟುಗಳಲ್ಲಿ ಒಬ್ಬರು.

yogi adityanath granted 4.5 lakh to help young shooter

ಆದರೆ ಹಣಕಾಸಿನ ಕೊರತೆಯಿಂದಾಗಿ ಈ ಯುವತಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿತ್ತು. ಈ ವಿಚಾರ ತಿಳಿದ ಯೋಗಿ ಆದಿತ್ಯನಾಥ ಆರ್ಥಿಕ ನೆರವು ಪ್ರಕಟಿಸಿದ್ದಾರೆ.

ಹಣಕಾಸಿನ ಕಾರಣಕ್ಕಾಗಿ ಇಂತಹ ಭರವಸೆಯ ಹಾಗೂ ಪ್ರತಿಭಾನ್ವಿತ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಕ್ರೀಡೆಗಳಿಂದ ದೂರ ಉಳಿಯುವಂತೆ ಆಗಬಾರದು. ಈ ಕಾರಣಕ್ಕಾಗಿ ನಾವು ಅವರಿಗೆ ನಮ್ಮ ಬೆಂಬಲ ನೀಡಿದ್ದೇವೆ.

ಈ ನಿಲುವನ್ನು ಮುಂದುವರಿಸಲಿದ್ದೇವೆ. ಇದರಿಂದ ಯಾವ ಅಥ್ಲೀಟ್‌ ಕೂಡ ಇಂತಹ ಸಮಸ್ಯೆ ಎದುರಿಸುವುದಿಲ್ಲ. ಅಲ್ಲದೆ, ಅವರು ಉತ್ತಮವಾಗಿ ಆಡಲು ಉತ್ತೇಜನ ನೀಡುತ್ತದೆ ಎಂದು ಯೋಗಿ ಹೇಳಿದ್ದಾರೆ.

ಈ ಸುದ್ದಿ ತಿಳಿದ ಕೂಡಲೇ ಆಕೆಗೆ ನೆರವಾಗಲು ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಅನುಮೋದನೆ ಮಾಡಿದ್ದೇನೆ. ಆಕೆ ಜರ್ಮನಿಗೆ ಹೋಗಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಡುವಂತೆ ಮೀರಟ್‌ನ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಯೋಗಿ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಪ್ರಿಯಾ ನಾಲ್ಕನೆಯ ಸ್ಥಾನ ಗಳಿಸಿ ಈ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದರು. ಆದರೆ, ಮೊದಲ ಮೂರು ಸ್ಥಾನ ಪಡೆದ ಅರ್ಹರಿಗೆ ಮಾತ್ರ ಸರ್ಕಾರ ಹಣಕಾಸಿನ ಪ್ರಾಯೋಜಕತ್ವ ವಹಿಸಿಕೊಳ್ಳುತ್ತದೆ. ಸ್ವಂತ ರೈಫಲ್ ಹೊಂದಿರದ ಅವರು, ಬಾಡಿಗೆ ರೈಫಲ್‌ ಬಳಸಿ ಭಾಗವಹಿಸಿದ್ದರು.

ಮಕ್ಕಳು ಎನ್‌ಸಿಸಿಯಲ್ಲಿ ಶೂಟಿಂಗ್ ಮಾಡುತ್ತಿದ್ದದ್ದನ್ನು ಕಂಡು ಪ್ರಭಾವಿತಳಾದೆ. ಅಲ್ಲಿಂದ ಹೇಗೆ ಶೂಟ್ ಮಾಡುವುದು ಎಂದು ನಾನು ಕಲಿತೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೂ 17 ಪದಕಗಳನ್ನು ಗೆದ್ದಿದ್ದೇನೆ.

ಜೂನಿಯರ್ ವಿಶ್ವಕಪ್‌ನ ಆಯ್ಕೆಯ ಸ್ಪರ್ಧೆಯಲ್ಲಿ ನಾಲ್ಕನೆಯ ಸ್ಥಾನ ಪಡೆದಿದ್ದೆ. ನಾನು ಹಳ್ಳಿಯೊಂದರಿಂದ ಬಂದವಳು. ತಂದೆ ಕೂಲಿ ಕಾರ್ಮಿಕ. ಹೀಗಾಗಿ ಜರ್ಮನಿಗೆ ಹೋಗುವುದು ನನ್ನ ಆರ್ಥಿಕ ಸಾಮರ್ಥ್ಯಕ್ಕೆ ಸಾಧ್ಯವೇ ಇಲ್ಲ ಎಂದು ಪ್ರಿಯಾ ತಿಳಿಸಿದ್ದಾರೆ.

ಕ್ರೀಡೆಯಲ್ಲಿ ಹೆಚ್ಚಿನ ತರಬೇತಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುವ ಸಲುವಾಗಿ ಪ್ರಿಯಾ ಮತ್ತು ಅವರ ತಂದೆ ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ, ಜಿಲ್ಲಾಡಳಿತ ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರು. ಆದರೆ, ಅವೆಲ್ಲವೂ ವ್ಯರ್ಥವಾಗಿತ್ತು.

English summary
Uttar Pradesh chief minister Yogi Adityanath has sanctioned Rs 4.5 lakh for Priya singh to participate in the International Shooting Sports Federation (ISSF) junior World Cup in Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X