• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ್ಮಹತ್ಯೆ ತಡೆ ದಿನ: ಮನೆಯ ಕಿಟಕಿ ಬಳಿಯೊಂದು ಮೊಂಬತ್ತಿ ಹಚ್ಚಿ!

By ಪೂರ್ಣಿಮ ಜಿ.ಆರ್.
|

ಹುಟ್ಟು ಖಚಿತ ಸಾವು ನಿಶ್ಚಿತ! ಆದರೆ ಆತ್ಮಹತ್ಯೆ ಘೋರ ದುರಂತ! ಒಬ್ಬ ಮನುಷ್ಯನ ಬೆಳವಣಿಗೆಯಲ್ಲಿ ಪೋಷಕರು, ಮಿತ್ರರು, ಬಂಧುಬಳಗ, ಸಮಾಜ ಮತ್ತು ಸರ್ಕಾರದ ಪಾಲು ಇರುತ್ತದೆ. ಮನುಷ್ಯ ಸಂಘ ಜೀವಿ, ಅವನ ಸುಖದುಃಖಗಳನ್ನು ಜನರ ಜೊತೆ ಹಂಚಿಕೊಳ್ಳುತ್ತಾ ಬೆಳೆಯುತ್ತಾನೆ. ಆದರೆ ಆತ್ಮಹತ್ಯೆ ಎಂದಾಗ ಮಾತ್ರ ಏಕೆ ಯಾರ ಬಗ್ಗೆಯೂ ಯೋಚಿಸುವುದಿಲ್ಲ.

ಇತ್ತೀಚಿಗೆ ದೆಹಲಿಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಸುದ್ದಿ ಇಡೀ ದೇಶವನ್ನೇ ತಲ್ಲಣಗೊಳಿಸಿದರೆ, ರೈತರ ಆತ್ಮಹತ್ಯೆಗಳು ಮನಕಲಕುತ್ತವೆ. ಮನುಷ್ಯನ ಅಸಹಾಯಕತೆ, ದುಡುಕುತನ, ಖಿನ್ನತೆ ಅವನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಅವನ ಜೀವನ ಅಂತ್ಯವಾದರೆ ಕುಟುಂಬಸ್ಥರಿಗೆ ಅದರ ನೋವಿನ ಪ್ರಾರಂಭವಾಗುತ್ತದೆ.

ಬುರಾರಿ ಆತ್ಮಹತ್ಯೆ: 11 ಶವ, 11 ಡೈರಿ ಮತ್ತು ಭಯ ಹುಟ್ಟಿಸುವ 11 ಸಂಗತಿ

ಉದಾಹರಣೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಅವನ ಕುಟುಂಬ ಇನ್ನೂ ದುಸ್ಥಿತಿಯಲ್ಲಿ ಮುಳುಗುತ್ತದೆ, ಅವನು ಮಾಡಿದ ಸಾಲದ ಹೊರೆ ಒಂದೆಡೆಯಾದರೆ ಕುಟುಂಬದ ಸದಸ್ಯರ ಜೀವನ ತೂಗಿಸುವುದು ಇನ್ನೊಂದೆಡೆ. ಆತ್ಮಹತ್ಯೆಯು ಯಾವಗಲೂ ಆಘಾತ ಮತ್ತು ನಷ್ಟದ ಜೊತೆ ಲೀನವಾಗಿರುತ್ತದೆ.

ಸೆ.10 ಆತ್ಮಹತ್ಯೆ ತಡೆ ದಿನ

ಸೆ.10 ಆತ್ಮಹತ್ಯೆ ತಡೆ ದಿನ

ಪ್ರತಿವರ್ಷದಂತೆ ಈ ವರ್ಷವು ಸಹ ವಿಶ್ವದ ಜನತೆಯಲ್ಲಿ ಆತ್ಮಹತ್ಯೆಯ ತಡೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ‘ ವಿಶ್ವ ಆತ್ಮಹತ್ಯೆ ತಡೆ ದಿನ'ವನ್ನು ‘ ಇಂಟರ್ನ್ಯಾಷಿನಲ್ ಆಸೋಸಿಯೇಷನ್ ಫಾರ್ ಸುಸೈಡ್ ಪ್ರಿವೇಷನ್' (International Association for Suicide Prevention (IASP) ಸಂಸ್ಥೆಯು ವಿಶ್ವಸಂಸ್ಥೆಯ ಸಹಯೋಗದೊಂದಿಗೆ ನಡೆಸುತ್ತಿದೆ. (ಆತ್ಮಹತ್ಯೆ ತಡೆಗಟ್ಟುವ ಕೆಲಸದಲ್ಲಿ ಒಂದುಗೂಡಿ) ‘Working Together to Prevent Suicide' ಎಂಬ ಥೀಮ್‍ ನೊಂದಿಗೆ ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಒಂದು ಇ-ಕಾರ್ಡ್/ಪೋಸ್ಟ್ ಕಾರ್ಡ್ ವಿಶ್ವದ 62 ಭಾಷೆಗಳಲ್ಲಿ ಬಿಡುಗಡೆ ಮಾಡಿದೆ.

ನಿಮ್ಮ ಮನೆಯ ಕಿಟಕಿ ಬಳಿ ಒಂದು ದೀಪ ಬೆಳಗಿಸಿ

ನಿಮ್ಮ ಮನೆಯ ಕಿಟಕಿ ಬಳಿ ಒಂದು ದೀಪ ಬೆಳಗಿಸಿ

ಇದರ ಉದ್ದೇಶವೆಂದರೆ ಆತ್ಮಹತ್ಯೆ ತಡೆಗಟ್ಟಲು, ಹಾಗೆಯೇ ವಿಶ್ವ ಆತ್ಮಹತ್ಯೆ ತಡೆ ದಿನದ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಬಳಸಬಹುದು ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅರಿವಿಗಾಗಿ ಪೋಸ್ಟ್ ಮಾಡಬಹುದು.

ಇದರ ಜೊತೆಗೆ 'ಆತ್ಮಹತ್ಯೆಯನ್ನು ತಡೆಗೆ ಬೆಂಬಲ ಸೂಚಿಸಲು ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೆನಪಿಗಾಗಿ, ಆತ್ಮಹತ್ಯೆಯನ್ನು ಗೆದ್ದವರಿಗಾಗಿ' ನಿಮ್ಮ ಮನೆಯ ಕಿಟಕಿಯ ಬಳಿ ರಾತ್ರಿ 8ಕ್ಕೆ ಒಂದು ಮೊಂಬತ್ತಿಯನ್ನು ಬೆಳಗಿಸಲು ನಿಮ್ಮನ್ನು ಆಹ್ವಾನಿಸಿದೆ' ಈ ಎಲ್ಲಾ ಪ್ರಯತ್ನಗಳ ಒಂದು ಮುಖ್ಯ ಗುರಿಯೇ ಆತ್ಮಹತ್ಯೆಯನ್ನು ತಡೆಗಟ್ಟುವುದು. ಆತ್ಮಹತ್ಯೆಯನ್ನು ತಡೆಗಟ್ಟಬಹುದು, ಅದು ನಮ್ಮಿಂದ ಸಾಧ್ಯ ಎಂಬುದನ್ನು ನೆನಪಿಸುತ್ತದೆ.

ಫ್ರಿಡ್ಜ್, ಅಲ್ಮಿರಾದಲ್ಲಿ ಶವ! ಅಲಹಾಬಾದಿನಲ್ಲೊಂದು ಥ್ರಿಲ್ಲರ್ ಕ್ರೈಂ ಸ್ಟೋರಿ

ಜನಜಾಗೃತಿ ಮತ್ತು ಮಾಧ್ಯಮಗಳ ಹೊಣೆ

ಜನಜಾಗೃತಿ ಮತ್ತು ಮಾಧ್ಯಮಗಳ ಹೊಣೆ

ಸದಾ ಮಾಧ್ಯಮಗಳಲ್ಲಿ ಆತ್ಮಹತೆಯ ಪ್ರಕರಣಗಳು ಬಿತ್ತರವಾಗುತ್ತಲೇ ಇರುತ್ತವೆ, ಅದರಲ್ಲೂ ರೈತರ ಆತ್ಮಹತ್ಯೆಗಳನ್ನು ದೃಶ್ಯ ಮಾಧ್ಯಮಗಳು ರಾಜಕೀಯ ಪಕ್ಷಗಳ ಅಥವಾ ಸರ್ಕಾರಗಳ ಗಮನ ಸೆಳೆಯಲು ಪದೇ ಪದೇ ಬಿತ್ತರಿಸುತ್ತಿರುತ್ತವೆ.

ಇಂತಹ ಪ್ರಸಾರವು ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುತ್ತವೆಯೇ ಹೊರತು ಹೋದ ಜೀವವನ್ನು ಮರಳಿತರಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜನಜಾಗೃತಿ ತರುವುದು ಸಹ ಮಾಧ್ಯಮ ಮತ್ತು ಜವಾಬ್ದಾರಿಯುತ ನಾಗರಿಕರ ಕರ್ತವ್ಯ.

ಅಂಕಿ ಅಂಶಗಳು

ಅಂಕಿ ಅಂಶಗಳು

2015ರ ವರದಿಯ ನಂತರ ಆತ್ಮಹತ್ಯೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಎನ್‍ಸಿಆರ್ ಬಿ ತನ್ನ ವೆಬ್‍ಸೈಟ್‍ನಲ್ಲಿ ಬಿತ್ತರಿಸಿಲ್ಲ. ಈ ವರದಿಯ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

2015ರಲ್ಲಿ 1,33,623 ಜನರು ಆತ್ಮಹತ್ಯೆ ಮಾಡಿಕೊಂಡರೆ, ಇದರಲ್ಲಿ ರೈತರ ಆತ್ಮಹತ್ಯೆ 12602. ಇನ್ನೂ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಷ್ಟ್ರಗಳು ಅನುಕ್ರಮವಾಗಿ ಮುಂದಿನ ಸ್ಥಾನದಲ್ಲಿವೆ. ಒಟ್ಟಾರೆ ಆತ್ಮಹತ್ಯೆಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದ್ದರೆ ಕೃಷಿವಲಯದಲ್ಲಿ 2ನೇ ಸ್ಥಾನದಲ್ಲಿತ್ತು. ಆತ್ಮಹತ್ಯೆಯಲ್ಲಿ ಕಿರಿಯ ಮತ್ತು ಹಿರಿಯ ವಯಸ್ಸಿನ ಭೇದಬಾವವಿಲ್ಲದಿರುವುದು ಇನ್ನೊಂದು ಶೋಚನೀಯ. 14ರಿಂದ 18 ವರ್ಷವಯಸ್ಸಿನ 7940, 14 ವಯಸ್ಸಿನ ಒಳಗಿನ 1468 ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ. ಉತ್ಪಾದಕ ವರ್ಗವಾದ 30 ರಿಂದ 45 ವರ್ಷದ 44592 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರ್ಗಾಂವ್: ಅನುಮಾನ ಹುಟ್ಟಿಸುವ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು

ಒಂದು ಆತ್ಮಹತ್ಯೆಯಿಂದ 135 ಜನರಿಗೆ ತೊಂದರೆ!

ಒಂದು ಆತ್ಮಹತ್ಯೆಯಿಂದ 135 ಜನರಿಗೆ ತೊಂದರೆ!

‘ಇಂಟರ್ ನ್ಯಾಷಿನಲ್ ಆಸೋಸಿಯೇಷನ್ ಫಾರ್ ಸುಸೈಡ್ ಪ್ರಿವೆನ್ಶನ್' ಸಂಸ್ಥೆ ಹೊರಡಿಸಿರುವ ಅಂಕಿಅಂಶಗಳ ಪ್ರಕಾರ ವಿಶ್ವದಲ್ಲಿ ಪ್ರತಿ ವರ್ಷ 8 ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ವಿಶ್ವದಲ್ಲಿ ಆತ್ಮಹತ್ಯೆ ದರ (ಪ್ರತಿ ಒಂದು ಲಕ್ಷಕ್ಕೆ)11.4ರಷ್ಟಿದ್ದು, ಪುರಷರ ಮತ್ತು ಮಹಿಳೆಯ ಆತ್ಮಹತ್ಯೆಯ ದರವು ಅನುಕ್ರಮವಾಗಿ 15 ಮತ್ತು 8ರಷ್ಟಿದೆ. ಐರೋಪ್ಯ ರಾಷ್ಟ್ರಗಳಲ್ಲಿ 15 ರಿಂದ 24 ವಯಸ್ಸಿನ ಜನರ ಸಾವಿನ ಪ್ರಮುಖ ಕಾರಣ ಆತ್ಮಹತ್ಯೆಯಾಗಿದೆ. ಪ್ರತಿ ಒಂದು ಆತ್ಮಹತ್ಯೆಯಿಂದ ಸುಮಾರು 135 ಜನ ತೊಂದರೆಗೆ ಒಳಗಾಗುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ 25 ರಾಷ್ಟ್ರಗಳಲ್ಲಿ ಆತ್ಮಹತ್ಯೆಯು ಒಂದು ಅಪರಾಧವಾಗಿ ಪರಿಗಣಿಸಿವೆ. ಹಾಗೆಯೇ 20 ದೇಶಗಳಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುವವರನ್ನು ಜೈಲಿಗೆ ಕಳುಹಿಸಬಹುದು(ಶರಿಯಾ ಕಾನೂನಿನ ಪ್ರಕಾರ). ಇವುಗಳನ್ನೆಲ್ಲಾ ಗಮನಿಸಿದರೆ ಆತ್ಮಹತ್ಯೆಯ ತೀವ್ರತೆ ಎಷ್ಟಿದೆ ಎಂಬುದು ತಿಳಿಯುತ್ತದೆ.

ರೈತರ ಆತ್ಮಹತ್ಯೆ ಪ್ರಕರಣ

ರೈತರ ಆತ್ಮಹತ್ಯೆ ಪ್ರಕರಣ

ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವುದು ಮಾಧ್ಯಮಗಳಿಂದ ತಿಳಿದು ಬರುತ್ತಿದೆ. ಭಾರತವು ಸಣ್ಣ ಮತ್ತು ಅಂಚಿನಲ್ಲಿರುವ ರೈತರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ನೈಸರ್ಗಿಕ ವಿಕೋಪ, ಹವಮಾನ ವೈಪರಿತ್ಯ, ಬರ ಮತ್ತು ನೆರೆ ಹಾವಳಿಗಳು ಕೃಷಿ ಉತ್ಪನ್ನವನ್ನು ಕಡಿಮೆ ಮಾಡಿದರೆ, ಉತ್ತಮ ಬೆಳೆ ಸಿಗದೆ ಅಥವಾ ಫಲಸಿನ ನಾಶ, ಸಾಲದ ಬಾಧೆಯಿಂದ ರೈತರ ಆತ್ಮಹತ್ಯೆಗಳು ಜಾಸ್ತಿಯಾಗುತ್ತಿವೆ.

ಕೃಷಿ ಮತ್ತು ಕೃಷಿಕರನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ. ರೈತರಿಗೆ ಆಧುನಿಕ ಮತ್ತು ತಾಂತ್ರಿಕ ಬೇಸಾಯದ ವಿಧಾನ, ಕೃಷಿಗೆ ಸಂಬಂಧಿಸಿದ ಯೋಜನೆಗಳ, ಬೆಳೆವಿಮೆಗಳ ಪರಿಚಯ, ಬಹುವಿದಧ ಬೆಳೆಗಳನ್ನು ಬೆಳೆಯುವು ಪದ್ಧತಿ, ನೀರನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ಬಗ್ಗೆ ತಿಳಿಸುವುದು, ಕೃಷಿ ಜೊತೆಗೆ ಇತರೆ ಕೆಲಸಗಳಲ್ಲಿ ಅಂದರೆ ಹೈನುಗಾರಿಕೆ, ಮೀನುಗಾರಿಗೆ ಹಾಗೂ ಇರತೆ ಕೆಲಸಗಳಲ್ಲಿ ಸಹ ತೊಡಗುವ ಹಾಗೆ ಮಾಡಬೇಕು. ಇವುಗಳಲ್ಲದೆ ಕೆರೆಕಟ್ಟೆ, ಬಾವಿಗಳನ್ನು ಆಗಿಂದಾಗ್ಗೆ ನವೀಕರಣಗೊಳಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಸಣ್ಣ ಮತ್ತು ಅಂಚಿನಲ್ಲಿರುವ ರೈತರಿಗೆ ಎಲ್ಲಾ ಸೌಲಭ್ಯಗಳು ದೊರೆಕುವ ಹಾಗೆ ಮಾಡಬೇಕು. ರೈತರ ಆತ್ಮಹತ್ಯೆಯನ್ನು ತಗ್ಗಿಸಲು ಸಾಲಮನ್ನಾ ಅಥವಾ ಪರಿಹಾರ ನೀಡುವುದೇ ಮುಖ್ಯವಲ್ಲ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿ ರೈತ ಕುಟುಂಬವನ್ನು ಬೆಂಬಲಿಸಬೇಕು.

ಕೂದಲು ಉದುರುತ್ತಿದೆ ಎಂದು ಆತ್ಮಹತ್ಯೆಗೆ ಶರಣಾದ ಯುವತಿ!

ಆತ್ಮಹತ್ಯೆ ತಡೆ ಹೇಗೆ?

ಆತ್ಮಹತ್ಯೆ ತಡೆ ಹೇಗೆ?

ಆತ್ಮಹತ್ಯೆಯನ್ನು ತಡೆಗಟ್ಟುವ ತಂತ್ರಗಳು ಸಾರ್ವಜನಿಕ ಮಟ್ಟದಲ್ಲಿ ನಡೆಯಬೇಕು. ಖಿನ್ನತೆಯು ಆತ್ಮಹತ್ಯೆಯಲ್ಲಿ ಪ್ರಮುಖ ಅಂಶವಾಗಿದ್ದು, ಮನುಷ್ಯರು ಖಿನ್ನತೆಯಿಂದ ಹೆಚ್ಚಾಗಿ ಆತ್ಮಹತ್ಯೆ ಒಳಗಾಗುತ್ತಾರೆ. ಹೆಚ್ಚಿನ ಆದಾಯ ಹೊಂದಿರುವ ದೇಶಗಳಲ್ಲಿ ಶೇ.50 ಜನರ ಆತ್ಮಹತ್ಯೆಯಲ್ಲಿ ಖಿನ್ನತೆಯೇ ಪ್ರಮುಖ ಕಾರಣವಾಗಿದೆ. ಆತ್ಮಹತ್ಯೆಯು ಯಾವುದೇ ಕಾರಣದಿಂದಾಗಿರಬಹುದು ಅದನ್ನು ತಡೆಯಬಹುದು. ಇದನ್ನು ತಡೆಯಲು ಸಾರ್ವಜನಿಕ ಆರೋಗ್ಯ ನೀತಿಯಲ್ಲಿ ಕಾರ್ಯತಂತ್ರಗಳನ್ನು ರೂಪಿಸಬೇಕು. ಆತ್ಮಹತ್ಯೆ ಹಿಂದಿನ ಕಾರಣ ಮತ್ತು ಪರಿಣಾಮಗಳ ಮೌಲ್ಯಮಾಪನ ಮಾಡಬೇಕು. ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಬೇಕು. ಜನರು ಮುಕ್ತವಾಗಿ ಮಾನಸಿಕ ಆರೋಗ್ಯ ಮತ್ತು ಖಿನ್ನತೆಯ ಬಗ್ಗೆ ಮಾತನಾಡಬೇಕು. ಪ್ರಖ್ಯಾತ ಚಿತ್ರತಾರೆ ದೀಪಿಕಾ ಪಡುಕೋಣೆ ಸಹ ತಮಗಿದ್ದ ಖಿನ್ನತೆಯ ಬಗ್ಗೆ ಮಾತನಾಡಿರುವುದನ್ನು ಇಲ್ಲಿ ನೆನಪಿಸಬಹುದು. ಒಂದು ಮಾತು, ಒಂದು ಸಮಾಧಾನವು ಒಂದು ಜೀವದ ಬಲಿಯನ್ನು ತಪ್ಪಿಸಬಹುದು. ಇದಕ್ಕೆ ಎಲ್ಲರೂ ಒಗ್ಗೂಡ ಬೇಕು.

English summary
World Suicide Prevention Day (WSPD) is an awareness day observed on 10 September every year, in order to provide worldwide commitment and action to prevent suicides, with various activities around the world since 2003.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more