ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಕೂಬ್‌ಗೆ ಗಲ್ಲು, ಬುಧವಾರ ರಾತ್ರಿಯ ಹೈಡ್ರಾಮ

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಜುಲೈ 30 : 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆಗೆ ತಡೆಯಾಜ್ಞೆ ತರಲು ಬುಧವಾರ ರಾತ್ರಿ ಹೈಡ್ರಾಮವೇ ನಡೆಯಿತು. ಆದರೆ, ಎಲ್ಲಾ ಹೋರಾಟಗಳು ಅಂತ್ಯಗೊಂಡ ಬಳಿಕ ಯಾಕೂಬ್ ನೇಣಿಗೆ ಕೊರಳೊಡಿದ್ದಾನೆ.

ಗುರುವಾರ ಮುಂಜಾನೆ 4.49ಕ್ಕೆ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಗೆ ತಡೆ ತರುವ ಎಲ್ಲಾ ಪ್ರಯತ್ನಗಳು ಅಂತ್ಯಗೊಂಡವು. 5 ಗಂಟೆಗೆ ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲು ತಯಾರಿ ಆರಂಭಿಸಲಾಯಿತು. ಜೈಲಿನ ಹೊರಗೆ ತನ್ನನ್ನು ಉಳಿಸಲು ಪ್ರಯತ್ನಗಳು ನಡೆಯುತ್ತಿದ್ದರೆ, ಯಾಕೂಬ್ ಇಡೀ ರಾತ್ರಿ ಎಚ್ಚರವಿದ್ದ. ಆದರೆ, ಯಾರೊಂದಿಗೂ ಮಾತನಾಡಲಿಲ್ಲ. [ನೇಣಿಗೆ ಕೊರಳೊಡ್ಡಿದ ಯಾಕೂಬ್]

mumbai blast

ಕ್ಷಮಾದಾನ ಅರ್ಜಿ ತಿರಸ್ಕಾರ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾತ್ರಿ ತಮ್ಮನ್ನು ಭೇಟಿಯಾದ ಗೃಹ ಸಚಿವ ರಾಜನಾಥ ಸಿಂಗ್‌ ಜತೆ ಸುಮಾರು ಎರಡೂವರೆ ಗಂಟೆಗಳ ಕಾಲ ಯಾಕೂಬ್ ಮೆಮನ್ ಸಲ್ಲಿಸಿದ್ದ 2ನೇ ಕ್ಷಮಾದಾನದ ಅರ್ಜಿ ಬಗ್ಗೆ ಚರ್ಚಿಸಿದರು. [ಮುಂಬೈ ಸ್ಫೋಟ Timeline]

ಕೇಂದ್ರ ಗೃಹ ಸಚಿವಾಲಯ ನೀಡಿದ ಸಲಹೆಯಂತೆ ಕ್ಷಮಾದಾನದ ಅರ್ಜಿಯನ್ನು ಬುಧವಾರ ತಡರಾತ್ರಿ 10.45ರ ಸುಮಾರಿಗೆ ರಾಷ್ಟ್ರಪತಿಗಳು ತಿರಸ್ಕೃರಿಸಿದರು. ಅಲ್ಲಿಗೆ ಯಾಕೂಬ್ ಉಳಿಸುವ ಎಲ್ಲಾ ಹಾದಿಗಳು ಮುಚ್ಚಿದವು. ನಂತರ ಹೈಡ್ರಾಮ ಆರಂಭವಾಯಿತು. [ಹುಟ್ಟು ಹಬ್ಬದ ದಿನದಂದೇ ಯಾಕೂಬ್ ಗಲ್ಲಿಗೆ]

ಮುಖ್ಯ ನ್ಯಾಯಮೂರ್ತಿಗಳ ಭೇಟಿ : ರಾತ್ರಿ 11 ಗಂಟೆ ವೇಳೆಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಮೂವರು ವಕೀಲರು ಯಾಕೂಬ್ ಗಲ್ಲು ಶಿಕ್ಷೆಗೆ ತಡೆ ಕೋರಿ ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸಕ್ಕೆ ಆಗಮಿಸಿದರು.

ದತ್ತು ಅವರ ನಿವಾಸಕ್ಕೆ ಆಗಮಿಸಿದ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಸಿಜೆ ಅವರನ್ನು ಭೇಟಿ ಮಾಡಿ, ಪ್ರಶಾಂತ್ ಭೂಷಣ್ ನೇತೃತ್ವದ ತಂಡ ತಂದಿದ್ದ ಅರ್ಜಿಯನ್ನು ಹಸ್ತಾಂತರ ಮಾಡಿದರು. 12.45ಕ್ಕೆ ದತ್ತು ಅವರು ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿದರು.

ಅರ್ಜಿ ಸಲ್ಲಿಸಿದ್ದು ಏಕೆ : ಮಹಾರಾಷ್ಟ್ರ ಕಾರಾಗೃಹ ನಿಯಮಾವಳಿ ಪ್ರಕಾರ ಕ್ಷಮಾದಾನ ಅರ್ಜಿ ತಿರಸ್ಕೃತವಾದ ದಿನದಿಂದ 7 ದಿನಗಳ ಬಳಿಕ ಗಲ್ಲಿಗೇರಿಸಬೇಕು ಎಂಬ ನಿಯಮವಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ 14 ದಿನಗಳ ಬಳಿಕ ನೇಣಿಗೇರಿಸಬೇಕು ಎಂದು ಇದೆ. ಆದ್ದರಿಂದ, ಗುರುವಾರದ ಗಲ್ಲು ಶಿಕ್ಷೆಗೆ ತಡೆ ಕೋರಲಾಯಿತು.

ಎಚ್.ಎಲ್.ದತ್ತು ಅವರು ರಚನೆ ಮಾಡಿದ್ದ ತ್ರಿ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಪ್ರಫುಲ್ಲಾ ಸಿ ಪಂತ್ ಹಾಗೂ ಅಮಿತಾವ್ ರಾಯ್ ಅವರು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಹಾಲ್‌ ನಂ 4ರಲ್ಲಿ 1.30ಕ್ಕೆ ಆರಂಭಿಸಿದರು. ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಯಿತು. 4.45ಕ್ಕೆ ಎಲ್ಲಾ ಕಾನೂನು ಹೋರಾಟ ಅಂತ್ಯಗೊಂಡಿತು.

ನಂತರ ಬೆಳಗ್ಗೆ 6.40ರ ಸುಮಾರಿಗೆ ಯಾಕೂಬ್‌ಗೆ ಗಲ್ಲುಶಿಕ್ಷೆ ವಿಧಿಸಲಾಯಿತು. 7 ಗಂಟೆಗೆ ವೈದ್ಯರು ಯಾಕೂಬ್ ಮೃತಪಟ್ಟಿದ್ದಾನೆ ಎಂದು ಖಚಿತಪಡಿಸಿದರು. ಯಾಕೂಬ್ ಮೃತದೇಹವನ್ನು ಕುಟುಂಬದವರಿಗೆ 11 ಗಂಟೆಗೆ ಹಸ್ತಾಂತರ ಮಾಡಲಾಗುತ್ತದೆ, ನಂತರ ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

English summary
Yakub Memon was finally hanged after much legal drama that lasted till 4.49 AM this morning. At the Nagpur central jail where Yakub was lodged preparations had commenced at 5 AM itself. Yakub was awake all night and did not speak much to anybody. He was finally hanged at around 6.40 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X