ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್‌ ಜೈಲಿನಲ್ಲಿ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ ಅಂತ್ಯ

|
Google Oneindia Kannada News

ನವದೆಹಲಿ,ಆಗಸ್ಟ್ 2: ಜುಲೈ 22 ರಂದು ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದ ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ಉಪವಾಸವನ್ನು ಕೊನೆಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದ ನಂತರ ಮಲಿಕ್‌ ತಮ್ಮ ಉಪವಾಸ ಅಂತ್ಯಗೊಳಿಸಿದ್ದಾರೆ. ತಿಹಾರ್ ಜೈಲಿನ ಕೊಠಡಿ ಸಂಖ್ಯೆ 7ರಲ್ಲಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ತನ್ನ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು.

Breaking: ಕಾಶ್ಮೀರ ಪ್ರತ್ಯೇಕವಾದಿ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆBreaking: ಕಾಶ್ಮೀರ ಪ್ರತ್ಯೇಕವಾದಿ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

ಅಧಿಕಾರಿಗಳ ಪ್ರಕಾರ, ಡಿಜಿ ಸಂದೀಪ್ ಗೋಯೆಲ್ ಅವರ ಮನವಿಯ ಮೇರೆಗೆ ಮಲಿಕ್ ತನ್ನ ಉಪವಾಸ ಸತ್ಯಾಗ್ರಹವನ್ನು ಎರಡು ತಿಂಗಳ ಅವಧಿಗೆ ಮುಂದೂಡಿದ್ದಾರೆ. ಜುಲೈ 26 ರಂದು ಮಲಿಕ್‌ರನ್ನು ಡಾ. ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜುಲೈ 29ರಂದು ಮತ್ತೆ ಜೈಲಿಗೆ ಕರೆತರಲಾಗಿತ್ತು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

2019 ರಲ್ಲಿ ಜೆಕೆಎಲ್‌ಎಫ್‌ ಅನ್ನು ನಿಷೇಧಿಸಿದ ಸ್ವಲ್ಪ ಸಮಯದ ನಂತರ ಮಲಿಕ್ ಬಂಧಿಸಲಾಗಿತ್ತು. 2022 ಮೇ 19 ರಂದು ಎನ್‌ಐಎ ನ್ಯಾಯಾಲಯವು ಭಯೋತ್ಪಾದಕ ನಿಧಿ ಪ್ರಕರಣಗಳಲ್ಲಿ ಮಲಿಕ್‌ರನ್ನು ದೋಷಿ ಎಂದು ಘೋಷಿಸಿತು. ಮೇ 25 ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಮಲಿಕ್‌ಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಎನ್‌ಐಎ ನ್ಯಾಯಾಲಯ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.

ಈ ವರ್ಷ ಜುಲೈ 15 ರಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಸಹೋದರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರನ್ನು ಜೆಕೆಎಲ್ಎಫ್‌ ಉಗ್ರಗಾಮಿಗಳು ಡಿಸೆಂಬರ್ 8, 1989 ರಂದು ಆಕೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮಲಿಕ್ ಅಪರಾಧಿ ಎಂದು ಹೇಳಲಾಗಿತ್ತು.

ರುಬಯ್ಯ ಅವರನ್ನು ಡಿಸೆಂಬರ್ 8, 1989ರಂದು ಶ್ರೀನಗರದಲ್ಲಿ ಅಪಹರಿಸಲಾಗಿತ್ತು. ಐದು ದಿನಗಳ ನಂತರ ಡಿಸೆಂಬರ್ 13 ರಂದು ಕೇಂದ್ರದಲ್ಲಿ ವಿ ಪಿ ಸಿಂಗ್ ಸರ್ಕಾರವು ಐದು ಭಯೋತ್ಪಾದಕರನ್ನು ವಿನಿಮಯವಾಗಿ ಬಿಡುಗಡೆ ಮಾಡಿದ ನಂತರ ಸೆರೆಯಿಂದ ಬಿಡುಗಡೆ ಮಾಡಲಾಯಿತು. ಈ ಪ್ರಕರಣದಲ್ಲಿ ಮಲಿಕ್ ಇತರರ ಜೊತೆ ಆರೋಪಿಯಾಗಿದ್ದನು.

ಜುಲೈನಲ್ಲಿ ಮಲಿಕ್ ಆರೋಗ್ಯದಲ್ಲಿ ಏರುಪೇರು

ಜುಲೈನಲ್ಲಿ ಮಲಿಕ್ ಆರೋಗ್ಯದಲ್ಲಿ ಏರುಪೇರು

ರುಬಯ್ಯ ಸಯೀದ್ ಅಪಹರಣ ಪ್ರಕರಣದ ಹೊರತಾಗಿ ಜನವರಿ 1990ರಲ್ಲಿ ಶ್ರೀನಗರದಲ್ಲಿ ನಾಲ್ವರು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲೂ ಮಲಿಕ್ ಪ್ರಕರಣ ಎದುರಿಸುತ್ತಿದ್ದಾರೆ. ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಜುಲೈ 27ರಂದು ಅವರನ್ನು ಡಾ.ರಾಮ್ ಮನೋಹರ್ ಲೋಹಿಯಾ (ಆರ್ ಎಂಎಲ್) ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶ್ರೀನಗರದಲ್ಲಿ ಯಾಸಿನ್‌ ಮಲಿಕ್‌ ಬೆಂಬಲಿಗರಿಂದ ದಾಂಧಲೆಶ್ರೀನಗರದಲ್ಲಿ ಯಾಸಿನ್‌ ಮಲಿಕ್‌ ಬೆಂಬಲಿಗರಿಂದ ದಾಂಧಲೆ

ಮಲಿಕ್‌ಗೆ ಗ್ಲೂಕೋಸ್ ಅಳವಡಿಕೆ

ಮಲಿಕ್‌ಗೆ ಗ್ಲೂಕೋಸ್ ಅಳವಡಿಕೆ

ಮಲಿಕ್‌ ರಕ್ತದೊತ್ತಡದಲ್ಲಿ ಸ್ವಲ್ಪ ಏರುಪೇರಾದ ಕಾರಣ ಸೋಮವಾರ ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ದೈಹಿಕ ಪರೀಕ್ಷೆಗಾಗಿ ವೈದ್ಯರೊಂದಿಗೆ ಸಂವಹನ ನಡೆಸಲಾಗಿದೆ. ಅವರು ಮೊದಲು ಇಂಟ್ರಾವೆನಸ್ (IV) ದ್ರವ ಅಥವಾ ಗ್ಲೂಕೋಸ್ ಅನ್ನು ಹಾಕಿದ್ದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದರು.

1989ರ ಅಪಹರಣ ಪ್ರಕರಣ

1989ರ ಅಪಹರಣ ಪ್ರಕರಣ

ಇದೇ ಜುಲೈ 15ರಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತ್ ಅವರ ಸಹೋದರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರು 1989 ರ ಅಪಹರಣ ಪ್ರಕರಣದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ಶುಕ್ರವಾರ ಇಲ್ಲಿನ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ

ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ

ಈ ಪ್ರಕರಣದಲ್ಲಿ ರುಬಯ್ಯ ಸಯೀದ್ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 23 ರಂದು ನೀಡಲಾಗಿದ್ದು, ಅದೇ ದಿನಾಂಕದಂದು ರುಬಯ್ಯ ಅವರಿಗೆ ಹಾಜರಾಗಲು ತಿಳಿಸಲಾಗಿದೆ. ರುಬಯ್ಯ ಸಯೀದ್ ಅವರ ಹೇಳಿಕೆಯನ್ನು ಜುಲೈ 15ರಂದು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಅವರು ಯಾಸಿನ್ ಮಲಿಕ್ ಅನ್ನು ಗುರುತಿಸಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕ ಆಗಸ್ಟ್ 23 ಆಗಿದೆ. ಅವರು ಒಟ್ಟು ನಾಲ್ವರು ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ಸಿಬಿಐ ವಕೀಲ ಮೋನಿಕಾ ಕೊಹ್ಲಿ ಎಎನ್‌ಐಗೆ ತಿಳಿಸಿದ್ದಾರೆ.

English summary
Banned Jammu and Kashmir Liberation Front chief Yasin Malik, who started his hunger strike in Tihar Jail on July 22, has ended his fast, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X