ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 6.3 ಕೋಟಿ ಜನ ಇನ್ನೂ ಶುದ್ಧ ನೀರು ಕಂಡಿಲ್ಲ, ಕುಡಿದಿಲ್ಲ!

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ 6.3 ಕೋಟಿ ಜನರು ಶುದ್ಧ ಜೀವಜಲವನ್ನು ನೋಡಿಲ್ಲ, ಕುಡಿಲ್ಲ. ಶುದ್ಧ ನೀರಿನಿಂದ ವಂಚಿತರಾದವರೆಲ್ಲ ಕಡು ಬಡವರು ಮತ್ತು ಸಾಮಾಜಿಕವಾಗಿ ಹಿಂದುಳಿದವ ವಿವರವನ್ನು ವಿಶ್ವಜಲದಿನದಂದು ನೆನಯಲೇಬೇಕಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 22: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ 6.3 ಕೋಟಿ ಜನರು ಶುದ್ಧ ಜೀವಜಲವನ್ನು ನೋಡಿಲ್ಲ, ಕುಡಿಲ್ಲ. ಶುದ್ಧ ನೀರಿನಿಂದ ವಂಚಿತರಾದವರೆಲ್ಲ ಕಡು ಬಡವರು ಮತ್ತು ಸಾಮಾಜಿಕವಾಗಿ ಹಿಂದುಳಿದವ ವಿವರವನ್ನು ವಿಶ್ವಜಲದಿನದಂದು ನೆನಯಲೇಬೇಕಿದೆ.

'ವಿಶ್ವ ಜಲ ದಿನದ' ಅಂಗವಾಗಿ ಜಾಗತಿಕ ಮಟ್ಟದಲ್ಲಿ ನೀರಿನ ಸ್ಥಿತಿಗತಿ ಕುರಿತಾಗಿ ವಾಟರ್‌ಏಡ್‌ ಸಂಸ್ಥೆ ಬಿಡುಗಡೆ ಮಾಡಿರುವ 'ವೈಲ್ಡ್‌ ವಾಟರ್‌' ಎಂಬ ವರದಿ ನೀಡಿದೆ.[ಬಕೆಟ್ ನೀರಲ್ಲಿ ಸ್ನಾನ ಮಾಡಿ, ವಾರಕ್ಕೊಮ್ಮೆ ಗಾಡಿ ತೊಳೀರಿ...]

ಶುದ್ಧ ನೀರಿನ ಕೊರತೆ ಎದುರಿಸುತ್ತಿರುವವರ ಸಂಖ್ಯೆ ಭಾರತದಲ್ಲೇ ಹೆಚ್ಚಿದೆ. 6.3 ಕೋಟಿ ಎಂದರೆ ಬ್ರಿಟನ್ನಿನ ಜನಸಂಖ್ಯೆಗೆ ಸಮ ಎಂದು ವರದಿ ವಿವರಿಸಿದೆ. ಜಾಗತಿಕವಾಗಿ 66.3 ಕೋಟಿ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಈ ಪೈಕಿ ಗ್ರಾಮೀಣ ಭಾಗದ ಜನರೇ 52.2 ಕೋಟಿಯಷ್ಟಿದ್ದಾರೆ ಎಂದು ವರದಿ ಹೇಳಿದೆ. ಜಲಕ್ಷಾಮಕ್ಕೆ ಕಾರಣಗಳೇನು? ಆರೋಗ್ಯದ ಮೇಲೆ ಏನು ಪರಿಣಾಮ ಬೀರಲಿದೆ? ಮುಂದೆ ಓದಿ..(ಪಿಟಿಐ)[ವೇಸ್ಟ್ ಆಗ್ತಿದೆ ಶೇ 50ರಷ್ಟು ಕಾವೇರಿ ನೀರು]

ಭಾರತದಲ್ಲೇ ಸಂಖ್ಯೆ ಹೆಚ್ಚು

ಭಾರತದಲ್ಲೇ ಸಂಖ್ಯೆ ಹೆಚ್ಚು

ಭಾರತದಲ್ಲಿ ಸರಿ ಸುಮಾರು 6.3 ಕೋಟಿ ಜನ ಶುದ್ಧ ಜಲ ವಂಚಿತರಾಗಿದ್ದಾರೆ. ಇದು ಬ್ರಿಟನ್ನಿನ ಜನಸಂಖ್ಯೆಗೆ ಸಮ. ಜಾಗತಿಕವಾಗಿ 66.3 ಕೋಟಿ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಈ ಪೈಕಿ ಗ್ರಾಮೀಣ ಭಾಗದ ಜನರೇ 52.2 ಕೋಟಿಯಷ್ಟಿದ್ದಾರೆ ಎಂದು ವರದಿ ಹೇಳಿದೆ.[ಮಳೆ ಕೊಯ್ಲು ಬಗ್ಗೆ ಮೊಬೈಲ್‌ನಲ್ಲೇ ಮಾಹಿತಿ ಪಡೆಯಿರಿ]

ಸರ್ಕಾರದ ಇಚ್ಛಾಶಕ್ತಿ ಕೊರತೆ

ಸರ್ಕಾರದ ಇಚ್ಛಾಶಕ್ತಿ ಕೊರತೆ

ಇವರ ಸಂಪನ್ಮೂಲಗಳ ಸದ್ಬಳಕೆ ಹಾಗೂ ವಿನಿಯೋಗ ಮಾಡುವುದರಲ್ಲಿ ಸರ್ಕಾರಗಳು ಎಡವುತ್ತಿರುವುದೇ ಸಮಸ್ಯೆ ಉಲ್ಬಣಕ್ಕೆ ಕಾರಣ. ನೀರಿಗಾಗಿ ಹೆಚ್ಚುತ್ತಿರುವ ಬೇಡಿಕೆ, ಜನಸಂಖ್ಯೆ ಹೆಚ್ಚಳ ಮತ್ತು ಹೆಚ್ಚು ನೀರು ಬಳಸುವ ಕೃಷಿ ಪದ್ಧತಿಗಳ ಅನುಸರಣೆಯಿಂದ ನೀರಿನ ಮೇಲಿನ ಹೊರೆ ಮತ್ತಷ್ಟು ಹೆಚ್ಚಿದೆ.[ಇನ್ನೂ ಹೆಚ್ಚಾಗಲಿ ಮಳೆ ಸುಗ್ಗಿ ಕೇಂದ್ರ]

ಹಳ್ಳಿಗಳಲ್ಲಿ ರೋಗ ರುಜಿನ

ಹಳ್ಳಿಗಳಲ್ಲಿ ರೋಗ ರುಜಿನ

ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆ ಇರುವುದರಿಂದ ಕಾಲರಾ, ಕಣ್ಣಿನ ರೋಗ (ಟ್ರಕೋಮ), ಮಲೇರಿಯಾ ಮತ್ತು ಡೆಂಗ್ಯೂ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ. ಶೇ 67ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದು, ನೀರು ಸಿಗದೆ ಪರದಾಟ ಒಂದೆಡೆಯಾದರೆ, ಕಲುಷಿತ ನೀರು ಸೇವನೆಯಿಂದ ರೋಗ ರುಜಿನಗಳು ಇನ್ನೊಂದೆಡೆ ಕಾಡುತ್ತಿವೆ.

ಸೆಲೆಬ್ರಿಟಿಗಳಿಂದ ಜಾಗೃತಿ

ಸೆಲೆಬ್ರಿಟಿಗಳಿಂದ ಜಾಗೃತಿ

ಬೆಂಗಾಲಿ ನಟಿ ರಿತುಪರ್ಣ ಸೇನ್ ಗುಪ್ತಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಿಶ್ವ ಜಲ ದಿನದ ಅಂಗವಾಗಿ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಒಂದು ಬಕೆಟ್ ನೀರು ಉಳಿಸಿ, ಹೋಳಿ ಹಬ್ಬದಂದು ನೀರು ಕಡಿಮೆ ಬಳಸಿ, ಕಾರು, ಮನೆ ಸ್ವಚ್ಛಗೊಳಿಸುವುದು, ನೀರು ಪೋಲಾಗುವುದನ್ನು ತಡೆಗಟ್ಟಿ ಎಂಬ ಜಾಗೃತಿ ಸಂದೇಶ ಹರಡುತ್ತಿದ್ದಾರೆ.

ಪ್ರತಿಕೂಲ ಹವಾಮಾನ

ಪ್ರತಿಕೂಲ ಹವಾಮಾನ

ಶುದ್ಧ ನೀರಿನಿಂದ ವಂಚಿತರಾಗಿರುವ ಗ್ರಾಮೀಣ ಭಾಗದ ಬಡವರು ಪ್ರತಿಕೂಲ ಹವಾಮಾನ ಮತ್ತು ಹವಾಮಾನ ಬದಲಾವಣೆಯ ಅನನುಕೂಲತೆಗಳಿಗೆ ತುತ್ತಾಗುವ ಅಪಾಯ ಹೆಚ್ಚು ಎಂದು ವರದಿ ತಿಳಿಸಿದೆ. ಭಾರತದ ಉತ್ತರ-ಮಧ್ಯ ಭಾಗವಾದ ಬುಂದೇಲ್‌ಖಂಡದಲ್ಲಿ ಬರ ಎಂಬುದು ಈಗ ಜನರ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಸತತ ಮೂರು ವರ್ಷಗಳಿಂದ ಅಪ್ಪಳಿಸಿರುವ ಬರಸ್ಥಿತಿಯು ಕೋಟ್ಯಂತರ ಜನರನ್ನು ಹಸಿವು ಮತ್ತು ಬಡತನದ ಕೂಪಕ್ಕೆ ತಳ್ಳಿದೆ

English summary
India has the maximum number of people -- 63 million -- living in rural areas without access to clean water, according to a new global report released to mark World Water Day today(March 22)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X