• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ವಿರುದ್ದ ಸಿಬಿಐಗೆ ದೂರು: ಯಶವಂತ್ ಸಿನ್ಹಾ ಹಿಂದಿನ ಮಾಸ್ಟರ್ ಮೈಂಡ್ ಯಾರು?

|

ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳು ಸ್ವತಂತ್ರ ಸಂಸ್ಥೆಗಳಾಗಿದ್ದರೂ, ಕೇಂದ್ರದಲ್ಲಿ ಯಾವ ಸರಕಾರ ಇರುತ್ತದೋ, ಅದರ ನೆರಳಿನಲ್ಲಿ ಕೆಲಸ ನಿರ್ವಹಿಸುವುದೇ ಜಾಸ್ತಿ. ಈ ಪರಿಪಾಠವನ್ನು ಹುಟ್ಟುಹಾಕಿದವರು ಕಾಂಗ್ರೆಸ್ಸಿನವರೇ, ಅದು ಮುಂದುವರಿದುಕೊಂಡು ಬರುತ್ತಲೇ ಇದೆ. ಈಗ ಎನ್ಡಿಎ ಸರಕಾರ ಅಧಿಕಾರದಲ್ಲಿ ಇರುವುದರಿಂದ, ಬಿಜೆಪಿ ಇದರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪ ಆ ಪಕ್ಷದ ಮೇಲಿದೆ.

ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ, ಪ್ರಶಾಂತ್ ಭೂಷಣ್ ಮತ್ತು ಅರುಣ್ ಶೌರಿ ರಫೇಲ್ ಯುದ್ದವಿಮಾನ ಖರೀದಿ ವಿಚಾರದಲ್ಲಿ ಅಕ್ರಮ ನಡೆದಿದೆ, ಅದರ ತನಿಖೆ ಆಗಬೇಕೆಂದು ಸಿಬಿಐಗೆ ಪ್ರಧಾನಿ ಮೋದಿ ವಿರುದ್ದ ದೂರು ನೀಡಿದ್ದಾರೆ. ತನಿಖೆ ನಡೆಸಲು ಯಾರು ಅನುಮತಿ ನೀಡಬೇಕೋ, ಅವರ ಮೇಲೆಯೇ ತನಿಖೆ ನಡೆಸುವಂತೆ ದೂರು ಬಂದಿರುವುದು ಅಪರೂಪ.

ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಯಶವಂತ್ ಸಿನ್ಹಾ ಮುಂತಾದ ಹಿರಿಯ ಮುಖಂಡರನ್ನು ಬಿಜೆಪಿ ಯಾವಾಗ 'ಮಾರ್ಗದರ್ಶಕ ಮಂಡಳಿ' ಎನ್ನುವ ವೃದ್ದಾಶ್ರಮಕ್ಕೆ ಸೇರಿಸಿತೋ, ಅಲ್ಲಿಂದ ಯಶವಂತ್ ಸಿನ್ಹಾ, ಮೋದಿ ಸರಕಾರದ ವಿರುದ್ದ ಕಿಡಿಕಾರಲು ಆರಂಭಿಸಿದರು. ಹಾಗೆಯೇ, ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿದ್ದರು.

ರಫೇಲ್ ಡೀಲ್ : ಮೋದಿ ವಿರುದ್ಧ ದೂರು ನೀಡಿದ ಯಶವಂತ್ ಸಿನ್ಹಾ

ಮೋದಿ ನೇತೃತ್ವದ ಎನ್ಡಿಎ ಸರಕಾರ, ಪ್ರಭಾಪ್ರಭುತ್ವ ವ್ಯವಸ್ಥೆಗೆ ಮಾರಕ, ಪ್ರಧಾನಿ ವಿರುದ್ದ ದೇಶಾದ್ಯಂತ ಪ್ರವಾಸ ಮಾಡಿ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇನೆ ಎಂದಿರುವ ಯಶವಂತ್ ಸಿನ್ಹಾ & ಕಂಪೆನಿ, ಒಂದಲ್ಲಾ ಒಂದು ವಿಚಾರವನ್ನು ಇಟ್ಟುಕೊಂಡು, ಮೋದಿ ವಿರುದ್ದ ತಿರುಗಿಬೀಳುತ್ತಲೇ ಇದೆ. ಆದರೆ, ಮೋದಿ ಈ ಎಲ್ಲದಕ್ಕೂ ಸದ್ಯದ ಮಟ್ಟಿಗೆ ದಿವ್ಯಮೌನ ವಹಿಸಿದ್ದಾರೆ.

ಭ್ರಷ್ಟಾಚಾರದ ವಿಚಾರದಲ್ಲಿ ಇದುವರೆಗಿನ ತಮ್ಮ ರಾಜಕೀಯ ಜೀವನದಲ್ಲಿ ಕ್ಲೀನ್ ಇಮೇಜ್ ಕಾಪಾಡಿಕೊಂಡು ಬಂದಿರುವ ಪ್ರಧಾನಿಯ ಮೇಲೆ, ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಯಶವಂತ್ ಸಿನ್ಹಾ ಹಾಗೂ ತಂಡದವರು, ಮೋದಿ ಸೇರಿದಂತೆ ಪ್ರಮುಖರ ವಿರುದ್ಧ ಸಿಬಿಐಗೆ ದೂರು ಸಲ್ಲಿಸಿದ ಮಹತ್ವದ ಬೆಳವಣಿಗೆ ನಡೆದಿದೆ. ಯಶವಂತ್ ಸಿನ್ಹಾ ಹಿಂದಿನ ಮಾಸ್ಟರ್ ಮೈಂಡ್ ಯಾರಿರಬಹುದು?

ಪುತ್ರ ಜಯಂತ್ ಸಿನ್ಹಾ ಹುಟ್ಟುಹಬ್ಬದ ದಿನವೇ ಬಿಜೆಪಿ ತೊರೆದ ಸಿನ್ಹಾ

ಪುತ್ರ ಜಯಂತ್ ಸಿನ್ಹಾ ಹುಟ್ಟುಹಬ್ಬದ ದಿನವೇ ಬಿಜೆಪಿ ತೊರೆದ ಸಿನ್ಹಾ

ಮಾಜಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ತಮ್ಮ ಪುತ್ರ ಜಯಂತ್ ಸಿನ್ಹಾ ಹುಟ್ಟುಹಬ್ಬದ ದಿನವೇ ಬಿಜೆಪಿ ತೊರೆಯುವುದಾಗಿ ಪ್ರಕಟಿಸಿದ್ದರು. ಜಯಂತ್ ಸಿನ್ಹಾ, ಮೋದಿ ಸರಕಾರದಲ್ಲಿ ನಾಗರೀಕ ವಿಮಾನಯಾನ ಖಾತೆಯ ಸಚಿವರಾಗಿದ್ದಾರೆ. ಮೋದಿ ಪ್ರಧಾನಿಯಾಗುವ ಮುನ್ನ ಇದ್ದ ಬಿಜೆಪಿಗೂ, ಈಗಿನ ಬಿಜೆಪಿಗೂ ಬಹಳಷ್ಟು ವ್ಯತ್ಯಾಸವಿದೆ ಎನ್ನುವ ಯಶವಂತ್ ಸಿನ್ಹಾ, ಮೋದಿ ಚುನಾವಣೆಯ ವೇಳೆ ಕೊಟ್ಟ ಯಾವುದೇ ಭರವಸೆಯನ್ನು ಈಡೇರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ

ಮೋದಿ ವಿರುದ್ದವೇ ಸಿಬಿಐಗೆ ದೂರು ನೀಡಿದ ಸಿನ್ಹಾ & ಕೋ

ಮೋದಿ ವಿರುದ್ದವೇ ಸಿಬಿಐಗೆ ದೂರು ನೀಡಿದ ಸಿನ್ಹಾ & ಕೋ

ರಫೇಲ್ ವಿಚಾರವನ್ನು ಇಟ್ಟುಕೊಂಡು ಹೇಗೆ ಕಾಂಗ್ರೆಸ್, ಮೋದಿ ಮತ್ತು ಕೇಂದ್ರ ಸರಕಾರವನ್ನು ರುಬ್ಬುತ್ತಿದೆಯೋ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಯಶವಂತ್ ಸಿನ್ಹಾ, ಮೋದಿ ವಿರುದ್ದವೇ ಸಿಬಿಐಗೆ ದೂರು ನೀಡಿದ್ದಾರೆ. ಸಿಬಿಐ ದೂರಿನ ವಿಚಾರಣೆ ನಡೆಸುತ್ತದೋ ಇಲ್ಲವೋ, ಅದು ಆಮೇಲಿನ ವಿಚಾರ. ಆದರೆ, ಇಲ್ಲಿ ಸಿನ್ಹಾ ಹಿಂದೆ ಯಾರದ್ದಾದರೂ ಮಾಸ್ಟರ್ ಮೈಂಡ್ ಕೆಲಸ ಮಾಡುತ್ತಿದೆಯಾ ಎನ್ನುವ ಪ್ರಶ್ನೆ ಕಾಡದೇ ಇರದು.

ಮೋದಿ ಮೌನ 'ಚುಡಾಯಿಸಿ' ಕವನ ಬರೆದ ರಾಹುಲ್ ಗಾಂಧಿ!

ಹಿಂಬಾಗಿಲಿನ ರಾಜಕೀಯ ಮಾಡುತ್ತಿದೆಯೇ ಎನ್ನುವ ಸಂಶಯ

ಹಿಂಬಾಗಿಲಿನ ರಾಜಕೀಯ ಮಾಡುತ್ತಿದೆಯೇ ಎನ್ನುವ ಸಂಶಯ

ಒಂದು ವೇಳೆ, ವಿರೋಧ ಪಕ್ಷಗಳು ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಮುಂದೆ ಬಿಟ್ಟು ಹಿಂಬಾಗಿಲಿನ ರಾಜಕೀಯ ಮಾಡುತ್ತಿದೆಯೇ ಎನ್ನುವ ಸಂಶಯ ಕಾಡದೇ ಇರದು. ಆದರೆ, ರಫೇಲ್, ತೈಲಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಜಿಎಸ್ಟಿ ಮುಂತಾದ ವಿಚಾರಗಳನ್ನು ಇಟ್ಟುಕೊಂಡು, ವಿರೋಧ ಪಕ್ಷಗಳು ನೇರವಾಗಿ ಕೇಂದ್ರದ ವಿರುದ್ದ ತಿರುಗಿಬಿದ್ದಿರುವುದರಿಂದ, ಈ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.

ಬಹುಮತ ಬರದೇ ಇದ್ದ ಪಕ್ಷದಲ್ಲಿ

ಬಹುಮತ ಬರದೇ ಇದ್ದ ಪಕ್ಷದಲ್ಲಿ

ಇನ್ನೊಂದು ಆಯಾಮದಲ್ಲಿ ಅವಲೋಕಿಸುವುದಾದರೆ, ಒಂದು ವೇಳೆ ಈಗಿನ ಎನ್ಡಿಎ ಮೈತ್ರಿಕೂಟದ ಸದಸ್ಯ ಪಕ್ಷಗಳ ಮೂಲಕ ಮುಂದಿನ ಚುನಾವಣೆಯಲ್ಲಿ ಗುರಿತಲುಪಲು ಸಾಧ್ಯವಾಗದೇ ಇದ್ದಲ್ಲಿ, ಹೊಸ ಪಕ್ಷಗಳ ಜೊತೆ ಮೈತ್ರಿಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾದರೆ, ಮೋದಿಯನ್ನು ಪ್ರಧಾನಿಯನ್ನಾಗಿ ನಿಯೋಜಿಸಲು ಕೆಲವು ಪಕ್ಷಗಳು ತಕರಾರು ಎತ್ತಬಹುದು. ಅದಕ್ಕಾಗಿ, ಎನ್ಡಿ ಮೈತ್ರಿಕೂಟದ ಪಾಲುದಾರರೇ, ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಮುಂದೆ ಬಿಟ್ಟಿದ್ದಾರಾ ಎನ್ನುವ ಅನುಮಾನ ಒಂದು ಕಡೆ.

ಯಶವಂತ್ ಸಿನ್ಹಾ, ಪ್ರಶಾಂತ್ ಭೂಷಣ್ ಮತ್ತು ಅರುಣ್ ಶೌರಿ

ಯಶವಂತ್ ಸಿನ್ಹಾ, ಪ್ರಶಾಂತ್ ಭೂಷಣ್ ಮತ್ತು ಅರುಣ್ ಶೌರಿ

ಪಕ್ಷದಲ್ಲಿ ಎಪ್ಪತ್ತು ವರ್ಷದ ಮೇಲಿನ ಮುಖಂಡರುಗಳಿಗೆ ಬಿಜೆಪಿ ವರಿಷ್ಠರು ಸದ್ಯ ಯಾವುದೇ ಜವಾಬ್ದಾರಿ ನೀಡುತ್ತಿಲ್ಲ. ಇದು ಮೋದಿ ಮತ್ತು ಅಮಿತ್ ಶಾ ಬಂದಾಗಿನಿಂದ ಪಕ್ಷ ಅನುಸರಿಸಿಕೊಂಡು ಬರುತ್ತಿರುವ ಪದ್ದತಿ. ಹಾಗಾಗಿ, ಬಿಜೆಪಿಯ ಹಿರಿಯ ಮುಖಂಡರುಗಳ ಆಕ್ರೋಶ, ಯಶವಂತ್ ಸಿನ್ಹಾ, ಪ್ರಶಾಂತ್ ಭೂಷಣ್ ಮತ್ತು ಅರುಣ್ ಶೌರಿ ಮೂಲಕ ಮೋದಿ ವಿರುದ್ದ ಹೊರಬೀಳುತ್ತಿದೆಯಾ ಎನ್ನುವುದು ಇನ್ನೊಂದು ಆಯಾಮ.

English summary
Yashwant Sinha, Arun Shourie, Prashant Bhushan Move CBI for Rafale Deal Probe against Prime Minsiter Narendra Modi. Whose master mind working behind this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more