ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಮುಖಂಡ ಯಶವಂತ ಸಿನ್ಹಾರಿಂದ 'ರಾಷ್ಟಮಂಚ್' ಸ್ಥಾಪನೆ

By Mahesh
|
Google Oneindia Kannada News

ನವದೆಹಲಿ, ಜನವರಿ 29: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಯಶವಂತ ಸಿನ್ಹಾ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಸರ್ಕಾರದ ಆಡಳಿತ, ದೇಶದ ಪರಿಸ್ಥಿತಿ ಬಗ್ಗೆ ರಾಜಕೀಯ ನಾಯಕರಿಗಾಗಿ ರಾಷ್ಟ್ರಮಂಚ್ ಎಂಬ ವೇದಿಕೆಯನ್ನು ನಿರ್ಮಾಣ ಮಾಡಿದ್ದು, ಮಂಗಳವಾರದಂದು ಲೋಕಾರ್ಪಣೆಗೊಳ್ಳಲಿದೆ.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಬಿಜೆಪಿಯ ನೇತೃತ್ವ ವಹಿಸಿಕೊಂಡ ಬಳಿಕ ಯಶವಂತ ಸಿನ್ಹಾ ಸೇರಿದಂತೆ ಹಿರಿಯ ನಾಯಕರನ್ನು ಕಡೆಗಣಿಸಲಾಗಿತ್ತು. ಯಶವಂತ ಸಿನ್ಹಾ ಅವರ ರಾಷ್ಟ್ರಮಂಚ್ ಗೆ ಸೇರಲು ಉತ್ಸುಕರಾಗಿರುವುದಾಗಿ ತೃಣಮೂಲ ಕಾಂಗ್ರೆಸ್ಸಿನ ಸಂಸದ ದಿನೇಶ್ ತ್ರಿವೇದಿ ಘೋಷಿಸಿದ್ದಾರೆ.

Yashwant Sinha to launch 'Rashtra Manch' tomorrow; TMC MP joins him

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಸಿನ್ಹಾ ಅವರು ಮೋದಿ ಸರ್ಕಾರದ ನಿಲುವುಗಳನ್ನು ಹಲವು ಬಾರಿ ಖಂಡಿಸಿದ್ದಾರೆ. ಮೋದಿ ಸರ್ಕಾರದ ಆರ್ಥಿಕ ನೀತಿ, ಇತ್ತೀಚಿನ ನ್ಯಾಯಾಂಗ ವ್ಯವಸ್ಥೆಯ ಬಿಕ್ಕಟ್ಟನ್ನು ಕಟುವಾಗಿ ಸಿನ್ಹಾ ಟೀಕಿಸಿದ್ದಾರೆ.

ಮುಂದಿನ ವರ್ಷಾರಂಭದಲ್ಲಿ ಲೋಕಸಭೆ ಚುನಾವಣೆ ಎದುರಿಸಲಿರುವ ಎನ್ ಡಿಎ ಸರ್ಕಾರಕ್ಕೆ ಎದುರಾಗಿ ಈ ವೇದಿಕೆ ಕಾರ್ಯನಿರ್ವಹಿಸುವ ಸಾದ್ಯತೆಯಿದೆ.

'ನಾನು ನನ್ನ ಕರ್ತವ್ಯದಿಂದ ವಿಮುಖನಾಗುವುದಿಲ್ಲ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕುರಿಗಳಂತೆ ಬಾಳಬೇಕಾಗಿಲ್ಲ, ದೇಶದ ಯುವ ಜನತೆ, ಈ ಅಭಿಯಾನದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವಂತೆ ಕೇಳಿಕೊಳ್ಳುತ್ತೇನೆ' ಎಂದು ಸಿನ್ಹಾ ಕರೆ ನೀಡಿದರು.(ಪಿಟಿಐ)

English summary
Senior BJP leader Yashwant Sinha, who has turned a strong critic of the central government, will tomorrow launch 'Rashtra Manch' (national forum), a body, he said, for political leaders and others "concerned" with the prevailing situation in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X