ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವವೇ ಕೊರೊನಾದಿಂದ ನಲುಗಿಹೋಗಿದೆ, ಮೋದಿಗೆ ತನ್ನ ವರ್ಚಸ್ಸಿನದ್ದೇ ಚಿಂತೆ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮೇ 2: ಕೊರೊನಾ ಸೋಂಕಿನಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ ಆದರೆ ಪ್ರಧಾನಿ ನರೇಂದ್ರ ಮೋದಿಗೆ ತನ್ನ ವರ್ಚಸ್ಸಿನದ್ದೇ ಚಿಂತೆಯಾಗಿದೆ.

ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ಇಡೀ ಜಗತ್ತೇ ನಡುಗಿ ಹೋಗಿದೆ. ದಾಖಲೆ ಪ್ರಮಾಣದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ.

ದೇಶದ ಎಲ್ಲಾ ನಾಗರಿಕರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲು ರಾಹುಲ್ ಗಾಂಧಿ ಆಗ್ರಹ ದೇಶದ ಎಲ್ಲಾ ನಾಗರಿಕರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲು ರಾಹುಲ್ ಗಾಂಧಿ ಆಗ್ರಹ

ಆದರೆ ಪರಿಣಾಕಾರಿ ನಿರ್ಧಾರ ಕೈಗೊಳ್ಳಬೇಕಾದ ಪ್ರಧಾನಿ ನರೇಂದ್ರ ಮೋದಿ ಮಾತ್ರ ಚೆಂಡನ್ನು ರಾಜ್ಯ ಸರ್ಕಾರಗಳತ್ತ ಎಸೆದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೋವಿಡ್-19ನಿಂದ ಗೆದ್ದೆವು ಎಂದು ಕ್ರೆಡಿಟ್ ತೆಗೆದುಕೊಂಡಿದ್ದ ಮೋದಿ ಸರ್ಕಾರ ಇದೀಗ ಸೋಂಕು ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳನ್ನು ಹೊಣೆ ಮಾಡುತ್ತಿದೆ.

World Shaken By India’s COVID-19 Situation; Modi Govt Focussed On Imagery: Rahul

ಆದರೆ ಮೋದಿ ಸರ್ಕಾರ ಈ ಮೂರ್ಖತನದಲ್ಲಿರುವಾಗಲೇ ದೇಶದಲ್ಲಿ 2ನೇ ಅಲೆ ಆರಂಭವಾಗಿತ್ತು ಎಂಬ ಸಣ್ಣ ಪರಿಜ್ಞಾನ ಕೂಡ ಸರ್ಕಾರಕ್ಕೆ ಇರಲಿಲ್ಲ. ಆ ಮೂರ್ಖತನದ ಫಲವನ್ನೇ ದೇಶ ಉಣ್ಣುತ್ತಿದೆ. ನಿಮ್ಮ ಜಾಗರೂಕತೆಯಲ್ಲಿ ನೀವಿರಿ.. ಯಾರೂ ಕೂಡ ನಿಮ್ಮ ನೆರವಿಗೆ ಬರುವುದಿಲ್ಲ. ಖಂಡಿತ ಪ್ರಧಾನಿ ನರೇಂದ್ರ ಮೋದಿ ಕೂಡ ಬರುವುದಿಲ್ಲ ಎಂದು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸೋಂಕು ತಡೆಯು ಸೂಕ್ತ ಯೋಜನೆ ರೂಪಿಸಬೇಕು. ಅಗತ್ಯಗಳನ್ನು ಪೂರೈಸುವುದು ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ತ್ವರಿತ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ತಜ್ಞರ ಮತ್ತು ನುರಿತ ವೈದ್ಯರ ಎಚ್ಚರಿಕೆಗಳನ್ನೂ ನಿರ್ಲಕ್ಷಿಸಿ ಇಂದು ಜಗತ್ತಿನ ಅತ್ಯಂತ ಕೋವಿಡ್-19 ಹೀನಾಯ ಪರಿಸ್ಥಿತಿಯಲ್ಲಿ ಏಕೈಕ ದೇಶ ಭಾರತವಿರಬೇಕು.

ಇಂದು ಕೋವಿಡ್-19 ಸೋಂಕಿತರು ಚಿಕಿತ್ಸೆ ಮಾತ್ರ ಆಸ್ಪತ್ರೆ ಮುಂದೆ ಸರತಿ ಸಾಲಲ್ಲಿ ನಿಂತಿಲ್ಲ.. ಬದಲಿಗೆ ಆಕ್ಸಿಜನ್ ಪಡೆಯಲು ಮತ್ತು ಸ್ಮಶಾಣಗಳ ಮುಂದೆಯೂ ಸರತಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಇದಕ್ಕಾಗಿ ಮೋದಿ ಸರ್ಕಾರಕ್ಕೆ ಧನ್ಯವಾದ ಹೇಳಲೇಬೇಕು ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ದೇಶದಲ್ಲಿ ಕೋವಿಡ್ ಪರಿಸ್ಥಿತಿ ಅಕ್ಷರಶಃ ಮೋದಿ ಸರ್ಕಾರದ ಕೈ ಮೀರಿದ್ದು, ಇದು ರಾಜ್ಯಗಳನ್ನು ಮತ್ತು ದೇಶದ ನಾಗರಿಕರನ್ನು 'ಆತ್ಮನಿರ್ಭರ' ಮಾಡುವ ವಿಧಾನವೇ ಎಂದು ಆಶ್ಚರ್ಯವಾಗುತ್ತಿದೆ.

ವಿಜ್ಞಾನಿಗಳು ಸೇರಿದಂತೆ ಆರೋಗ್ಯ ತಜ್ಞರು ಪದೇ ಪದೇ ಎಚ್ಚರಿಕೆಗಳ ನೀಡುತ್ತಿದ್ದರೂ, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅದನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.

English summary
As India logged a world record of over four lakh coronavirus infections on Saturday, Congress leader Rahul Gandhi said the entire world is shaken by what is happening here and accused Prime Minister Narendra Modi of “dropping the ball and throwing it to states” after prematurely taking credit for having “won against COVID-19” when the second wave was already underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X