ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೌದು ಚೀನಾ, 1962ರಲ್ಲೇ ಭಾರತದ ಜಾಗವನ್ನು ವಶಪಡಿಸಿಕೊಂಡಿದೆ: ಲಡಾಖ್ ಸಂಸದ

|
Google Oneindia Kannada News

ನವದೆಹಲಿ, ಜೂನ್ 10: ಹೌದು, ಚೀನಾವು 1962ರಲ್ಲೇ ಭಾರತದ ಭೂ ಪ್ರದೇಶವನ್ನು ವಶಪಡಿಸಿಕೊಂಡಿತ್ತು ಎಂದು ಹೇಳುವ ಮೂಲಕ ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

Recommended Video

ಕೊರೊನಾದಿಂದ ಪ್ರಾಣಕಳೆದುಕೊಂಡ ಶಾಸಕ | DMK MLA | J Anbazhagan | Oneindia Kannada

ಲಡಾಖ್ ಗಡಿಯಲ್ಲಿ ಚೀನಾ ಸೇನೆ ಅತಿಕ್ರಮಣ ಮಾಡಿ ಭಾರತದ ನೆಲವನ್ನು ಕಬಳಿಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದರು. ಇದಕ್ಕೆ ಲಡಾಖ್ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಉತ್ತರ ನೀಡಿದ್ದಾರೆ.

ಲಡಾಖ್‌ನಲ್ಲಿ ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆಯೇ: ರಾಹುಲ್ ಪ್ರಶ್ನೆ ಲಡಾಖ್‌ನಲ್ಲಿ ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆಯೇ: ರಾಹುಲ್ ಪ್ರಶ್ನೆ

ಜಮ್ಯಾಂಗ್ ಅವರು ಭಾರತದ ನೆಲ ಸುರಕ್ಷಿತವಾಗಿರುವುದನ್ನು ಸಾಬೀತುಪಡಿಸಿದ್ದಾರೆ. ಲಡಾಖ್ ನ ಒಂದು ಇಂಚು ಭೂಮಿಯೂ ಚೀನಾದ ಪಾಲಾಗಿಲ್ಲ. ಆದರೆ ರಾಹುಲ್ ಗಾಂಧಿ ಮಾತ್ರ ಜನರ ದಾರಿ ತಪ್ಪಿಸುವ ಕೆಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಏನೇನು ಆಗಿತ್ತು?

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಏನೇನು ಆಗಿತ್ತು?

ಅದೇ ಅಲ್ಲದೆ ಕಾಂಗ್ರೆಸ್ ಅವಧಿಯಲ್ಲಿ ಭಾರತ ಭೂಮಿಯನ್ನು ಚೀನಾ ಪಡೆಸಿಕೊಂಡಿರುವುದಕ್ಕೆ ಮಾಹಿತಿ ನೀಡಿದ್ದಾರೆ. ಹೌದು ಲಡಾಖ್ ನಲ್ಲಿ ಭಾರತದ ನೆಲವನ್ನು ಕಬಳಿಸಲಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಗಳಲ್ಲಿ ಚೀನಿಯರ ಪಾಲಾಗಿರುವ ಲಡಾಖ್ ನ ಪ್ರದೇಶಗಳ ಕುರಿತು ಮಾಹಿತಿ ನೀಡಿದ್ದಾರೆ.

1962ರಲ್ಲಿ ಏನಾಗಿತ್ತು?

1962ರಲ್ಲಿ ಏನಾಗಿತ್ತು?

1962ರಲ್ಲಿ ಕಾಂಗ್ರೆಸ್ ಆಡಳಿತವಾಧಿಯಲ್ಲಿ ಅಕ್ಸಾಯ್ ಚಿನ್ ನ 37,244 ಚದರ ಕಿ.ಮೀ ಜಾಗವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಯುಪಿಎ ಅವಧಿಯಲ್ಲಿ ಟಿಯಾ ಪಂಗ್ನಾಕ್ ಮತ್ತು ಚಬ್ಜಿ ವ್ಯಾಲಿ ಚೀನಾ ವಶ. 2008ರಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಡೆಮ್ಜಾಕ್ ನ ಜೊರಾವರ್ ಕೋಟೆಯನ್ನು ಚೀನಾ ಸೇನೆ ನಾಶಪಡಿಸಿತ್ತು. ಡೂಮ್ ಚೆಲೆ ಭೂಪ್ರದೇಶ ಯುಪಿಎ ಅವಧಿಯಲ್ಲಿ ಚೀನಾ ಕೈವಶವಾಗಿತ್ತು.

ರಾಜನಾಥ್‌ಸಿಂಗ್ ಟ್ವೀಟ್‌ನೋಡಿ ರಾಹುಲ್ ಗಾಂಧಿಗೆ ಕೋಪ

ರಾಜನಾಥ್‌ಸಿಂಗ್ ಟ್ವೀಟ್‌ನೋಡಿ ರಾಹುಲ್ ಗಾಂಧಿಗೆ ಕೋಪ

ಕೈ' ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)ನ ಚಿಹ್ನೆಯಾಗಿರುವ ಕಾರಣ ರಾಜನಾಥ್ ಸಿಂಗ್ ಟ್ವೀಟ್ ಗೆ ರಾಹುಲ್ ಗಾಂಧಿ ಕೆರಳಿದ್ದಾರೆ. ರಾಜನಾಥ್ ಟ್ವೀಟ್ ಮಾಡಿರುವ ಕೈ ನೋವಿನ ಬಗೆಗಿನ ಸಾಲುಗಳನ್ನು 20 ನೇ ಶತಮಾನದ ಕವಿ ಮಂಜಾರ್ ಬರೆದಿದ್ದಾರೆ. ರಾಜನಾಥ್ ಸಿಂಗ್ ಅವರು 'ಹೃದಯ' ಎಂದಿರುವ ಕಡೆ ' ಕೈ' ಎಂದು ಬದಲಾಯಿಸಿದ್ದಾರೆ.

ರಾಹುಲ್ ಗಾಂಧಿ ಏನೆಂದು ಟ್ವೀಟ್ ಮಾಡಿದ್ದರು

ರಾಹುಲ್ ಗಾಂಧಿ ಏನೆಂದು ಟ್ವೀಟ್ ಮಾಡಿದ್ದರು

ಲಡಾಖ್‌ನಲ್ಲಿ ಭಾರತಕ್ಕೆ ಸೇರಿದ್ದ ಭೂಪ್ರದೇಶದವನ್ನು ಚೀನಾ ಆಕ್ರಮಿಸಿಕೊಂಡಿದೆಯೇ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ಗೆ ಪ್ರಶ್ನೆ ಮಾಡಿದ್ದಾರೆ. ರಾಜನಾಥ್ ಸಿಂಗ್ ಅವರು ಸೋಮವಾರ ಮಾಡಿದ್ದ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್, ಮಂಗಳವಾರದ ಟ್ವೀಟ್‌ನಲ್ಲಿ, ಕಾಂಗ್ರೆಸ್ ಪಕ್ಷದ ಚಿಹ್ನೆಯ ಕುರಿತು ಕಮೆಂಟ್ ಮಾಡಿರುವ ರಕ್ಷಣಾ ಸಚಿವರು ಚೀನಾದವರು ಭಾರತೀಯ ಭೂಪ್ರದೇಶವನ್ನು ಲಡಾಖ್‌ನಲ್ಲಿ ಆಕ್ರಮಿಸಿಕೊಂಡಿದ್ದಾರೆಯೇ? ಉತ್ತರಿಸಿ ಎಂದು ಹೇಳಿದ್ದಾರೆ. 'ಕೈ' ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)ನ ಚಿಹ್ನೆಯಾಗಿರುವ ಕಾರಣ ರಾಜನಾಥ್ ಸಿಂಗ್ ಟ್ವೀಟ್ ಗೆ ರಾಹುಲ್ ಗಾಂಧಿ ಕೆರಳಿದ್ದಾರೆ.

English summary
BJP MP from Ladakh Jamyang Tsering Namgyal on Tuesday responded to former Congress president Rahul Gandhi as the latter has been questioning the ruling government's "silence" over the border standoff with China in the Ladakh region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X