ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 11 ವಿಶ್ವ ಜನಸಂಖ್ಯಾ ದಿನದ ಬಗ್ಗೆ ನಿಮಗೆಷ್ಟು ಗೊತ್ತು?

|
Google Oneindia Kannada News

ಜನಸಂಖ್ಯೆ ಎಂಬುದು ಒಂದು ದೇಶಕ್ಕೆ ಮಾರಕವೂ ಆಗಬಹುದು, ಪೂರಕವೂ ಆಗಬಹುದು. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲಿಗೆ ಜನಸಂಖ್ಯೆ ಎಂಬುದು ಒಂದು ಹೊರೆಯೇ ಸರಿ. ಜಗತ್ತಿನ 7.4 ಶತಕೋಟಿ ಜನಸಂಖ್ಯೆಯಲ್ಲಿ ಭಾರತದ ಪಾಲು 1.327 ಕೋಟಿ! ಕೆಲವು ಅಂದಾಜಿನ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಜನಸಂಖ್ಯೆಯ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅಗ್ರ ರಾಷ್ಟ್ರವಾಗಲಿದೆ!

ಪ್ರತಿ ವರ್ಷ ಜುಲೈ 11 ಅನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಜನಸಂಖ್ಯೆಯ ಕ್ಷಿಪ್ರ ಹೆಚ್ಚಳ ಮತ್ತು ಅದರಿಂದುಂಟಾಗುವ ಅಪಾಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 1989ರಲ್ಲಿ ಮೊದಲ ಬಾರಿಗೆ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಯ್ತು.

ಕುಟುಂಬ ಯೋಜನೆಗೆ ಎಷ್ಟೆಲ್ಲಾ ಆಯ್ಕೆಗಳಿವೆ ಆದರೆ ಬಳಸುವರು ಕಡಿಮೆಕುಟುಂಬ ಯೋಜನೆಗೆ ಎಷ್ಟೆಲ್ಲಾ ಆಯ್ಕೆಗಳಿವೆ ಆದರೆ ಬಳಸುವರು ಕಡಿಮೆ

ಪ್ರತಿ ವರ್ಷ ಒಂದೊಂದು ಘೋಷವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ಜನಸಂಖ್ಯಾ ದಿನದ ಥೀಮ್ 'ಕುಟುಂಬ ಯೋಜನೆ ಮಾನವನ ಹಕ್ಕು' (Family planning is a human right)ಎಂಬುದು. ಜನಸಂಖ್ಯೆಯನ್ನು ಮಾನವ ಸಂಪನ್ಮೂವನ್ನಾಗಿ ಬಳಸಿಕೊಂಡರೆ ಅದು ಮಾರಕವಲ್ಲ. ಆದರೆ ದಿನಬಳಕೆಯ ವಸ್ತುಗಳ ಪೂರೈಕೆ, ಆಹಾರ, ಅದಕ್ಕಾಗಿ ಪರಿಸರ ನಾಶ ಇವನ್ನೆಲ್ಲ ಯೋಚಿಸಿದರೆ ಜನಸಂಖ್ಯೆಯನ್ನು ನಿಯಂತ್ರಿಸುವುದು ತುರ್ತಾಗಿ ಆಗಬೇಕಾದ ಕೆಲಸ ಅನ್ನಿಸುತ್ತದೆ.

ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿಯೇ ಭಾರತ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಹಲವು ರೀತಿಯ ಕುಟುಂಬ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಭಾರತದಲ್ಲಿ ಅದಿನ್ನೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಸುಶಿಕ್ಷಿತರಲ್ಲಿ ಈ ಕುರಿತು ಅರಿವಿದೆಯಾದರೂ, ಅನಕ್ಷರಸ್ಥರಲ್ಲಿ ಮಾತ್ರ ಇಂದಿಗೂ ಪ್ರಜ್ಞೆ ಮೂಡದಿರುವುದು ಬೇಸರದ ಸಂಗತಿ.

ಜನಸಂಖ್ಯೆಯಲ್ಲಿ ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದೆ ಭಾರತ!ಜನಸಂಖ್ಯೆಯಲ್ಲಿ ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದೆ ಭಾರತ!

ವಿಶ್ವ ಜನಸಂಖ್ಯಾ ದಿನದ ಹಿನ್ನೆಲೆಯಲ್ಲಿ, ಈ ದಿನಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಮಾಹಿತಿ ಇಲ್ಲಿದೆ.

ಜಗತ್ತಿನ ಒಟ್ಟು ಜನಸಂಖ್ಯೆ ಎಷ್ಟು?

ಜಗತ್ತಿನ ಒಟ್ಟು ಜನಸಂಖ್ಯೆ ಎಷ್ಟು?

* ಜಗತ್ತಿನಲ್ಲಿ ಒಟ್ಟು 7.4 ಶತಕೋಟಿ ಜನಸಂಖ್ಯೆ ಇದೆ
* ಮೂರರಲ್ಲಿ ಒಂದು ಮಗುವಿನ ಹುಟ್ಟನ್ನು ಅಧಿಕೃತವಾಗಿ ನೋಂದಾಯಿಸುವುದೇ ಇಲ್ಲ!
* ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಭಾಗ 30 ವರ್ಷ ಮೀರಿದವರು.

ಭಾರತಕ್ಕೆ ಎರಡನೇ ಸ್ಥಾನ!

ಭಾರತಕ್ಕೆ ಎರಡನೇ ಸ್ಥಾನ!

* ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 17.5 ಪ್ರತಿಶತ ಭಾರತದಲ್ಲಿದೆ. ಅಂದರೆ ಜಗತ್ತಿನ 7.4 ಶತಕೋಟಿ ಜನಸಂಖ್ಯೆಯಲ್ಲಿ ಭಾರತದ ಪಾಲು 1.327 ಶತಕೋಟಿ.
* ಭಾರತದ ಜನಸಂಖ್ಯೆಯಲ್ಲಿ ಶೇ.41 ಪ್ರತಿಶತ ಜನರು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ವಿಶ್ವದ ಜನಸಂಖ್ಯೆಗೆ ಹೋಲಿಸಿದರೆ 24 ಪ್ರತಿಶತ ಜನರು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
* ಒಂದು ಅಂದಾಜಿನ ಪ್ರಕಾರ ಭಾರತ 2030 ರ ಹೊತ್ತಿಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ, ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಲಿದೆ.

ಜನಸಂಖ್ಯಾ ನಿಯಂತ್ರಣಕ್ಕೆ ಹೊಸ ಗರ್ಭನಿರೋಧಕ ಪರಿಚಯಜನಸಂಖ್ಯಾ ನಿಯಂತ್ರಣಕ್ಕೆ ಹೊಸ ಗರ್ಭನಿರೋಧಕ ಪರಿಚಯ

ಯುವ ರಾಷ್ಟ್ರ ಭಾರತ

ಯುವ ರಾಷ್ಟ್ರ ಭಾರತ

* 64 ಪ್ರತಿಶತ ವೃತ್ತಿನಿರತರನ್ನು ಹೊಂದಿರುವ ಭಾರತ 2010 ರ ಹೊತ್ತಿಗೆ ತರುಣರಿಂದ ಕೂಡಿದ ಜಗತ್ತಿನ ಅಗ್ರ ದೇಶವಾಗಲಿದೆ.
* ಭಾರತದಲ್ಲಿ ಶೇ.47 ರಷ್ಟು ಯುವತಿಯರು 18 ವರ್ಷಕ್ಕಿಂತ ಮೊದಲೇ ಮದುವೆಯಾಗುತ್ತಿದ್ದಾರೆ.
* ಜಗತ್ತಿನಲ್ಲಿ ಪ್ರತಿದಿನ 800 ಗರ್ಭಿಣಿಯರು ಸಾಯುತ್ತಾರೆ. ಅವರಲ್ಲಿ ಶೇ.20 ರಷ್ಟು ಮಹಿಳೆಯರು ಭಾರತೀಯರು.

ಪ್ರತಿ ಸೆಕೆಂಡಿಗೆ ಎಷ್ಟು ಮಕ್ಕಳು ಹುಟ್ಟುತ್ತಾರೆ?

ಪ್ರತಿ ಸೆಕೆಂಡಿಗೆ ಎಷ್ಟು ಮಕ್ಕಳು ಹುಟ್ಟುತ್ತಾರೆ?

* ಪ್ರತಿ ಸೆಕೆಂಡಿಗೆ 4.3 ಮಕ್ಕಳು ಹುಟ್ಟಿದರೆ, 1.8 ಜನ ಸಾಯುತ್ತಾರೆ.
* 2011 ರ ಜನಗಣತಿಯ ಪ್ರಕಾರ ಭಾರತದ ನಗರ ಪ್ರದೇಶದ ಜನಸಂಖ್ಯೆ ಶೇ.32.4ಕ್ಕೆ ಏರಿದೆ.
* ಜಗತ್ತಿನ ಜನಸಂಖ್ಯೆ ಶೇ.1.2 ಶತಕೋಟಿ ಜನ ಅಂದರೆ ಸುಮಾರು ಶೇ.20 ಪ್ರತಿಶತ ಜನ ಪ್ರತಿದಿನ ಕೇವಲ 1 ಡಾಲರ್ ಗೂ ಕಡಿಮೆ ಹಣದೊಂದಿಗೆ ಬದುಕುತ್ತಿದ್ದಾರೆ.

English summary
World Population day 2018(July 11): World Population Day ‘seeks to focus attention on the urgency and importance of population issues’. It was first established in 1989. Here are some points everyone should know about World Population day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X