ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಗಾಂಧಿ ನಿಜಕ್ಕೂ ತುಂಬಾ ಶ್ರೀಮಂತರಪ್ಪಾ!

By Srinath
|
Google Oneindia Kannada News

World rich Congress CP Sonia Gandhi 12th-richest-World Leader Huffingtonpost
ನವದೆಹಲಿ, ಡಿ.2- ವಿಶ್ವದ ಮಹಾಮಹಿಮ ನಾಯಕರು ಇದ್ದಾರಲ್ಲಾ ಅವರು ನಿಜಕ್ಕೂ ನಾವು ಅಂದುಕೊಂಡಿದ್ದಕ್ಕಿಂತ ತುಂಬಾ ತುಂಬಾನೇ ಶ್ರೀಮಂತರಪ್ಪಾ! ಒಂದು ಸಣ್ಣ ಉದಾಹರಣೆ ತೆಗೆದುಕೊಳ್ಳುವುದಾದರೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಇದ್ದಾರಲ್ಲಾ ಅವರು ಅನೇಕ ಕೋಟ್ಯಂತರ ಡಾಲರ್ ಸಾಹುಕಾರರಿರಬಹುದು. ಆದರೆ ಸಮಾಕಾಲೀನ ಶ್ರೀಮಂತರ ಪಟ್ಟಿಯಲ್ಲಿ ಅವರಿಂಗಿಂತ ತುಂಬಾ ಮೇಲೆ ಅನೇಕ ಮಂದಿಯಿದ್ದಾರೆ.

HuffPost World ವರದಿಯ ಪ್ರಕಾರ 20 ಮಂದಿ ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ದೊರೆಗಳು, ಅಧ್ಯಕ್ಷರು, ಸುಲ್ತಾನರು ಮತ್ತು ರಾಣಿಯರು ಸಖತ್ ಸ್ಥಿತಿವಂತರು ಎಂದು ಸ್ಥಾನಪಡೆದಿದ್ದಾರೆ. ಮಧ್ಯಪ್ರಾಚ್ಯ ಭಾಗದಲ್ಲೇ 7 ಮಂದಿ ವಿಶ್ವ ಶ್ರೀಮಂತರಿದ್ದಾರೆ. ಹಾಗಂತ ಇವರ ಆಸ್ತಿ-ಪಾಸ್ತಿ ಇವರೇ ಗಳಿಸಿದ್ದಲ್ಲ. ಅನೇಕರಿಗೆ ವಂಶಪಾರಂಪರ್ಯವಾಗಿ ಬಂದಿರುವಂತಹುದು.

ಇನ್ನು ಕೆಲವರು ಬಿಡಿ, ತಮ್ಮ ಸಾಮ್ರಾಜ್ಯಗಳಲ್ಲಿ ಜನರನ್ನು ಕೊಳ್ಳೆ ಹೊಡೆದು ಭ್ರಷ್ಟಾಚಾರದ ಹಾದಿಯಲ್ಲಿ ದುಡ್ಡು ಮಾಡಿದವರೂ ಇದ್ದಾರೆ. ಆದರೆ ಅಂತಹ ದೇಶಗಳಲ್ಲಿ ಜನಸಾಮಾನ್ಯರ ಬದುಕುಬವಣೆ ಹೇಳತೀರದು. ಇದರಿಂದ ಉಳ್ಳವರು/ ಇಲ್ಲದವರ ಮಧ್ಯೆ ಕಂದಕ ದೊಡ್ಡದಾಗುತ್ತಲೇ ಇದೆ. ( ಸದ್ಯಕ್ಕೆ ಇವರೇ ಭಾರತದ ಅತ್ಯಧಿಕ ಧನಿಕರು )

ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ ವಿಜೃಂಭಿಸುವ ಮೊದಲ ಹೆಸರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟೀನ್. ಈತ 40 ಶತಕೋಟಿ ಡಾಲರ್ ಆಸ್ತಿಯ ಒಡೆಯರು. ಆದರೆ ರಷ್ಯಾದ ಜಿಡಿಪಿ 14,000 ಡಾಲರ್ ಇದೆ.

ನಮ್ಮದೇ, ಸೋನಿಯಾ ಗಾಂಧಿ ಮೇಡಂ ಅವರು HuffPost World ವರದಿಯ ಪ್ರಕಾರ 2 ಶತಕೋಟಿ ಡಾಲರ್ ಆಸ್ತಿವಂತರು. ಅದೇ ಭಾರತದ GDP 1500 ಡಾಲರ್ ಇದೆ! ಹಾಗಾಗಿ ಪುರಾತನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 20 ಮಂದಿ ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ 12ನೆಯ ಸ್ಥಾನದಲ್ಲಿ ರಾರಾಜಿಸುತ್ತಾರೆ. ಗಮನಾರ್ಹವೆಂದರೆ ಭಾರತದ ಮತ್ಯಾರೂ ಈ 20ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಅನುಕ್ರಮವಾಗಿ
2. ಭೂಮಿಬೋಲ್ ಅದುಕ್ಯದೇವ್ - ಥಾಯ್ಲೆಂಡ್ ದೊರೆ
3. ಹಸನಾಲ್ ಬೋಲ್ಕಿಯಾ, ಬ್ರೂನಿ ಸುಲ್ತಾನ
4. ಅಬ್ದುಲ್ಲಾ ಬಿಲ್ ಅಬ್ದುಲ್ ಅಜೀಜ್ ಅಲ್ ಸೌದ್, ಸೌದಿ ಅರೇಬಿಯಾದ ದೊರೆ
5. ಖಲೀಫಾ ಬಿನ್ ಜಯೇದ್ ಅಲ್ ನಹ್ಯಾನ್, ಯುಎಇ ಅಧ್ಯಕ್ಷ
6. ಮೊಹಮದ್ ಬಿನ್ ರಶೀದ್ ಅಲ್ ಮಕ್ಟೋಮ್, ದುಬೈ ಅಮೀರ
7. ಕಿಮ್ ಜಾಂಗ್ ಉನ್, ಉತ್ತರ ಕೊರಿಯಾದ ಸರ್ವಾಧ್ಯಕ್ಷ
8. ಹನ್ಸ್ ಅಡಂ- 2, ಲೈಷೆಸ್ಟೇನ್ ಸ್ಟೇನ್ ರಾಣಿ
9. ಮೊಹಮದ್- 6, ಮೊರಾಕ್ಕೋ ದೊರೆ
10. ಸೆಬಾಸ್ಟೀನ್ ಪಿನೇರಾ, ಚಿಲಿ ಅಧ್ಯಕ್ಷ
11. ಹಮದ್ ಬಿನ್ ಖಲೀಫಾ ಅಲ್ ಥಾನಿ , ಖತಾರ್ ಅಮೀರ
13 ಅಲ್ಬರ್ಟ್- 2, ಮೊನಾಕೊ ರಾಜಕುಮಾರ
14. ಖಾಬೂಸ್ ಬಿನ್ ಸಯೀದ್, ಒಮಾನ್ ಸುಲ್ತಾನ
15. ಟೊಡೋರೊ ಒಬಿಯಾಂಗ್ ನ್ಯೂಮಾ ಮಸೋಗೊ, ಸಮಭಾಜಕ ಗಿನಿಯಾದ ಅಧ್ಯಕ್ಷ
16. ಬಷಾರ್ ಅಲ್ ಅಸಾದ್, ಸಿರಿಯಾ ಅಧ್ಯಕ್ಷ
17 ಇಲ್ಹಾಂ ಅಲಿಯೇವ್, ಅಜರಬೈಜಾನ್ ಅಧ್ಯಕ್ಷ
18. ಎಲಿಜಬತ್-2, ಇಂಗ್ಲಂಡ್ ರಾಣಿ
19. ಸಭಾ- 4 ಅಲ್ ಅಹಮದ್ ಅಲ್ ಜಬೀರ್ ಅಲ ಸಾಬಾ, ಕುವೈಟ್ ಷೇಕ್
20. ಸ್ವಾತಿ- 3, ಸ್ವಾಜಿಲ್ಯಾಂಟ್ ದೊರೆ

English summary
World rich Congress CP Sonia Gandhi 12th-richest-World Leader Huffingtonpost. World rich Congress CP Sonia Gandhi 12th-richest-World Leader Huffingtonpost. Vladimir Putin, President of Russia is at number 1 with $40 Billion Worth. Congress President Sonia Gandhi is 12th richest in world with $2 Billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X