• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೆಸ್ ಬ್ಯಾಂಕ್ ಬಾಸ್ ಮತ್ತು ಪ್ರಿಯಾಂಕ ಗಾಂಧಿ ನಡುವೆ 'ಪೇಂಟಿಂಗ್ಸ್' ವ್ಯವಹಾರ

|

ನವದೆಹಲಿ, ಮಾರ್ಚ್ 9: ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯ ಬಲೆಗೆ ಸಿಕ್ಕಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಒಂದೊಂದೇ ಅವ್ಯವಹಾರಗಳು ಬಯಲಾಗುತ್ತಿವೆ.

ಈ ನಡುವೆ, ಹಲವು ವಿವಾದಗಳ ನಡುವೆ ಬ್ರಿಟಿಷ್ ಏರ್ವೇಶ್ ಮೂಲಕ ಲಂಡನ್ ತೆರಳಲು ಹೊರಟಿದ್ದ ರಾಣಾ ಕಪೂರ್ ಅವರ ಪುತ್ರಿ ರೋಷಿಣಿ ಕಪೂರ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.

ಯೆಸ್ ಬ್ಯಾಂಕ್; ರಾಣಾ ಕಪೂರ್‌ ಮಾ.11ರ ತನಕ ಇಡಿ ಕಸ್ಟಡಿಗೆ

ಬಗೆದಷ್ಟು ಯೆಸ್ ಬ್ಯಾಂಕ್ ಮಾಲೀಕನ ಅಕ್ರಮ ಹೊರಬೀಳುತ್ತಿದ್ದು, ಎರಡು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಿವಿಧ ಕಡೆ ಹೂಡಿಕೆಯನ್ನು ರಾಣಾ ಮಾಡಿದ್ದಾರೆ ಎನ್ನುವ ವಿಷಯ ತನಿಖೆಯ ವೇಳೆ ಬಹಿರಂಗಗೊಂಡಿದೆ.

ಯೆಸ್ ಬ್ಯಾಂಕ್ ರಗಳೆ: ಫುಡ್ ಕೂಪನ್, ಫೋನ್ ಪೇಗೂ ಸಂಚಕಾರ: ಬಡಪಾಯಿಗಳು ಕಣ್ರೀ ನಾವು

ಇದಲ್ಲದೇ ಲಂಡನ್ ನಲ್ಲಿ ಆಸ್ತಿ, ಕೋಟ್ಯಾಂತರ ರೂಪಾಯಿ ಮೌಲ್ಯದ ವರ್ಣಚಿತ್ರವನ್ನು (ಪೇಂಟಿಂಗ್ಸ್ ) ರಾಣಾ ಹೊಂದಿದ್ದಾರೆ. ರಾಣಾ ಕಪೂರ್ ನನ್ನು ಇಡಿ ಭಾನುವಾರ (ಮಾ 8) ಬಂಧಿಸಿದ್ದು, ಮಾರ್ಚ್ ಹನ್ನೊಂದರವರೆಗೆ ತನ್ನ ವಶಕ್ಕೆ ಪಡೆದುಕೊಂಡಿದೆ. ಪ್ರಿಯಾಂಕ ಗಾಂಧಿ ವಾಧ್ರಾರಿಂದ ಪೇಂಟಿಂಗ್ಸ್ ಖರೀದಿಸಿದ್ದ ರಾಣಾ:

ಇಡಿ ಅಧಿಕಾರಿಗಳ ತೀವ್ರ ವಿಚಾರಣೆ

ಇಡಿ ಅಧಿಕಾರಿಗಳ ತೀವ್ರ ವಿಚಾರಣೆ

ಇಡಿ ಅಧಿಕಾರಿಗಳು ಕಳೆದ 30 ತಾಸಿನಲ್ಲಿ ನಡೆಸಿದ ತೀವ್ರ ವಿಚಾರಣೆಯ ವೇಳೆ ರಾಣಾ ಹಲವಾರು ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಬೋಗಸ್ ಕಂಪೆನಿಗಳನ್ನು ರಾಣಾ ಹುಟ್ಟುಹಾಕಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ 44 ಪೇಂಟಿಂಗ್ಸ್ ಅನ್ನು ಹೊಂದಿದ್ದಾರೆಂದು ತಿಳಿದು ಬಂದಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ವರ್ಣಚಿತ್ರ ಖರೀದಿ

ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ವರ್ಣಚಿತ್ರ ಖರೀದಿ

ಮನಿ ಲಾಂಡರಿಂಗ್ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರು ಪ್ರಿಯಾಂಕಾ ಗಾಂಧಿ ವಾಧ್ರಾ ಅವರಿಂದ ವರ್ಣಚಿತ್ರವೊಂದನ್ನು ಎರಡು ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಎನ್ನುವ ಆಘಾತಕಾರಿ ವಿಷಯ ತನಿಖೆಯ ವೇಳೆ ಬಹಿರಂಗಗೊಂಡಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ರಾಣಾ ಕಪೂರ್ ಮತ್ತು ಪ್ರಿಯಾಂಕ ಗಾಂಧಿ ನಡುವೆ ಇನ್ನೇನಾದರೂ ವಾಣಿಜ್ಯ ವ್ಯವಹಾರ

ರಾಣಾ ಕಪೂರ್ ಮತ್ತು ಪ್ರಿಯಾಂಕ ಗಾಂಧಿ ನಡುವೆ ಇನ್ನೇನಾದರೂ ವಾಣಿಜ್ಯ ವ್ಯವಹಾರ

ಮೂಲಗಳ ಪ್ರಕಾರ, ರಾಣಾ ಕಪೂರ್ ಮತ್ತು ಪ್ರಿಯಾಂಕ ಗಾಂಧಿ ನಡುವೆ ಬೇರೆ ಇನ್ನೇನಾದರೂ ವಾಣಿಜ್ಯ ವ್ಯವಹಾರಗಳು ಇದೆಯೇ ಎನ್ನುವುದನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ರಾಣಾಗೆ ಪೇಂಟಿಂಗ್ಸ್ ಮಾರಾಟ ಮಾಡಿದ ವಿಚಾರವನ್ನು ಕಾಂಗ್ರೆಸ್ ಒಪ್ಪಿಕೊಳ್ಳಲೂ ಇಲ್ಲ, ನಿರಾಕರಿಸಿಯೂ ಇಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.

2010ರ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಪ್ರಿಯಾಂಕ ತೋರಿಸಿದ್ದಾರೆ

2010ರ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಪ್ರಿಯಾಂಕ ತೋರಿಸಿದ್ದಾರೆ

"ದೇಶದಲ್ಲಿ ನಡೆಯುವ ಒಂದೊಂದು ಹಣಕಾಸು ಅವ್ಯವಹಾರದ ನಡುವೆ ಕಾಂಗ್ರೆಸ್ಸಿಗೆ ಒಂದಲ್ಲಾ ಒಂದು ಲಿಂಕ್ ಇದ್ದೇ ಇರುತ್ತದೆ" ಎಂದು ಬಿಜೆಪಿ ವಕ್ತಾರ ಮಾಳವೀಯ ಟ್ವೀಟ್ ಮಾಡಿದ್ದಾರೆ. ಖ್ಯಾತ ವರ್ಣಚಿತ್ರಕಾರ ಎಂ.ಎಫ್. ಹುಸೇನ್ ಅವರ ಪೇಂಟಿಂಗ್ಸ್ ಅನ್ನು ಪ್ರಿಯಾಂಕ ಎರಡು ಕೋಟಿ ರೂಪಾಯಿಗೆ ರಾಣಾ ಅವರಿಗೆ ಮಾರಿದ್ದು, ಅದನ್ನು 2010ರ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಪ್ರಿಯಾಂಕ ತೋರಿಸಿದ್ದಾರೆಂದು ವರದಿಯಾಗಿದೆ.

English summary
Yes Bank Scam: Congrss General Secretary Priyanka Gandhi Vadhra Sold MF Hussain Paintings To Yes Bank Boss Rana Kapoor For Two Crores, Reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more