• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಮೋದಿ ಯುಗ ಪುರುಷ; ಸ್ಟೇಡಿಯಂಗೆ ಅವರ ಹೆಸರಿಡುವುದರಲ್ಲಿ ತಪ್ಪೇನಿದೆ?"

|
Google Oneindia Kannada News

ಹರಿದ್ವಾರ, ಫೆಬ್ರವರಿ 26: ಪ್ರಧಾನಿ ನರೇಂದ್ರ ಮೋದಿ "ಯುಗಪುರಷ". ಸ್ಟೇಡಿಯಂಗೆ ಅವರ ಹೆಸರಿಟ್ಟಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಯೋಗಗುರು ರಾಮದೇವ್ ಮೋದಿಯನ್ನು ಹೊಗಳಿದ್ದಾರೆ.

"ಹಳೆಯ ಕಟ್ಟಡಗಳಿಗೆ, ಸ್ಮಾರಕಗಳಿಗೆ ಆ ಕಾಲದ ಪ್ರಮುಖರ, ಸಾಧಕರ ಹೆಸರಿಡುವುದಾದರೆ, ಈಗ ಯುಗ ಪುರುಷನಂತಿರುವ ನರೇಂದ್ರ ಮೋದಿ ಅವರ ಹೆಸರನ್ನು ಕ್ರೀಡಾಂಗಣಕ್ಕೆ ಏಕಿಡಬಾರದು" ಎಂದು ರಾಮ್‌ದೇವ್ ಪ್ರಶ್ನಿಸಿದ್ದಾರೆ.

ಸರ್ದಾರ್‌ ಪಟೇಲ್‌ಗೆ ಅವಮಾನ; ಸ್ಟೇಡಿಯಂಗೆ ಮೋದಿ ಹೆಸರು ನಾಮಕರಣಕ್ಕೆ ಕಾಂಗ್ರೆಸ್ ವಿರೋಧಸರ್ದಾರ್‌ ಪಟೇಲ್‌ಗೆ ಅವಮಾನ; ಸ್ಟೇಡಿಯಂಗೆ ಮೋದಿ ಹೆಸರು ನಾಮಕರಣಕ್ಕೆ ಕಾಂಗ್ರೆಸ್ ವಿರೋಧ

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೊಟೆರಾ ಸ್ಟೇಡಿಯಂ (ಸರ್ದಾರ್ ಪಟೇಲ್ ಸ್ಟೇಡಿಯಂ) ಹೆಸರನ್ನು 'ನರೇಂದ್ರ ಮೋದಿ ಸ್ಟೇಡಿಯಂ' ಎಂದು ಬುಧವಾರ ಮರು ನಾಮಕರಣ ಮಾಡಲಾಗಿತ್ತು. ಇದು ರಾಜಕೀಯ ಜಗಳಕ್ಕೆ ಕಾರಣವಾಗಿದ್ದು, ಇದು ಸರ್ದಾರ್ ಪಟೇಲ್ ಅವರಿಗೆ ಅವಮಾನ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಈ ಬಗ್ಗೆ ಟೀಕೆ ಮಾಡಿದ್ದು, ಇಡೀ ದೇಶಕ್ಕೇ ಮೋದಿ ಎಂದು ಹೆಸರಿಡಲಿ ಎಂದಿದ್ದರು. ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಖಂಡಿಸಿರುವ ರಾಮದೇವ್, ಇದು ರಾಜಕೀಯ ಪ್ರೇರಿತ ಹೇಳಿಕೆಯಷ್ಟೇ ಎಂದಿದ್ದಾರೆ.

English summary
Yoga guru Ramdev described PM Narendra Modi as a "yugpurush", saying there is nothing wrong in naming a stadium after him
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X