ಮಗು, ನೀನೂ ಝಾನ್ಸಿ ರಾಣಿ ಆಗು ಅಂತಿದ್ದಾರಾ ಯೋಗಿ..?!

Posted By:
Subscribe to Oneindia Kannada

ಝಾನ್ಸಿ, ಏಪ್ರಿಲ್ 21: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುತ್ತಿದ್ದಂತೆಯೇ ಒಂದು ದಿನವೂ ವಿಶ್ರಾಂತಿಯಿಲ್ಲದೆ ಉತ್ತರ ಪ್ರದೇಶದಾದ್ಯಂತ ಓಡಾಡುತ್ತಿರುವ ಯೋಗಿ ಆದಿತ್ಯನಾಥ್ ನಿನ್ನೆ ವೀರ ರಾಣಿ ಲಕ್ಷ್ಮಿಬಾಯಿಯ ತಾಯ್ನಾಡು ಝಾನ್ಸಿ(ಏಪ್ರಿಲ್ 20)ಗೆ ತೆರಳಿದ್ದರು. ಅಲ್ಲಿನ ಶಾಲೆಯೊಂದಕ್ಕೆ ತೆರಳಿದ್ದ ಯೋಗಿ ಆದಿತ್ಯನಾಥ್ ಮಕ್ಕಳಿಗೆ ದೇಶಸೇವೆಯ, ರಾಷ್ಟ್ರಭಕ್ತಿಯ ಪಾಠ ಮಾಡಿದರು.

ಇತ್ತ ಯೋಗಿ ಆದಿತ್ಯನಾಥ್ ಮಕ್ಕಳಿಗೆ ಶಾಂತಿ, ಸಂಯಮದ ಪಾಠ ಹೇಳುತ್ತಿದ್ದರೆ ಅತ್ತ ಶ್ರೀನಗರದಲ್ಲಿ ವಿದ್ಯಾರ್ಥಿಗಳೇ ಪೊಲೀಸರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿ ಏಪ್ರಿಲ್ 9 ರಂದು ನಡೆದ ಉಪಚುನಾವಣೆಯ ಸಮಯದಲ್ಲಿ ಉಂಟಾಗಿದ್ದ ಹಿಂಸಾಚಾರದಲ್ಲಿ ಕಾಲೇಜು ಯುಕನೊಬ್ಬನ ಕೈವಾಡವಿದೆ ಎಂಬ ಮಾಹಿತಿ ಪಡೆದ ಪೊಲೀಸರು, ಆ ಹುಡುಗನನ್ನು ಹುಡುಕುವುದಕ್ಕಾಗಿ ಕಾಲೇಜಿಗೇ ಧಾವಿಸಿದ್ದರು. ಈ ಸಂದರ್ಭಲ್ಲಿ ಪೊಲೀಸರು ಕೆಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಇದನ್ನು ವಿರೋಧಿಸಿದ ಅಲ್ಲಿನ ವಿದ್ಯಾರ್ಥಿಗಳು ಕಳೆದ ಕೆಲ ದಿನಗಳಿಂದ ಪೊಲೀಸ್ ಠಾಣೆಯ ಮೇಲೆ ಕಲ್ಲು ಎಸೆಯುವ ಮೂಲಕ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ! ಅತ್ತ ಯೋಗಿಯ ಶಾಂತಿಯ ಪಾಠ, ಇತ್ತ ವಿದ್ಯಾರ್ಥಿ ಮತ್ತು ಪೊಲೀಸರ ಹಿಂಸೆಯ ಮಂತ್ರ! ಒಂದೇ ದೇಶದ ಎರಡು ಪ್ರಮುಖ ರಾಜ್ಯಗಳ ಇಬ್ಬಂದಿ ತನ ಇದು!

ಮಗು, ನೀನೂ ಝಾನ್ಸಿ ರಾಣಿ ಆಗು...

ಮಗು, ನೀನೂ ಝಾನ್ಸಿ ರಾಣಿ ಆಗು...

ಝಾನ್ಸಿಯ ಶಾಲೆಯೊಂದಕ್ಕೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಹೆಣ್ಣುಮಗುವೊಬ್ಬಳ ಬೆನ್ನುತಟ್ಟುತ್ತಿದ್ದ ದೃಶ್ಯ ನಿನ್ನೆ ಮಾಧ್ಯಮಗಳಲ್ಲಿ ಕಂಡುಬಂದಿತ್ತು. ವೀರ ರಾಣಿ ಝಾನ್ಸಿಯ ಲಕ್ಷ್ಮಿಬಾಯಿಯ ನೆಲದಲ್ಲಿ ಹುಟ್ಟಿದ ಈ ಹೆಣ್ಣು ಮಗುವಿನ ಬಳಿ, 'ನೀನೂ ಝಾನ್ಸಿ ರಾಣಿ ಆಗು' ಎನ್ನುತ್ತಿದ್ದಾರಾ ಯೋಗಿ ಆದಿತ್ಯನಾಥ್?! [ಮಹಾಪುರುಷರ ಜಯಂತಿಗೆ ಶಾಲೆಗಿಲ್ಲ ರಜಾ: ಯೋಗಿ ಆದಿತ್ಯನಾಥ್]

ಪೊಲೀಸ್ ವಿರುದ್ಧ ಪ್ರತಿಭಟನೆ

ಪೊಲೀಸ್ ವಿರುದ್ಧ ಪ್ರತಿಭಟನೆ

ಅತ್ತ ಹೆಣ್ಣುಮಗಳೊಬ್ಬಳು ಯೋಗಿ ಆದಿತ್ಯನಾಥ್ ಅವರ ಹಾರೈಕೆ ಪಡೆಯುತ್ತಿದ್ದರೆ, ಇತ್ತ ಕಾಶ್ಮೀರದಲ್ಲಿ ಬುರ್ಕಾ ಧರಿಸಿದ ಹೆಣ್ಣು ಮಗಳೊಬ್ಬಳು ಪೊಲೀಸ್ ದೌರ್ಜನ್ಯ ಖಂಡಿಸಿ, ಪೊಲೀಸರತ್ತ ಕಲ್ಲು ಎಸೆಯುತ್ತಿದ್ದಾಳೆ!(ಕಾರು ಹರಿಸಿ ಮೂವರನ್ನು ಹತ್ಯೆಗೈದ 12ನೇ ಕ್ಲಾಸ್ ವಿದ್ಯಾರ್ಥಿ)

ಅಭಿ-ಐಶ್ ಮೋಡಿ

ಅಭಿ-ಐಶ್ ಮೋಡಿ

ಬಾಲಿವುಡ್ ನ ಬಿಗ್ ಬಿ ಮನೆತನದ ಜನಪ್ರಿಯ ತಾರಾಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮುಂಬೈನ ಸಿದ್ದಿವಿನಾಯಕ ದೇವಾಲಯವೊಂದಕ್ಕೆ ತೆರಳಿ ದೇವರ ಆಶೀರ್ವಾದ ಪಡೆದರು. ನೆಚ್ಚಿನ ತಾರಾಜೋಡಿಯನ್ನು ನೋಡುವುದಕ್ಕಾಗಿ ಜನರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು.[ತಂದೆಯ ಉತ್ತರಾದಿ ಕ್ರಿಯೆಗಾಗಿ ಮಂಗಳೂರಿಗೆ ಬಂದ ಐಶ್ವರ್ಯಾ ರೈ]

ಕಂತೆ ಕಂತೆ ಹೊಸ ನೋಟು

ಕಂತೆ ಕಂತೆ ಹೊಸ ನೋಟು

ಉತ್ತರ ಪ್ರದೇಶದ ನೋಯ್ಡಾದಲ್ಲಿ ತೆರಿಗೆ ಅಧಿಕಾರಿಯೊಬ್ಬರ ಮನೆಯಲ್ಲಿ ಕಂತೆ ಕಂತೆ ಹೊಸ ನೋಟುಗಳು ಪತ್ತೆಯಾಗಿದ್ದು, ಎಸಿಬಿ ಪೊಲೀಸರ ಭರ್ಜರಿ ಬೇಟೆ ಅನ್ನಿಸಿತು. ಈ ಕಂತೆಗಳಲ್ಲಿ ಒಟ್ಟು ಎಷ್ಟು ಹಣವಿದೆ ಎಂಬುದನ್ನು ಲೆಕ್ಕಮಾಡುವುದಕ್ಕೆ ಬಹುಶಃ ಸ್ವಲ್ಪ ಸಮಯ ಹಿಡಿಯಬಹುದು![ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ]

ಸಾಂತ್ವನ ಹೇಳಿದ ಗೃಹಮಂತ್ರಿ

ಸಾಂತ್ವನ ಹೇಳಿದ ಗೃಹಮಂತ್ರಿ

ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಚಿಕ್ಕಮಗಳೂರು ಜಿಲ್ಲೆಯ ಹನುಮಪುರದ ರೈತರೊಬ್ಬರ ಮನೆಗೆ ತೆರಳಿದ್ದ ಕರ್ನಾಟಕ ಗೃಹಮಂತ್ರಿ ಜಿ.ಪರಮೇಶ್ವರ್ ರೈತರ ಪತ್ನಿ-ಮಕ್ಕಳು ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.[ಲೆಕ್ಕಕ್ಕೇ ಸಿಗದ ರೈತರ ಆತ್ಮಹತ್ಯೆ ಸರಣಿಗೆ ಮೈಸೂರಿನ ಮೂವರು ಸೇರ್ಪಡೆ]

ಅನಾಚಾರವನ್ನೆಲ್ಲ ಕಪ್ಪು ಬಟ್ಟೆ ಮುಚ್ಚಿಬಿಡುತ್ತಾ..?

ಅನಾಚಾರವನ್ನೆಲ್ಲ ಕಪ್ಪು ಬಟ್ಟೆ ಮುಚ್ಚಿಬಿಡುತ್ತಾ..?

ಮಾದಕ ದ್ರವ್ಯ ಮತ್ತು ಲೈಂಗಿಕ ಹಗರಣದಲ್ಲಿ ಬಂಧನಕ್ಕೊಳಗಾದ ಡಾ.ಸುನಿಲ್ ಕುಲಕರ್ಣಿ ಅವರನ್ನು ಮುಂಬೈನ ಕಿಲ್ಲಾ ನ್ಯಾಯಾಲಯಕ್ಕೆ ಕರೆತರುವಾಗ ಅವರು ಕಂಡಿದ್ದು ಹೀಗೆ...! ಮಾಡಿದ ಅನಾಚಾರವನ್ನೆಲ್ಲ ಮುಸುಕು ಹಾಕಿದ ಕಫ್ಪು ಬಟ್ಟೆ ಮುಚ್ಚಿಹಾಕುತ್ತಾ..?!

ಇನ್ಮೇಲೆ ನಾನೂ ಸಾಮಾನ್ಯ ವ್ಯಕ್ತಿ!

ಇನ್ಮೇಲೆ ನಾನೂ ಸಾಮಾನ್ಯ ವ್ಯಕ್ತಿ!

ಕೇಂದ್ರ ಸರ್ಕಾರ ವಿಐಪಿ ಸಂಸ್ಕೃತಿಗೆ ಮಂಗಳ ಹಾಡುವುದಕ್ಕಾಗಿ ಮಂತ್ರಿಗಳ ಕಾರಿಗೆ ಕೆಂಪು ದೀಪ ಬಳಸುವುದನ್ನು ನಿಷೇಧಿಸಿದ ನಡೆಗೆ ಬೆಂಬಲ ಸೂಚಿಸಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ತಮ್ಮ ಕಾರಿನ ಕೆಂಪು ದೀಪವನ್ನು ತಮ್ಮ ಕೈಯಾರೆ ತೆಗೆದರು. ಇನ್ಮೇಲೆ ನಾನೂ ಎಲ್ಲರಂತೆ ಸಾಮಾನ್ಯ ವ್ಯಕ್ತಿ ಎನ್ನುತ್ತಿದ್ದಾರಾ ಅವರು?![ಗೂಟದ ಕಾರಿನ ಬಳಕೆ ನಿಂತರೆ ಖುಷಿ ಪಡೋರು ಪೊಲೀಸರು]

ನಮಗಿಲ್ಲ ಯಾರ ಹಂಗು..!

ನಮಗಿಲ್ಲ ಯಾರ ಹಂಗು..!

ಬೇಸಿಗೆಯ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ, ನಮಗೆ ಬೇಸಿಗೆ ಬಿಸಿಲ ಹಂಗಿಲ್ಲ ಎನ್ನುತ್ತ ಲಕ್ನೋದ ಗೋಮತಿ ನದಿಯಲ್ಲಿ ಮಿಂದೇಳುತ್ತಿದ್ದ ಇಬ್ಬರು ಬಾಲಕರ ಸಂಭ್ರಮ ಕಂಡುಬಂದಿದ್ದು ಹೀಗೆ![ಬಟಾಬಯಲಾದ ಕೆಆರ್ಎಸ್ ನಲ್ಲಿ ಕ್ರಿಕೆಟ್ ಆಡೋಣ ಬನ್ನಿ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uttar Pradesh Chief Minister Yogi Aditiyanath encouraging a shcool student during his visit in school of Jhansi on Thursday
Please Wait while comments are loading...