ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿಯನ್ನು 'ಯೋಗಿ' ಎಂದು ಕರೆಯುವಂತಿಲ್ಲ: ವೀರಪ್ಪ ಮೊಯಿಲಿ

|
Google Oneindia Kannada News

ರಾಯ್ಪುರ, ನವೆಂಬರ್ 16: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೊದಲು ಸನ್ಯಾಸಿಯಂತೆ ಆಗಲಿ ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಸಲಹೆ ನೀಡಿದ್ದಾರೆ.

ಛತ್ತೀಡ್‌ ಗಢದ ರಾಯ್ಪುರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಮೊಯಿಲಿ, ಯೋಗಿ ಆದಿತ್ಯನಾಥ ವಿರುದ್ಧ ಹರಿಹಾಯ್ದರು.

'ನಕ್ಸಲವಾದವನ್ನು ಬೆಂಬಲಿಸುವವರಿಂದ ಛತ್ತೀಸ್ ಘಡ ಉದ್ಧಾರವಾಗುವುದಿಲ್ಲ''ನಕ್ಸಲವಾದವನ್ನು ಬೆಂಬಲಿಸುವವರಿಂದ ಛತ್ತೀಸ್ ಘಡ ಉದ್ಧಾರವಾಗುವುದಿಲ್ಲ'

ಯೋಗಿ ಅವರು ಮೊದಲು ತಪಸ್ವಿಯಂತೆ ಇರಲಿ. ಅವರಿಗೆ ಸನ್ಯಾಸಿ ಆಗಲು ಸಾಧ್ಯವಾಗದೆ ಇದ್ದರೆ ಅವರನ್ನು 'ಯೋಗಿ' ಎಂದು ಕರೆಯ ಬಾರದು ಎಂದು ಹೇಳಿದರು.

ಅಮಿತ್ ಶಾ ಹೆಸರನ್ನು ಮೊದಲು ಬದಲಿಸಿ: ಮುಖ್ಯಮಂತ್ರಿ ಯೋಗಿಗೆ ಸವಾಲ್ ಅಮಿತ್ ಶಾ ಹೆಸರನ್ನು ಮೊದಲು ಬದಲಿಸಿ: ಮುಖ್ಯಮಂತ್ರಿ ಯೋಗಿಗೆ ಸವಾಲ್

ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.

yogi adityanath cannot be called a yogi veerappa moily chhattisgarh

ಯೋಗಿಯು ಸನ್ಯಾಸಿಯಾಗಿಯೇ ಬದುಕಬೇಕು ಎಂದು ಯಾವ ಶಾಸ್ತ್ರ ಹೇಳಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ವಿದೂಷಕ ಯುವರಾಜನ ಬಗ್ಗೆ ಬೇಸರಗೊಂಡಿರುವ ಮೊಯಲಿ ತಮ್ಮ ಸಿಟ್ಟನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರು ಛತ್ತೀಸ್ ಗಢಕ್ಕೆ ಬಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಕಾರಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಫೈಜಾಬಾದ್ ಇನ್ನು ಮುಂದೆ ಅಯೋಧ್ಯಾ: ಯೋಗಿಯಿಂದ ಮತ್ತಷ್ಟು ಹೆಸರು ಬದಲುಫೈಜಾಬಾದ್ ಇನ್ನು ಮುಂದೆ ಅಯೋಧ್ಯಾ: ಯೋಗಿಯಿಂದ ಮತ್ತಷ್ಟು ಹೆಸರು ಬದಲು

ಯೋಗಿ ಈಗಾಗಲೇ ಸನ್ಯಾಸಿ ಆಗಿದ್ದಾರೆ. ಆದರೆ ನಿಮ್ಮ ಬಗ್ಗೆ ಏನು? ನಿಮ್ಮ ಎಲ್ಲವನ್ನೂ ತ್ಯಾಗ ಮಾಡಿ ನಿಮ್ಮ 50 ವರ್ಷ ಹಳೆಯ ಪಕ್ಷದ ಅಧ್ಯಕ್ಷರ ಜೊತೆ ಏಕೆ ತೀರ್ಥಯಾತ್ರೆ ಹೋಗಬಾರದು ಎಂದು ಲೇವಡಿ ಮಾಡಿದ್ದಾರೆ.

English summary
Congress senior leader Veerappa Moily on Friday said that, yogi should be like a ascetic first, When he is not a ascetic person, he cannot be called a Yogi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X