ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IT ಬಳಕೆ: ಉಗ್ರ ಯಾಸಿನ್ ಮುಂದೆ ಎನ್ಐಎ ಹಿಂದೆ

By Srinath
|
Google Oneindia Kannada News

ನವದೆಹಲಿ, ಸೆ.17: ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸೂತ್ರಧಾರಿ ಯಾಸಿನ್ ಭಟ್ಕಳ ಮತ್ತು ಅವನ ಸಹಚರರು ತಂತ್ರಜ್ಞಾನ ಬಳಕೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕಿಂತ (NIA) ತುಂಬಾ ತುಂಬಾ ಮುಂದಿದ್ದಾರೆ.

ಯಾಸಿನ್ ಭಟ್ಕಳ ಮತ್ತು ಅಸಾದುಲ್ಲಾ ಅಖ್ತರ್ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ತಾವು ದೇಶದ ಭದ್ರತೆಯನ್ನು ಹೇಗೆಲ್ಲ ಆಟವಾಡಿಸಿದಿವಿ/ ಅಣಕವಾಡಿಸಿದಿವಿ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಾರೆ. ಆತಂಕದ ವಿಷಯವೆಂದರೆ ಈ ಇಬ್ಬರೂ ಉಗ್ರರು ಮತ್ತು ಅವರು ತಮ್ಮ ಅನುಯಾಯಿಗಳಿಗೆ ಕಳುಹಿಸಿರುವ ಸುಮಾರು 30,000 ರಹಸ್ಯ ಸಂದೇಶಗಳನ್ನು ಬಿಡಿಸುವಲ್ಲಿ NIA ಅಧಿಕಾರಿಗಳಿಗೆ ಇನ್ನು ಸಾಧ್ಯವಾಗಿಲ್ಲ!

IT ಯಿಂದಾಗಿ ಲಷ್ಕರೆ ತೊಯ್ಬಾ ಸಹವಾಸ

IT ಯಿಂದಾಗಿ ಲಷ್ಕರೆ ತೊಯ್ಬಾ ಸಹವಾಸ

ಮತ್ತು ತಂತ್ರಜ್ಞಾನವನ್ನು ಅಚ್ಚುಕಟ್ಟಾಗಿ/ ನಿಖರವಾಗಿ ಬಳಕೆ ಮಾಡುವ ಮೂಲಕ ತಮ್ಮ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಲಷ್ಕರೆ ತೊಯ್ಬಾ ಜತೆ ನಿಕಟ ಸಂಪರ್ಕ ಹೊಂದಲು ಸಾಧ್ಯವಾಯಿತು. ಅತ್ತ, ಲಷ್ಕರೆ ತೊಯ್ಬಾ ಸಂಘಟನೆಯು ಅಲ್ ಖೈದಾಗಿಂತಲೂ ತಂತ್ರಜ್ಞಾನದಲ್ಲಿ ಹೈಟೆಕ್ ಆಗಿದೆ ಎಂದು ತಿಳಿದುಬಂದಿದೆ.

Google map, GPRS ಫೋನುಗಳ ಬಳಕೆ

Google map, GPRS ಫೋನುಗಳ ಬಳಕೆ

ಇನ್ನು e-mail chats, ಭದ್ರತಾ ಪಡೆಗಳ ಕಣ್ತಪ್ಪಿಸಿ ಕೊನೆಯ ಕ್ಷಣದಲ್ಲಿ ಕರಾರುವಕ್ಕಾಗಿ e-mails ರವಾನಿಸುವುದು, Google map ಬಳಕೆ, GPRS ಫೋನುಗಳ ಬಳಕೆಯಲ್ಲಿ ತಮ್ಮದು ಪಳಗಿದ ಕೈ ಎಂದು ಉಗ್ರರಿಬ್ಬರೂ ರಾಷ್ಟ್ರೀಯ ತನಿಖಾ ದಳದ ಮುಂದೆ ಹೇಳಿಕೊಂಡಿದ್ದಾರೆ.

ಸಂಕೇತಾಕ್ಷರಗಳ ಅತ್ಯಂತ ರಹಸ್ಯ ಸಂದೇಶ

ಸಂಕೇತಾಕ್ಷರಗಳ ಅತ್ಯಂತ ರಹಸ್ಯ ಸಂದೇಶ

ಉಗ್ರರ ನಡುವೆ ಸರಿದಾಡುವ ಪ್ರತಿಯೊಂದು e-mail ಸಂದೇಶಗಳೂ ಸಂಕೇತಾಕ್ಷರಗಳಲ್ಲಿ ಅತ್ಯಂತ ರಹಸ್ಯವಾಗಿ ರವಾನೆಯಾಗುತ್ತಿದ್ದವು. ಇನ್ನು ಸ್ಥಿರ ದೂರವಾಣಿ. ಮೊಬೈಲ್ ಫೋನುಗಳ ಬಳಕೆಯೂ ಉಗ್ರರಿಗೆ ನಿಷಿದ್ಧ. ತಂಡ ಚಿಕ್ಕದಾಗಿದ್ದರೂ ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ಚೊಕ್ಕವಾಗಿ ಕಾರ್ಯನಿರ್ವಹಿಸಿದೆ.

2006ರಲ್ಲಿ ಬಲೂಚಿಸ್ತಾನದ ಗಡಿಯಲ್ಲಿ ಯಾಸಿನ್ ತರಬೇತಿ

2006ರಲ್ಲಿ ಬಲೂಚಿಸ್ತಾನದ ಗಡಿಯಲ್ಲಿ ಯಾಸಿನ್ ತರಬೇತಿ

2006ರಲ್ಲಿ ಪಾಕಿಸ್ತಾನದ ಬಲೂಚಿಸ್ತಾನದ ಗಡಿಯಲ್ಲಿ ತಾನು ತರಬೇತಿ ಪಡೆದೆ ಎಂದು ಯಾಸಿನ್ ಭಟ್ಕಳ ಹೇಳಿದ್ದಾನೆ. NIA ಅಧಿಕಾರಿಗಳನ್ನು ದಿಕ್ಕುತಪ್ಪಿಸಲು ಲಷ್ಕರೆ ತೊಯ್ಬಾ ಸಂಘಟನೆ ಜತೆ ತಾನು ಸಂಪರ್ಕಿಸುತ್ತಿಲ್ಲ. ಅಸಲಿಗೆ ಅದೀಗ ಅಸ್ತಿತ್ವದಲ್ಲೇ ಇಲ್ಲ. ತಾನು ಅಲ್ ಖೈದಾ ಜತೆ ನಿಕಟ ಸಂಪರ್ಕದಲ್ಲಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಯಾಸಿನ್ ಹೇಳಿದ ಎಂದು ಲಷ್ಕರೆ ತೊಯ್ಬಾ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಒಪ್ಪಲು NIA ಅಧಿಕಾರಿಗಳು ಸಿದ್ಧರಿಲ್ಲ.

English summary
Yasin Bhatkal and Asadullah way ahead of security agencies in Informatin Technology use. Investigations against arrested Indian Mujahideen operatives Yasin Bhatkal and Asadullah Akhtar have revealed that security agencies, seeking to keep tabs on terror activities, may be far behind their targets when it comes to tech competence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X