ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಸ್ತನ್ಯಪಾನ ಸಪ್ತಾಹ: ಮಾತೆ ನೀಡಿದ ಅಮೃತದ 5 ಉಪಯೋಗ

|
Google Oneindia Kannada News

ಮಗುವಿಗೆ ಕನಿಷ್ಠ ಒಂದರಿಂದ ಗರಿಷ್ಠ 2-2.5 ವರ್ಷದವರೆಗೂ ಸ್ತನ್ಯಪಾನ ಮಾಡಿಸುವುದು ಮಗು ಮತ್ತು ತಾಯಿ ಇಬ್ಬರ ಆರೋಗ್ಯ ದೃಷ್ಟಿಯಿಂದಲೂ ಬಹಳ ಒಳ್ಳೆಯದು ಎಂಬುದು ತಜ್ಞ ವೈದ್ಯರ ಅಭಿಮತ. ಒಬ್ಬ ಮಗುವಿನ ಭವಿಷ್ಯದ ಆರೋಗ್ಯವನ್ನು ನಿರ್ಧರಿಸುವ ಶಕ್ತಿ, ಅದು ಚಿಕ್ಕಂದಿನಲ್ಲಿ ಸೇವಿಸಿದ ತಾಯಿಹಾಲಿಗಿದೆ.

ಅಷ್ಟೇ ಅಲ್ಲ, ತಮ್ಮ ಮಗುವಿಗೆ ಕನಿಷ್ಠ ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ತನ್ಯಪಾನ ಮಾಡಿಸುವ ತಾಯಿಯೂ ಸ್ತನ ಕ್ಯಾನ್ಸರ್ ನಂಥ ಮಾರಕ ರೋಗಗಳಿಗೆ ತುತ್ತಾಗುವುದಿಲ್ಲ. ಅದಕ್ಕೆಂದೇ ಸ್ತನ್ಯಪಾನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಪ್ರತಿ ತಾಯಿಗೂ ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವೃತ್ತಿ ನಿರತ ತಾಯಿಯರು ಒಂದು ವರ್ಷಕ್ಕೂ ಮೊದಲೇ ಮಕ್ಕಳು ಸ್ತನ್ಯಪಾನದಿಂದ ವಂಚಿತರಾಗುವಂತೆ ಮಾಡುತ್ತಿರುವುದರಿಂದ ಇಂದಿನ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಮಾತ್ರವಲ್ಲ ಚಿಕ್ಕ ವಯಸ್ಸಿನಿಂದಲೇ ತಾಯಿಯರೂ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!

ಅಷ್ಟಕ್ಕೂ ಇಂದು ಸ್ತನ್ಯಪಾನದ ಬಗ್ಗೆ ಮಾತನಾಡುವುದಕ್ಕೆ ಕಾರಣವಿದೆ. ಆಗಸ್ಟ್ 1 ರಿಂದ 7 ನೇ ತಾರಿಖಿನವರೆಗಿನ ಒಂದು ವಾರವನ್ನು ಸ್ತನ್ಯಪಾನ ಸಪ್ತಾಹ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸ್ತನ್ಯಪಾನದ ಮಹತ್ವವನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ವರ್ಲ್ಡ್ ಅಲಿಯನ್ಸ್ ಫಾರ್ ಬ್ರೆಸ್ಟ್ ಫೀಡೀಂಗ್ ಆಕ್ಷನ್ (WABA) 1992 ರಿಂದ ಈ ಸಪ್ತಾಹವನ್ನು ಆಚರಿಸುತ್ತಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸಹ ಕೈಜೋಡಿಸಿವೆ.

ವಿಶ್ವ ಸ್ತನ್ಯಪಾನ ಸಪ್ತಾಹದ ಸಮಯದಲ್ಲಿ ಪ್ರತಿ ಮಾತೆಯೂ ತನ್ನ ಪುಟ್ಟ ಕಂದನಿಗೆ, ಅಕ್ಕರೆ, ಮಮತೆ, ಪ್ರೀತಿ, ವಿಶ್ವಾಸಗಳನ್ನು ತುಂಬಿ ಕುಡಿಸುವ ಅಮೃತದ ಮಹತ್ವ ಅರಿಯೋಣ. ಸ್ತನ್ಯಪಾನ ಏಕೆ ಮಹತ್ವ ಎಂಬ ಕುರಿತ ಮಾಹಿತಿ ಇಲ್ಲಿದೆ...

ಪೌಷ್ಟಿಕ ಮತ್ತು ಸುರಕ್ಷಿತ

ಪೌಷ್ಟಿಕ ಮತ್ತು ಸುರಕ್ಷಿತ

ತಾಯಿಹಾಲಿನಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿರುವುದರಿಂದ ಅದು ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ. ಮಾತ್ರವಲ್ಲ, ಮಗುವಿನ ಆರೋಗ್ಯವನ್ನೂ ಕಾಪಾಡುತ್ತದೆ. ಹಸುವಿನ ಹಾಲಿಗಿಂತ ಬೇಗ ತಾಯಿ ಹಾಲು ಜೀರ್ಣವಾಗುವುದರಿಂದ ಮಗುವಿಗೆ ತಾಯಿ ಹಾಲು ನೀಡುವುದೇ ಒಳಿತು ಎಂಬುದು ವೈದ್ಯರ ಸಲಹೆ.

ಮೆದುಳಿನ ಶಕ್ತಿ ವೃದ್ಧಿ

ಮೆದುಳಿನ ಶಕ್ತಿ ವೃದ್ಧಿ

ಸ್ತನ್ಯಪಾನ ಮಗುವಿನ ಮೆದುಳಿನ ಬೆಳವಣಿಗೆಗೂ ಸಹಕಾರಿ. ಮಗುವಿನ ಚುರುಕುತನ, ಐಕ್ಯೂ ಹೆಚ್ಚಾಗುವುಂತೆ ಮಾಡುವ ಶಕ್ತಿ ಸ್ತನ್ಯಪಾನಕ್ಕಿದೆಯಂತೆ. ಅಷ್ಟೇ ಅಲ್ಲ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಿ, ಮಗುವನ್ನು ಬ್ಯಾಕ್ಟೀರಿಯಾ, ವೈರಸ್ ದಾಳಿಯಿಂದ ಕಾಪಾಡುತ್ತದೆ.

ತಾಜಾತನ

ತಾಜಾತನ

ತಾಯಿ ಹಾಲು ಮಕ್ಕಳಿಗೆ ತಕ್ಷಣವೇ ಸಿಗುವುದರಿಂದ ತಾಜಾತನದಿಂದಲೂ ಕೂಡಿರುತ್ತದೆ, ಮತ್ತು ಯಾವುದೇ ರೀತಿಯ ಕಲಬೆರಿಕೆ ಸಾಧ್ಯವಿಲ್ಲ. ಅದಕ್ಕೆಂದೇ ಇದು ಸುರಕ್ಷಿತವೂ ಹೌದು. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳನ್ನೂ ಕಾಡುತ್ತಿರುವ ಬೊಜ್ಜಿನ ಸಮಸ್ಯೆಯನ್ನೂ ನಿವಾರಿಸುವ ಶಕ್ತಿ ಸ್ತನ್ಯಪಾನಕ್ಕಿದೆಯಂತೆ.

ವಾಕ್ಸಿನ್ ಗಿಂತ ಶಕ್ತಿಶಾಲಿ

ವಾಕ್ಸಿನ್ ಗಿಂತ ಶಕ್ತಿಶಾಲಿ

ಇತ್ತೀಚೆಗೆ ಪುಟ್ಟ ಮಗುವಿಗೂ ತಿಂಗಳು ಚುಚ್ಚು ಮದ್ದು ನೀಡುವುದನ್ನು ಕಾಣುತ್ತೇವೆ. ಬದಲಾದ ಕಾಲದಲ್ಲಿ ಅದು ಅನಿವಾರ್ಯವೆನ್ನಿಸಿದೆ. ಆದರೆ ತಾಯಿ ಹಾಲು ಈ ಎಲ್ಲ ವಾಕ್ಸಿನ್ ಗಳಿಗಿಂತಲೂ ಹೆಚ್ಚು ಶಕ್ತಿಶಾಲಿ. ವಾಕ್ಸಿನ್ ಗಳು ದೇಹವನ್ನು ರೋಗಗಳಿಂದ ಕಾಪಾಡುವುದಕ್ಕಿಂತ ಹೆಚ್ಚು ತಾಯಿಹಾಲು ಕಾಪಾಡುತ್ತದೆ.

ತಾಯಿಗೂ ಅನುಕೂಲ

ತಾಯಿಗೂ ಅನುಕೂಲ

ಸ್ತನ್ಯಪಾನ ಮಾಡಿಸುವುದರಿಂದ ತಾಯಂದಿರು ಸಹ ಸ್ತನ ಕ್ಯಾನ್ಸರ್, ಮೂಳೆ ಸವೆತದಿಂದ ಸಮಸ್ಯೆಯಿಂದ ಬಳಲುವುದಿಲ್ಲ ಎಂಬುದು ತಜ್ಞ ವೈದ್ಯರ ಅಧ್ಯಯನದಿಂದ ತಿಳಿದುಬಂದ ಮಾಹಿತಿ. ಒಟ್ಟಿನಲ್ಲಿ ಮಕ್ಕಳು ದೀರ್ಘಾಯುಷಿಗಳೂ, ಆರೋಗ್ಯವಂತರೂ ಆಗುವಂತೆ ಮಾಡುವ ತಾಯಿಹಾಲು ನಿಜಕ್ಕೂ ಅಮೃತಕ್ಕೆ ಸಮ.

English summary
World Breastfeeding Week (WBW) is an annual celebration which is being held every year from 1 to 7 August in more than 120 countries. Here are some important benifits of Breastfeeding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X