ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಕದಲ್ಲಿ ಗಲ್ಲಿಗೇರುತ್ತಿರುವ 3ನೇ ಭಾರತೀಯ ಯಾಕೂಬ್

|
Google Oneindia Kannada News

ನವದೆಹಲಿ, ಜು.29: ಗುರುವಾರ ಮುಂಜಾನೆ ಉಗ್ರ ಯಾಕೂಬ್ ಮೆಮನ್ ನನ್ನು ಗಲ್ಲಿಗೆ ಏರಿಸಲಾಗುತ್ತದೆ. ದಶಕದ ಅವಧಿಯಲ್ಲಿ ಗಲ್ಲಿಗೆ ಏರಲ್ಪಡುತ್ತಿರುವ ನಾಲ್ಕನೇ ವ್ಯಕ್ತಿ, ಮೂರನೇ ಭಾರತೀಯ ಎಂಬ ಕೆಟ್ಟ ದಾಖಲೆಯನ್ನು ತನ್ನೊಂದಿಗೆ ಕೊಂಡೊಯ್ಯಲಿದ್ದಾನೆ.

2004 ಮತ್ತು 2013ರ ಅವಧಿಯಲ್ಲಿ ನ್ಯಾಯಾಲಯ ಒಟ್ಟು 1,303 ಕಠಿಣ ತೀರ್ಮಾನಗಳನ್ನು ನೀಡಿದೆ. ಆದರೆ ಈ ಅವಧಿಯಲ್ಲಿ ಗಲ್ಲು ಶಿಕ್ಷೆಯಾಗಿದ್ದು ಕೆಲವರಿಗೆ ಮಾತ್ರ ಎಂದು ಕೇಂದ್ರ ಅಪರಾಧ ದಾಖಲೆ ಹೇಳುತ್ತದೆ.[ಯಾಕೂಬ್ ಮೆಮನ್ ಗೆ ಗಲ್ಲುಶಿಕ್ಷೆ ಕಾಯಂ : ಸುಪ್ರೀಂ]

yakub memon

ಈ ಅವಧಿಯಲ್ಲಿ ಮೂರು ಜನರನ್ನು ಮಾತ್ರ ನೇಣುಗಂಬಕ್ಕೆ ಏರಿಸಲಾಗಿದೆ. ಪಶ್ಚಿಮ ಬಂಗಾಳ, ಮಾಹಾರಾಷ್ಟ್ರ ಮತ್ತು ದೆಹಲಿ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳಿಗೆ ಗಲ್ಲು ಶಿಕ್ಷೆ ಹೊರಬಿದ್ದಿದೆ.

ಗಲ್ಲು ಶಿಕ್ಷಗೆ ಗುರಿಯಾದವರ ಪಟ್ಟಿ
* ಧನಂಜಯ್ ಚಟರ್ಜಿ: ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಶಿಕ್ಷೆಗೆ ಗುರಿಯಾಗಿದ್ದ ಧನಂಜಯ್ ಚಟರ್ಜಿಯನ್ನು ಆತನ 42ನೇ ಹುಟ್ಟುಹಬ್ಬದ ದಿನದಂದೇ ಅಂದರೆ ಆಗಸ್ಟ್ 14, 2004 ರಲ್ಲಿ ಗಲ್ಲಿಗೆ ಏರಿಸಲಾಯಿತು.
* ಅಜ್ಮಲ್ ಅಮೀರ್ ಕಸಬ್: ಮುಂಬೈ ದಾಳಿ ವೇಳೆ ಸೆರೆಸಿಕ್ಕ ಉಗ್ರ ಕಸಬ್ ನನ್ನು ಅನೇಕ ತಿಂಗಳುಗಳ ವಿಚಾರಣೆ ಬಳಿಕ 2012 ರ ನವೆಂಬರ್ 21ರಂದು ಗಲ್ಲಿಗೆ ಏರಿಸಲಾಯಿತು.(ಪಾಕಿಸ್ತಾನ)
* ಅಫ್ಜಲ್ ಗುರು: 2001ರ ಸಂಸತ್ ಭವನ ದಾಳಿ ರೂವಾರಿ ಅಫ್ಜಲ್ ಗುರು ನನ್ನು 2013ರ ಫೆಬ್ರವರಿ 9 ರಂದು ನೇಣಿಗೆ ಹಾಕಲಾಯಿತು. (1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು: ಟೈಮ್ ಲೈನ್)

ಈ ಅವಧಿಯಲ್ಲಿ ಸುಮಾರು 3,751 ಪ್ರಕರಣಗಳು ಗಲ್ಲಿನಿಂದ ಜೀವಾವಧಿಯಾಗಿ ಪರಿವರ್ತನೆಗೊಂಡಿವೆ. 1993 ಮುಂಬೈ ಸರಣಿ ಬಾಂಬ್ ಸ್ಫೋಟ ನಡೆಸಿ 260 ಜೀವಗಳನ್ನು ಬಲಿ ಪಡೆದಿದ್ದ ಯಾಕೂಬ್ ಮತ್ತು 11 ಜನರಿಗೆ 2007ರಲ್ಲೇ ಶಿಕ್ಷೆ ವಿಧಿಸಲಾಗಿತ್ತು.

ಮಾರ್ಚ್ 2013ರಲ್ಲಿ ಕೆಳ ನ್ಯಾಯಾಲಯದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಇದೀಗ ಕೊನೆಗೂ ಉಗ್ರ ಯಾಕೂಬ್ ನೇಣು ಕುಣಿಕೆಗೆ ಕುತ್ತಿಗೆ ಒಡ್ಡಲಿದ್ದಾನೆ. ಬಾಬು ಜಲ್ಲಾದ್ ಗುರುವಾರ ಬೆಳಗ್ಗೆ ಮುಂಬೈ ದಾಳಿ ಪಾತಕಿಯನ್ನು ಗಲ್ಲಿಗೆ ಹಾಕಲಿದ್ದಾರೆ.

English summary
Yakub Memon will be hanged at the Nagpur prison on Thursday if the President too rejects his mercy petition. The death sentence handed to Yakub Memon. No Mercy for Yakub Memon to be hanged on 30 july said supreme court. Here a look of hanged persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X