ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಲಸಿಕೆ ಪೂರೈಕೆಗೆ ಭಾರತದ ಸಹಕಾರ ಬೇಕು: ಬಿಲ್ ಗೇಟ್ಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಜಾಗತಿಕ ಮಟ್ಟದಲ್ಲಿ ಭಾರತವು ಮುಂಚೂಣಿ ಲಸಿಕೆ ಉತ್ಪಾದಕ ದೇಶವಾಗಿರುವುದರಿಂದ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.

'ಭಾರತವು ಮುಂಚೂಣಿ ಲಸಿಕೆ ಉತ್ಪಾದನಾ ದೇಶವಾಗಿದೆ. ಕೋವಿಡ್ 19 ಲಸಿಕೆಗಳ ಉತ್ಪಾದನೆಗೆ ನಮಗೆ ಭಾರತದ ಸಹಕಾರ ಬೇಕಿದೆ. ಅಭಿವೃದ್ಧಿಶೀಲ ದೇಶಗಳಿಗೆ ಲಸಿಕೆಯಲ್ಲಿ ಕೆಲವು ಲಭ್ಯವಾಗಬಹುದು ಎಂಬ ಕಾರಣಕ್ಕೆ ಜಗತ್ತು ಭಾರತದತ್ತ ನೀಡುತ್ತಿದೆ' ಎಂದು ಬಿಲ್ ಗೇಟ್ಸ್ ತಿಳಿಸಿದ್ದಾರೆ.

ಕೊರೊನಾ ವೈರಸ್‌ನಿಂದ ಉಸಿರಾಟದ ಸಮಸ್ಯೆ: ಆಕ್ಸಿಜನ್‌ಗೆ ಬೇಡಿಕೆ ನಾಲ್ಕುಪಟ್ಟು, ಬೆಲೆ ದುಪ್ಪಟ್ಟುಕೊರೊನಾ ವೈರಸ್‌ನಿಂದ ಉಸಿರಾಟದ ಸಮಸ್ಯೆ: ಆಕ್ಸಿಜನ್‌ಗೆ ಬೇಡಿಕೆ ನಾಲ್ಕುಪಟ್ಟು, ಬೆಲೆ ದುಪ್ಪಟ್ಟು

ಪಿಟಿಐ ಜತೆ ಮಾತನಾಡಿರುವ ಬಿಲ್ ಗೇಟ್ಸ್, ಕೊರೊನಾ ವೈರಸ್ ಲಸಿಕೆಗಾಗಿ ಭಾರತದೊಂದಿಗೆ ಮಧ್ಯಸ್ಥಿಕೆ ವಹಿಸುವ ತಮ್ಮ ಯೋಜನೆ ಬಗ್ಗೆ ತಿಳಿಸಿದ್ದಾರೆ. 'ಲಸಿಕೆಯನ್ನು ತೆಗೆದುಕೊಳ್ಳುವ ಮತ್ತು ಭಾರತದಲ್ಲಿ ಉತ್ಪಾದನೆ ಮಾಡುವುದರಲ್ಲಿ ಮಧ್ಯಸ್ಥಿಕೆ ವಹಿಸಲು ಯೋಜನೆ ಇದೆ. ಆ ಲಸಿಕೆ ಆಸ್ಟ್ರಾಜೆನೆಕಾ, ಆಕ್ಸ್‌ಫರ್ಡ್, ನೋವಾವ್ಯಾಕ್ಸ್ ಅಥವಾ ಜಾನ್ಸನ್ ಆಂಡ್ ಜಾನ್ಸನ್ ಯಾರಿಂದ ಬಂದರೂ ಅದಕ್ಕೆ ಸಿದ್ಧ' ಎಂದಿದ್ದಾರೆ.

World Need Indias Cooperation In Covid-19 Vaccine Supply: Bill Gates

'ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಕೋವಿಡ್ 19 ಲಸಿಕೆ ಉತ್ಪಾದನೆ ಶುರುವಾಗುವ ಸಾಧ್ಯತೆ ಇದೆ. ಖಂಡಿತವಾಗಿಯೂ ನಾವು ಭಾರತದಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಪಡೆಯಲು ಬಯಸಿದ್ದೇವೆ. ಅದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದ ಬಳಿಕ ಮುಂದಿನ ವರ್ಷ ನಮ್ಮ ಯೀಜನೆಗಳ ಮೇಲೆ ಗಮನ ಹರಿಸುತ್ತೇವೆ' ಎಂದು ಹೇಳಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಬರುವ ಮೃತದೇಹಗಳಿಗೆ ಆಂಟಿಜೆನ್ ಪರೀಕ್ಷೆಸರ್ಕಾರಿ ಆಸ್ಪತ್ರೆಗೆ ಬರುವ ಮೃತದೇಹಗಳಿಗೆ ಆಂಟಿಜೆನ್ ಪರೀಕ್ಷೆ

Recommended Video

ಇವರಿಬ್ಬರ ಕಚ್ಚಾಟದಲ್ಲಿ ಅಧಿಕಾರಿಗಳು ಅಪ್ಪಚ್ಚಿ | Oneindia Kannada

ಹಲವು ಲಸಿಕೆಗಳು ಮುಂದಿನ ವರ್ಷ ಮೊದಲ ಮೂರು ತಿಂಗಳಲ್ಲಿ ಲಭ್ಯವಾಗುವ ಆಶಾವಾದ ಹೊಂದಿದ್ದೇನೆ. ಇನ್ನು ಕೆಲವು ಲಸಿಕೆಗಳು ಅವುಗಳ ಅಂತಿಮ ಹಂತದಲ್ಲಿ ಇರಲಿವೆ ಎಂದು ತಿಳಿಸಿದ್ದಾರೆ.

English summary
Bill Gates said, India is a leading vaccine producer, we need cooperation from India on manufacturing covid-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X