ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕತ್ವ ಪ್ರಶ್ನಿಸಿದ ಯಾದವ್, ಭೂಷಣ್ ಗೆ ಉಚ್ಚಾಟನೆ ಶಿಕ್ಷೆ

|
Google Oneindia Kannada News

ನವದೆಹಲಿ, ಮಾ, 28 : ಕಳೆದ ಕೆಲ ದಿನಗಳಿಂದ ಆಮ್ ಆದ್ಮಿ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತ ಶನಿವಾರ ತಾರಕ್ಕೇರಿದ್ದು, ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾತನಾಡಿದ ಸಂಸ್ಥಾಪಕ ಸದಸ್ಯರು ಸ್ಥಾನ ಕಳೆದುಕೊಂಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವವನ್ನು ಪ್ರಶ್ನಿಸಿದ್ದಕ್ಕೆ ಪಕ್ಷದ ಸಂಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಉಚ್ಛಾಟಿಸಲಾಗಿದೆ.[ಎಎಪಿ ಹಿರಿಯ ನಾಯಕರಿಗೆ ಉಚ್ಚಾಟನೆ ಭೀತಿ]

ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೊದಲು ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕರ ಉಚ್ಚಾಟನೆಗೂ ಮುನ್ನ ಸಭೆಯಿಂದ ಹೊರನಡೆದರು.

Yogendra Yadav, Prashant Bhushan removed from AAP National Council

ನಂತರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಉಚ್ಚಾಟನೆ ಪ್ರಸ್ತಾವನೆಯನ್ನು ಸಭೆಯ ಮುಂದಿಟ್ಟಾಗ ಬಹುಮತದಲ್ಲಿ ಅಂಗೀಕಾರವಾಯಿತು. 300 ಜನ ಸದಸ್ಯರಲ್ಲಿ 200 ಜನ ಉಚ್ಚಾಟನೆ ಪರ ಮತ ಹಾಕಿದರು.[ಆಮ್ ಆದ್ಮಿ ಪಕ್ಷದೊಳಗಿನ ಭಿನ್ನಮತಕ್ಕೆ ಕಾರಣವೇನು?]

ಸಭೆ ಆರಂಭಕ್ಕೂ ಮುನ್ನ ಯೋಗೆಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಧರಣಿ ಕುಳಿತಿದ್ದರು. ಈ ವೇಳೆ ಘರ್ಷಣೆ ನಡೆದಿದ್ದು ಕೇಜ್ರಿವಾಲ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರಶಾಂತ್ ಭೂಷಣ್ ಆರೋಪ ಮಾಡಿದ್ದಾರೆ. ಜತೆಗೆ ಯೋಗೇಂದ್ರ ಯಾದವ್ ಬೆಂಬಲಿಗರಾದ ಆನಂದ್ ಕುಮಾರ್ ಮತ್ತು ಅಜಿತ್ ಝಾ ಅವರನ್ನು ಸಹ ರಾಷ್ಟೀಯ ಕಾರ್ಯಕಾರಿಣಿ ಸಮಿತಿಯಿಂದ ಉಚ್ಚಾಟಿಸಲಾಗಿದೆ. ಆದರೆ ಯಾದವ್ ಅವರ ಬಹುತೇಕ ಬೆಂಬಲಿಗರು ಸಭೆಗೆ ಗೈರಾಗಿದ್ದರು.

English summary
Yogendra Yadav and Prashant Bhushan, the two senior Aam Aadmi Party (AAP) leaders, who had a serious clash with the party's top leadership, were on Saturday removed from the party's National Executive during a meeting of the body . Two hundred out of 300 members of the council signed the petition to oust the duo, reports said. They were removed from the party's political affairs committee earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X