ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರದ ಹೊಲದಲ್ಲಿ 2ನೇ ವಿಶ್ವ ಯುದ್ಧ ಕಾಲದ ಬಾಂಬ್ ಪತ್ತೆ!

|
Google Oneindia Kannada News

ಮೊರೆಹ್(ಮಣಿಪುರ), ಜುಲೈ 17: ಎರಡನೇ ಮಹಾಯುದ್ಧದ ಕಾಲಕ್ಕೆ ಸಂಬಂಧಿಸಿದ ಸ್ಫೋಟಗೊಳ್ಳದ ಬಾಂಬ್, ಇನ್ನಿತರ ಶಸ್ತ್ರಾಸ್ತ್ರಗಳು ಮಣಿಪುರದ ಹೊಲವೊಂದರಲ್ಲಿ ಪತ್ತೆಯಾಗಿವೆ.

Recommended Video

Defence Minister Rajnath ಗಡಿಯಲ್ಲಿರುವ ಸೈನಿಕರ ಭೇಟಿ | Oneindia Kannada

ಗುರುವಾರದಂದು ಹೊಲವೊಂದರಲ್ಲಿ ಮಣ್ಣು ಸಮ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಬಾಂಬ್, ಲೈವ್ ಕಾಟ್ರಿಜ್, ಶಸ್ತ್ರಾಸ್ತ್ರಗಳು ಕಾಣಿಸಿಕೊಂಡಿವೆ. ಮೊರೆಹ್ ಎಂಬಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಸುದ್ದಿ ತಿಳಿದು ಬಂದಿದೆ. ಸ್ಫೋಟಗೊಳ್ಳದ ಬಾಂಬ್ ಗಳನ್ನು ವಸತಿ ಪ್ರದೇಶದಿಂದ ದೂರ ತೆಗೆದುಕೊಂಡು ಬಂದು ಸುರಕ್ಷಿತವಾಗಿರಿಸಲಾಗಿದೆ, ಈ ಬಗ್ಗೆ ತಪಾಸಣೆ ಮುಂದುವರೆದಿದೆ ಎಂದು ಎಎಸ್ ಪಿ ಸಂಗ್ ಬಾಯಿ ಗಾಂಗ್ಟೆ ಹೇಳಿದ್ದಾರೆ.

ಮೊದಲನೇ ಮಹಾಯುದ್ಧದ ಕಹಿ ನೆನಪು !ಮೊದಲನೇ ಮಹಾಯುದ್ಧದ ಕಹಿ ನೆನಪು !

2ನೇ ವಿಶ್ವ ಯುದ್ಧದ ಕಾಲದ್ದು ಎನ್ನಲಾದ 27 ಬಾಂಬ್, 43 ಬಾಂಬ್ ಇಡುವ ಕೇಸ್, ಶಸ್ತ್ರಾಸ್ತ್ರ ಇಡುವ 15 ಪೆಟ್ಟಿಗೆ, ಲೈವ್ ಕಾಟ್ರಿಜ್ ಗಳನ್ನು ಲಾಂಗ್ ನೊವ್ ವೆಂಗ್ ಎಂಬ ಪ್ರದೇಶದಿಂದ ಹೊರಕ್ಕೆ ತೆಗೆಯಲಾಗಿದೆ.

World War-ii Era Unexploded Bomb, Ammunition Discovered In Manipur

2ನೇ ವಿಶ್ವ ಯುದ್ಧದ ಕಾಲದಲ್ಲಿ ಬ್ರಿಟಿಷರ​ ಆಡಳಿತವಿದ್ದ ಭಾರತ, ಅವರ ಪರವಾಗಿಯೇ ಯುದ್ಧದಲ್ಲಿ ಭಾಗವಹಿಸಿತ್ತು. ಭಾರತದ 13 ಲಕ್ಷ ಯೋಧರು ಭಾಗಿಯಾಗಿದ್ದರು ಆ ಯುದ್ಧದಲ್ಲಿ ಭಾಗವಹಿಸಿದ್ದರು ಹಾಗೂ 62 ಸಾವಿರ ಭಾರತೀಯ ಯೋಧರು ಮೃತಪಟ್ಟಿದ್ದರು.

2019ರಲ್ಲಿ ಜರ್ಮನಿಯ ಹಳ್ಳಿಯೊಂದರಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ವೊಂದು ಸ್ಫೋಟಗೊಂಡಿತ್ತು. ಆ ಬಾಂಬ್ ಕೂಡಾ ಇದೇ ರೀತಿ ಭೂಮಿಯಲ್ಲಿ ಹುದುಗಿ ಹೋಗಿತ್ತು. ಆದರೆ, ಮಣಿಪುರದ ಬಳಿ ಈ ರೀತಿ ಬಾಂಬ್ ಪತ್ತೆಯಾಗಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.\

World War-ii Era Unexploded Bomb, Ammunition Discovered In Manipur

2ನೇ ಜಾಗತಿಕ ಸಮರ:
1914ರ ಜುಲೈ 28ರಂದು ಆರಂಭವಾದ ಮೊದಲ ಮಹಾಯುದ್ದ 1918ರ ನವೆಂಬರ್ 11ರವರೆಗೆ ನಡೆದಿತ್ತು. ಬ್ರಿಟಿಷ್​​​ ಒಕ್ಕೂಟ ಹಾಗೂ ಜರ್ಮನ್​ ಒಕ್ಕೂಟ ನಡುವೆ ನಡೆದ ಮೊದಲ ವಿಶ್ವಯುದ್ದ, 4 ವರ್ಷಗಳ ಕಾಲ ನಡೆದಿತ್ತು. ಈ ಯುದ್ಧದಲ್ಲಿ ಒಟ್ಟು 6.5 ಕೋಟಿ ಸೈನಿಕರು ಭಾಗಿಯಾಗಿದ್ದರು. ಅದರಲ್ಲಿ 85 ಲಕ್ಷ ಮಂದಿ ಮೃತಪಟ್ಟು, 3.7 ಕೋಟಿ ಸೈನಿಕರು ಗಾಯಗೊಂಡಿದ್ದರು.

ಸೆಂಟ್ರಲ್ ಪವರ್ಸ್(ಜರ್ಮನಿ, ಆಸ್ಟ್ರೀಯಾ-ಹಂಗೇರಿ, ದಿ ಒಟ್ಟೊಮನ್ ರಾಜಮನೆತನ ಹಾಗೂ ಬಲ್ಗೇರಿಯಾ) ಹಾಗೂ ಮೈತ್ರಿಕೂಟ ಅಥವಾ ಟ್ರಿಪಲ್ ಎಂಟೆಂಟೆ(ಗ್ರೇಟ್ ಬ್ರಿಟನ್, ಫ್ರಾನ್ಸ್ ಹಾಗೂ ರಷ್ಯಾ) ನಡುವೆ ಮೊದಲ ಮಹಾಯುದ್ಧ ಸಂಭವಿಸಿತು. ಆರಂಭದಲ್ಲಿ ಸೆಂಟ್ರಲ್ ಪವರ್ಸ್ ಜತೆ ಇದ್ದ ಇಟಲಿ 1915ರ ನಂತರ ಬ್ರಿಟನ್ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ನಂತರದ ದಿನಗಳಲ್ಲಿ ಮೈತ್ರಿಕೂಟಕ್ಕೆ ಜಪಾನ್, ಬೆಲ್ಜಿಯಂ, ಸರ್ಬಿಯಾ, ಗ್ರೀಸ್, ಮಾಂಟೆನೆಗ್ರೋ, ರೊಮಾನಿಯಾ, ಬ್ರೆಜಿಲ್ ಹಾಗೂ ಚೆಕೊಸ್ಲೋವಾಕ್ ಪ್ರಾಂತ್ಯಗಳು ಬೆಂಬಲ ವ್ಯಕ್ತಪಡಿಸಿದವು. 1917ರ ನಂತರ ಜರ್ಮನಿ ವಿರುದ್ಧವಾಗಿ ಯುಎಸ್ಎ ನಿಂತು ಕೊಂಡಿತು.

English summary
An unexploded bomb, a stash of ammunition, including live catridges, believed to be of World War -II era were discovered by a person while levelling a plot of land in Manipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X