ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದಿನದ ವಿಶೇಷ: ಟಿಬಿ(ಕ್ಷಯ ರೋಗ) ತಡೆಗಟ್ಟುವುದು ಹೇಗೆ?

ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ಆಚರಿಸಲಾಗುತ್ತದೆ. ಟ್ಯೂಬರ್ ಕ್ಯೂಲೋಸಿಸ್ ಎಂಬ ರೋಗಾಣುವಿನಿಂದ ಬರುವ ಒಂದು ಸೋಂಕು ರೋಗವನ್ನು ತಡೆಗಟ್ಟಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ಕಾಣಿರಿ...

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 24: ಮಾರ್ಚ್ 24 ರಂದು ಜರ್ಮನ್ ದೇಶದ ಬರ್ಲಿನ್‌ನಲ್ಲಿ ನಡೆದ ವೈಜ್ಞಾನಿಕ ಸಮಾರಂಭದಲ್ಲಿ ಡಾ ರಾಬರ್ಟ್‌ಕಾಕ್ ಎಂಬ ವೈದ್ಯರು ಕ್ಷಯರೋಗಕ್ಕೆ ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣು ಕಾರಣ ಎಂದು ತೋರಿಸಿ ಕೊಟ್ಟ ದಿನ. ಆದ ಕಾರಣವಾಗಿ ಈ ದಿನವನ್ನು ವಿಶ್ವ ಕ್ಷಯರೋಗ ದಿನವೆಂದು ಆಚರಿಸುತ್ತಿದ್ದೇವೆ.

ಈ ವರ್ಷದ ಘೋಷಣೆ "ಎಲ್ಲರೂ ಒಗ್ಗೂಡಿ ಕ್ಷಯರೋಗವನ್ನು ನಿರ್ಮೂಲನೆಗೊಳಿಸೋಣ". ಈ ದಿನದ ಮಹತ್ವ ಏನೆಂದರೆ ಕ್ಷಯರೋಗದ ಗುಣಲಕ್ಷಣಗಳು ಹರಡುವ ಬಗ್ಗೆ. ಚಿಕಿತ್ಸಾ ವಿಧಾನದ ನಿಯಂತ್ರಣದ ಬಗ್ಗೆ ಎಲ್ಲರೂ ಈ ವಿಷಯಗಳ ಬಗ್ಗೆ ಮಾತನಾಡುವಂತಾಬೇಕು. ಈ ಮಾಹಿತಿಯು ಕಟ್ಟಕಡೆಯ ವ್ಯಕ್ತಿಗೆ ಮಾಹಿತಿ ತಲುಪುವಂತಾಗಬೇಕು.

ಚಿಕಿತ್ಸೆ ಪಡೆಯದ ಕ್ಷಯರೋಗಿಯು ಕೆಮ್ಮಿದಾಗ, ಸೀನಿದಾಗ ರೋಗಾಣುಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಆರೋಗ್ಯ ಮನುಷ್ಯ ಉಸಿರಾಡಿದಾಗ ಈ ರೋಗಾಣುಗಳು ಶ್ವಾಸಕೋಶದೊಳಗೆ ಸೇರಿಕೊಳ್ಳುತ್ತವೆ. ನಂತರ ದೇಹದ ಇತರ ಅಂಗಾಂಗಗಳಿಗೆ ಸೇರಿಕೊಳ್ಳಬಹುದು.

ಕ್ಷಯ ರೋಗದ ಚಿಕಿತ್ಸೆ ಉಚಿತ

ಕ್ಷಯ ರೋಗದ ಚಿಕಿತ್ಸೆ ಉಚಿತ

ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕಫ ಸಹಿತ ಕೆಮ್ಮು. ಎದೆ ನೋವು. ಕೆಲವೊಮ್ಮೆ ಕಫದಲ್ಲಿ ರಕ್ತ ಬೀಳುವುದು. ಸಂಜೆ ವೇಳೆಯಲ್ಲಿ ಜ್ವರ. ರಾತ್ರಿ ಬೆವರುವಿಕೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ತೂಕ ಕಡಿಮೆಯಾಗುವುದು. ಹಸಿವು ಆಗದೇ ಇರುವುದು.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ರೋಗದ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ.

5 ನಿಮಿಷಕ್ಕೆ ಇಬ್ಬರು ಮರಣ

5 ನಿಮಿಷಕ್ಕೆ ಇಬ್ಬರು ಮರಣ

ಭಾರತ ದೇಶ ಒಂದೇ ಕಾಲು ಭಾಗದಷ್ಟು ರೋಗಿಗಳನ್ನು ಪ್ರಪಂಚಕ್ಕೆ ನೀಡುತ್ತದೆ. ಅಂದರೆ 10.4 ಮಿಲಿಯನ್ ಹೊಸರೋಗಿಗಳಲ್ಲಿ 2.8 ಮಿಲಿಯನ್ ರೋಗಿಗಳು ನಮ್ಮ ದೇಶದವರಾಗಿದ್ದಾರೆ. 40% ರಷ್ಟು ಜನರಲ್ಲಿ ಈ ರೋಗಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ 4.8 ಲಕ್ಷದಷ್ಟು ಜನರು ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಪ್ರತಿ ದಿನ 6000 ಕ್ಕಿಂತ ಹೆಚ್ಚು ಜನರಿಗೆ ಖಾಯಿಲೆ ಹರಡುತ್ತದೆ. 600 ಜನ ಸಾವನ್ನಪ್ಪುತ್ತಿದ್ದಾರೆ. (5 ನಿಮಿಷಕ್ಕೆ ಇಬ್ಬರು ಮರಣ ಹೊಂದುತ್ತಿದ್ದಾರೆ)

ರೋಗಿಗಳಿಗೆ ಚಿಕಿತ್ಸೆ

ರೋಗಿಗಳಿಗೆ ಚಿಕಿತ್ಸೆ

ಕರ್ನಾಟಕದಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಬೆಂಗಳೂರು ಮಹಾನಗರಪಾಲಿಕೆಯ 1994ರಲ್ಲಿ 25 ಲಕ್ಷ ಜನಸಂಖ್ಯೆಗೆ ಪ್ರಾರಂಭಿಸಿ ನಂತರ ಅಕ್ಟೋಬರ್ 1998 ರಿಂದ ಆಗಸ್ಟ್ 2004ರ ವೇಳೆಗೆ 30 ಜಿಲ್ಲೆಗಳಲ್ಲಿ 643 ಲಕ್ಷ ಜನಸಂಖ್ಯೆಗೆ ಪೂರ್ಣ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ.

ಕರ್ನಾಟಕದಲ್ಲಿ 2016 ರಲ್ಲಿ 6 ಲಕ್ಷ ಶಂಕಿತ ಕ್ಷಯರೋಗಿಗಳಲ್ಲಿ 60 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಿ ಶೇಕಡಾ 84 ಪ್ರತಿಶತ ಜನರನ್ನು ಸಂಪೂರ್ಣವಾಗಿ ಗುಣಮುಖಗೊಳಿಸಲಾಗಿದೆ.

ಕ್ಷಯ/ಹೆಚ್‌ಐವಿ/ಏಡ್ಸ್ ರೋಗಿಗಳ ಸಾವು

ಕ್ಷಯ/ಹೆಚ್‌ಐವಿ/ಏಡ್ಸ್ ರೋಗಿಗಳ ಸಾವು

ಕ್ಷಯರೋಗವು ಎಚ್.ಐ.ವಿ. ಸೋಂಕು ಉಳ್ಳ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ಅನುಕೂಲಕರ ಸೋಂಕಾಗಿದೆ. ಕ್ಷಯ/ಎಚ್‌ಐವಿ/ಏಡ್ಸ್ ರೋಗಿಗಳ ಸಾವು ನೋವುಗಳನ್ನು ಕಡಿತಗೊಳಿಸಲು ಕೇಂದ್ರ, ರಾಜ್ಯ ಮತ್ತು ಜಿಲ್ಲೆಗಳಲ್ಲಿ ಕ್ಷಯ ಮತ್ತು ಎಡ್ಸ್ ನಿಯಂತ್ರಣ ಕಾರ್ಯಕ್ರಮಗಳನ್ನು ಜಂಟಿಯಾಗಿ ನಿರ್ವಹಿಸುತ್ತಿವೆ. ಬಹು ಔಷಧ ನಿರೋಧಕ ಕ್ಷಯರೋಗ: (ಎಂಡಿಆರ್ ಟಿಬಿ) ಕರ್ನಾಟಕದಲ್ಲಿ ಬಹು ಔಷಧ ನಿರೋಧಕ ಕ್ಷಯರೋಗಿಗಳನ್ನು ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ಹಾಗೂ ಅನುಸರಣಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ.

2035ರ ಗಡುವು ಹಾಕಿಕೊಂಡ ಸರ್ಕಾರ

2035ರ ಗಡುವು ಹಾಕಿಕೊಂಡ ಸರ್ಕಾರ

ಭಾರತ ಸರ್ಕಾರವು 2035ನೇ ವರ್ಷಕ್ಕೆ ಭಾರತದಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲಾ ತರಹದ ಆರೋಗ್ಯ ಸಂಸ್ಥೆಗಳನ್ನು (ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳು) ಸರ್ಕಾರೇತರ ಸಂಸ್ಥೆಗಳು, ಕ್ಷಯರೋಗ ನಿರ್ಮೂಲನೆಯಲ್ಲಿ ತೊಡಗಿರುವ ಇತರೆ ಪಾಲುದಾರರನ್ನು ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಒಗ್ಗೂಡಿಸಿಕೊಂಡು ಕ್ಷಯ ಮುಕ್ತ ದೇಶವನ್ನಾಗಿಸುವ ಪಣತೊಟ್ಟಿದೆ.

English summary
March 24 is observed as World Tuberculosis (TB) Day worrldwide. TB day is an annual event to build public awareness about the global epidemic of tuberculosis (TB). TB is a airborne disease Here are facts ab.out TB you must know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X