ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಚಾಕೋಲೇಟ್ ದಿನ: ಚಾಕೋಲೇಟ್ ಸೇವನೆಯಿಂದಾಗುವ 5 ಲಾಭ

|
Google Oneindia Kannada News

ಚಾಕೋಲೇಟ್ ಅನ್ನು ಇಷ್ಟಪಡದವರು ಯಾರು? ಒತ್ತಡದಲ್ಲಿ ಮಂಕಾಗಿ ಕುಳಿತಾಗ, ಯಾರಾದರೊ ಒಂದು ಚಾಕೋಲೇಟ್ ಕೊಟ್ಟರೆ ಸಾಕು ಮುಖ ಅರಳುತ್ತದೆ. ಅದನ್ನು ಬಾಯಿಗೆ ಹಾಕುತ್ತಿದ್ದಂತೆಯೇ ಕ್ಷಣ ಕಾಲ ಒತ್ತಡವೆಲ್ಲ ಮಾಯವಾಗಿ ಒಂದು ರೀತಿಯ ಉಲ್ಲಾಸ ಮನಸ್ಸನ್ನು ಆವರಿಸುತ್ತದೆ.

ಪುಟ್ಟ ಮಗುವಿನಿಂದ ಹಿಡಿದು ವೃದ್ಧರವೆಗೂ ಚಾಕೋಲೇಟ್ ಎಂದೊಡನೆ ಬಾಯಿ ನೀರೂರುತ್ತದೆ. ಇಂತಿಪ್ಪ ಚಾಕೋಲೇಟ್ ಗೆ ಒಂದು ದಿನವನ್ನು ಮೀಸಲಿಡಲಾಗಿದೆ. ಆ ದಿನ ಯಾವುದು ಗೊತ್ತಾ? ಜುಲೈ 7! ಹೌದು, ಇಂದು ವಿಶ್ವ ಚಾಕೋಲೇಟ್ ದಿನವಂತೆ!

ಹಣ್ಣುಹಂಪಲು ತಿಂದು ಬೊಜ್ಜನ್ನು ಜಜ್ಜಿ ಪುಡಿಪುಡಿ ಮಾಡಿ!ಹಣ್ಣುಹಂಪಲು ತಿಂದು ಬೊಜ್ಜನ್ನು ಜಜ್ಜಿ ಪುಡಿಪುಡಿ ಮಾಡಿ!

ಜುಲೈ 7 ನ್ನೇ ಏಕೆ ಚಾಕೋಲೇಟ್ ದಿನವನ್ನಾಗಿ ಆಚರಿಸುತ್ತಾರೆ ಎಂಬ ಕುರಿತು ಎಲ್ಲಿಯೂ ಮಾಹಿತಿಯಿಲ್ಲ. ಬಹುಶಃ ಇದು ಚಾಕೋಲೇಟ್ ಅನ್ನು ಪರಿಚಯಿಸಿದ ದಿನವಿರಬಹುದು! ಆದರೆ ಪ್ರತಿವರ್ಷ ಈ ದಿನವನ್ನು ವಿಶ್ವದ ನಾನಾ ದೇಶದ ಜನರು ಚಾಕೋಲೇಟ್ ಸೇವಿಸುವ ಮೂಲಕ ಸಂಭ್ರಮದಿಂದ ಆಚರಿಸುತ್ತಾರೆ.

ಚಾಕೋಲೇಟ್ ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂಬುದನ್ನು ಸಾಕಷ್ಟು ಸಂಶೋಧನೆಗಳು ಸಾಬೀತುಪಡಿಸಿದ್ದು, ಈ ಸುದ್ದಿ ಚಾಕೋಲೇಟ್ ಪ್ರಿಯರಿಗಂತೂ ಎಲ್ಲಿಲ್ಲದ ಖುಷಿ ತಂದಿಟ್ಟಿದೆ. ಏನೇ ಅಂದರೂ ಅತಿಯಾದ ಚಾಕೋಲೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ, ಅದರಲ್ಲೂ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಚಾಕೋಲೇಟ್ ಸೇವನೆಯನ್ನು ಕಡಿಮೆ ಮಾಡಬೇಕು ಎಂಬುದನ್ನೂ ಅಲ್ಲಗಳೆಯುವಂತಿಲ್ಲ.

ಕೈತೊಳೆಯೋದಕ್ಕೆ ಬಿಸಿ ನೀರು ಒಳ್ಳೆಯದೋ ತಣ್ಣೀರೋ?ಕೈತೊಳೆಯೋದಕ್ಕೆ ಬಿಸಿ ನೀರು ಒಳ್ಳೆಯದೋ ತಣ್ಣೀರೋ?

ತೂಕ ಹೆಚ್ಚಿಸುತ್ತದೆ ಎಂಬುದನ್ನು ಬಿಟ್ಟರೆ, ಚಾಕೋಲೇಟ್ ಸೇವನೆಯಿಂದ ಹಲವಾರು ಉಪಯೋಗವಿರುವುದನ್ನೂ ನೆನಪಿನಲ್ಲಿರಿಸಿಕೊಳ್ಳಬೇಕಿದೆ. ಚಾಕೋಲೇಟ್ ಅನ್ನು ಮಿತವಾಗಿ ಸೇವಿಸುವುದು ದೇಹ ಮತ್ತು ಮನಸ್ಸಿನ ಆರೋಗ್ಯ ದೃಷ್ಟಿಯಿಂದ ಒಳ್ಳೆಯದೇ.

ಕೊಲೆಸ್ಟ್ರಾಲ್ ದೂರಮಾಡುತ್ತೆ

ಕೊಲೆಸ್ಟ್ರಾಲ್ ದೂರಮಾಡುತ್ತೆ

ದೇಹದಲ್ಲಿ ಕೊಬ್ಬಿನಂಶ ಹೆಚ್ಚಿರುವವರು ಚಾಕೋಲೇಟ್ ಸೇವಿಸುವುದರಿಂದ ಕೊಬ್ಬಿನಂಶ ಕಡಿಮೆಯಾಗುತ್ತದೆ ಎಂದು ಅಮೆರಿಕದ ಪ್ರಸಿದ್ಧ ನಿಯತಕಾಲಿಕ ದಿ ಜರ್ನಲ್ ಆಫ್ ನ್ಯೂಟ್ರಿಶಿಯನ್ ನ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ. ದೇಹದಲ್ಲಿರುವ ಕೆಟ್ಟ ಕೊಬ್ಬಿನಂಶಗಳನ್ನು ಕಡಿಮೆ ಮಾಡುವ ತಾಕತ್ತು ಚಾಕೋಲೇಟ್ ಗಿದೆಯಂತೆ!

ಸ್ಮರಣಶಕ್ತಿ ಉಳಿಸುತ್ತೆ

ಸ್ಮರಣಶಕ್ತಿ ಉಳಿಸುತ್ತೆ

ಹಾರ್ವರ್ಡ್ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಚಾಕೋಲೇಟ್ ಗಳು ಸ್ಮರಣಶಕ್ತಿಯನ್ನು ಕಾಪಾಡುತ್ತವೆ. ಅಂದರೆ ವಯಸ್ಸಾಗುತ್ತಿದ್ದಂತೆಯೇ ಮರೆವಿನ ಕಾಯಿಲೆಯಿಂದ ಬಳಲುವುದನ್ನು ಚಾಕೋಲೇಟ್ ಸೇವನೆಯ ಮೂಲಕ ತಪ್ಪಿಸಬಹುದಂತೆ!

ಬಾಲ್ಯದಲ್ಲಿ ಬೊಜ್ಜಿದ್ದರೆ ಲಕ್ವಾ ಹೊಡೆಯುವ ಸಾಧ್ಯತೆ ಹೆಚ್ಚು: ವರದಿಬಾಲ್ಯದಲ್ಲಿ ಬೊಜ್ಜಿದ್ದರೆ ಲಕ್ವಾ ಹೊಡೆಯುವ ಸಾಧ್ಯತೆ ಹೆಚ್ಚು: ವರದಿ

ಹೃದಯಕ್ಕೂ ಒಳ್ಳೆಯದು

ಹೃದಯಕ್ಕೂ ಒಳ್ಳೆಯದು

ಚಾಕೋಲೇಟ್ ಸೇವನೆಯಿಂದ ಹೃದ್ರೋಗದ ಸಮಸ್ಯೆಯೂ ಕಡಿಮೆಯಾಗುತ್ತದೆ ಎಂದು ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆದ ಅಧ್ಯಯನವೊಂದು ಹೇಳಿದೆ. ಒತ್ತಡ ಕಡಿಮೆ ಮಾಡುವ ಶಕ್ತಿ ಚಾಕೋಲೇಟ್ ಗೆ ಇರುವುದರಿಂದ ಹೃದಯದ ಆರೋಗ್ಯವನ್ನು ಇದು ಕಾಪಾಡಬಲ್ಲದು ಎನ್ನುತ್ತದೆ ಇ ಅಧ್ಯಯನ.

ಪಾರ್ಶ್ವವಾಯು ಅಪಾಯವಿರುವುದಿಲ್ಲ

ಪಾರ್ಶ್ವವಾಯು ಅಪಾಯವಿರುವುದಿಲ್ಲ

ಕೆನಡದ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಚಾಕೋಲೇಟ್ ಸೇವಿಸುವವರಲ್ಲಿ ಪಾರ್ಶ್ವವಾಯುವಿನ ಅಪಾಯ ಕಡಿಮೆಯಂತೆ. 44,489 ಜನರನ್ನು ಪ್ರಯೋಗಕ್ಕೊಳಪಡಿಸಿದ್ದ ವಿಜ್ಞಾನಿಗಳ ತಂಡ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಗರ್ಭಿಣಿಯರಿಗೂ ಹಿತ

ಗರ್ಭಿಣಿಯರಿಗೂ ಹಿತ

ಗರ್ಭಿಣಿಯರು ಚಾಕೋಲೇಟ್ ಸೇವಿಸುವುದರಿಂದ ಭ್ರೂಣದ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದಜು ಅಟ್ಲಾನದಲ್ಲಿ ನಡೆದ ಸಂಶೋಧನೆಯೊಂದು ಹೇಳಿದೆ. ಗರ್ಭಿಣಿಯರು ಪ್ರತಿದಿನ ಸುಮಾರು 30 ಗ್ರಾಂ ನಷ್ಟು ಚಾಕೋಲೇಟ್ ಸೇವಿಸುವುದರಿಂದ ಅವರ ಆರೋಗ್ಯ ಗಮನಾರ್ಹವಾಗಿ ವೃದ್ಧಿಸುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

English summary
Today is world chocolate day! Despite chocolates' bad reputation for causing weight gain, there are a number of health benefits associated with this delicious treat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X