ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ...

|
Google Oneindia Kannada News

"ಧೂಮಪಾನ ಆರೋಗ್ಯಕ್ಕೆ ಹಾನಿಕರ" ಎಂಬ ಸಾಲು ಓದುವುದಕ್ಕಷ್ಟೇ..! ಸಿನಿಮಾ ಆರಂಭಕ್ಕೂ ಮುನ್ನ ತೋರಿಸುವ ಜಾಹೀರಾತುಗಳೂ ಧೂಮಪಾನದ ಕೆಟ್ಟ ಪರಿಣಾಮಗಳ ಮುಖವನ್ನು ತೋರಿಸಿದರೂ ಆ ಚಟದಿಂದ ಮುಕ್ತವಾಗುವ ಯತ್ನ ಮಾಡುವವರು ತೀರಾ ಕಡಿಮೆ.

ಚಿಕ್ಕ ವಯಸ್ಸಿನಲ್ಲಿಯೇ ಸಿಗರೇಟ್ ಸೇವನೆಗೆ ದಾಸರಾಗಿ ಪರಿತಪಿಸುತ್ತಿರುವವರಿದ್ದಾರೆ. ಬಿಡಬೇಕೆಂದರೂ ಬಿಡುವುದಕ್ಕಾಗದೆ ಹೀಗೆ ಧೂಮಪಾಮಕ್ಕೆ 'ಅಡಿಕ್ಟ್' ಆಗಿರುವವರನ್ನು ಆ ಕೂಪದಿಂದ ಹೊರತರುವ ಯತ್ನವಾಗಿ ಪ್ರತಿ ವರ್ಷ ಮೇ 31 ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.

ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...

ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸಿ, ಯುವಕರನ್ನು ಆ ಚಟದಿಂದ ಮುಕ್ತರನ್ನಾಗಿಸುವ ಉದ್ದೇಶದಿಂದ ಆಚರಿಸುವ ಈ ದಿನ ಟ್ವಿಟ್ಟರ್ ನಲ್ಲಿಂದು ಟ್ರೆಂಡಿಂಗ್ ಆಗಿದೆ.

ಧೂಮಪಾನ ನಿಲ್ಲಿಸಿ, ಬದುಕಲು ಆರಂಭಿಸಿ!

ಧೂಮಪಾನ ನಿಲ್ಲಿಸಿ, ಬದುಕಲು ಆರಂಭಿಸಿ! ವಿಶ್ವ ತಂಬಾಕು ರಹಿತ ದಿನದಂದು ಎಲ್ಲ ರೀತಿಯ ತಂಬಾಕಿನ ಉತ್ಪನ್ನಗಳಿಗೂ ಗುಡ್ ಬೈ ಹೇಳೋಣ. ಅವುಗಳ ದುಷ್ಪರಿಣಾಮವನ್ನು ಅರಿತುಕೊಳ್ಳೋಣ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ.

10 ರಲ್ಲಿ ಒಬ್ಬರು ಸಾವು!

ತಂಬಾಕು ಸೇವನೆಯಿಂದಾಗಿ ಹತ್ತರಲ್ಲಿ ಒಬ್ಬ ಹೃದ್ರೋಗಿ ಸಾಯುತ್ತಿದ್ದಾರೆ. ನಿಮ್ಮ ಹೃದಯವನ್ನೂ, ಆ ಮೂಲಕ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಧೂಮಪಾನ ಬಿಟ್ಟುಬಿಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿಕೊಂಡಿದೆ.

ಮರಳಿನಲ್ಲಿ ಜಾಗೃತಿ

ಕಿಲ್ಲರ್ ಟೊಬ್ಯಾಕೋ ಎಂಬ ಹೆಸರಿನಲ್ಲಿ ಮರಳು ಶಿಲ್ಪ ರಚಿಸಿ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಮರಳು ಶಿಲ್ಪದಲ್ಲಿ ಚಿತ್ರಸಿದ್ದಾರೆ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್.

ತಂಬಾಕು ನಿಮ್ಮನ್ನು ಕೊಲ್ಲುವ ಮೊದಲು ಅದನ್ನು ತ್ಯಜಿಸಿ!

ತಂಬಾಕು ನಿಮ್ಮನ್ನು ಕೊಲ್ಲುವ ಮೊದಲು ಅದನ್ನು ತ್ಯಜಿಸಿಬಿಡಿ. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯದಿರಿ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನಿಮ್ಮ ದೇಶ ನೀವು ಆರೋಗ್ಯವಂತರಾಗಿರುವುದನ್ನು ಬಯಸುತ್ತದೆ ಎಂದಿದ್ದಾರೆ ಶ್ರೀನಿವಾಸ್ ಬಿ ವಿ.

ತಂಬಾಕು ನಿಮ್ಮ ಬದುಕನ್ನು ಕಸಿಯದಿರಲಿ

ತಂಬಾಕು, ನಿಮ್ಮ ಆರೋಗ್ಯಕರ ಮತ್ತು ಸಂತಸದ ಬದುಕನ್ನು ಕಸಿಯಲು ಬಿಡಬೇಡಿ. ಈ ವಿಶ್ವ ತಂಬಾಕು ರಹಿತ ದಿನದಂದು ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಕೆಲಸ ಮಾಡೋಣ ಎಂದಿದ್ದಾರೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್.

English summary
World No Tobacco Day (WNTD) is observed around the world every year on May 31st. Creating awareness about the nagative health effect of the tobacco is the prime agenda of the day. Here are the few twitter statements on world no tobacco day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X