ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ತಕ್ಕೆ ಯಾವುದೇ ಜಾತಿಯಿಲ್ಲ, ರಕ್ತದಾನ ಮಾಡಿ, ಜೀವ ಉಳಿಸಿ

|
Google Oneindia Kannada News

ರಕ್ತ ಎಂದರೆ ಜೀವ ಜಲ. ನಮ್ಮನ್ನೆಲ್ಲ ಬದುಕಿಸಿರುವುದು ಅದೇ. ಅನಾರೋಗ್ಯ ಪೀಡಿತನಾದ ಅಥವಾ ಅಪಘಾತಕ್ಕೆ ತುತ್ತಾದ ವ್ಯಕ್ತಿ ಸೂಕ್ತ ಗ್ರೂಪಿನ ರಕ್ತ ಸಿಗದ ಕಾರಣವೇ ಸಾವನ್ನಪ್ಪಿದ ಸಾಕಷ್ಟು ಘಟನೆಗಳು ನಮ್ಮ ಮುಂದಿವೆ. ಒಟ್ಟಿನಲ್ಲಿ ನಮ್ಮನ್ನೆಲ್ಲ ಬದುಕುಳಿಸಿರುವುದೇ ಈ ಕೆಂಪುದ್ರವ.

ಹೀಗಿರುವಾಗ, ಸಂಕಷ್ಟದಲ್ಲಿರುವ, ರಕ್ತದ ಅಗತ್ಯವಿರುವ ವ್ಯಕ್ತಿಗೆ ರಕ್ತದಾನ ಮಾಡಬೇಕಾದ ಅಗತ್ಯವನ್ನು ಅರ್ಥಮಾಡಿಸಲು ರಕ್ತದಾನ ದಿನವನ್ನು ಆಚರಿಸಲಾಗುತ್ತದೆ.

ನೀವೂ ರಕ್ತದಾನ ಮಾಡಬೇಕಾ? ಹಾಗಾದರೆ ಇವುಗಳನ್ನು ನೆನಪಿಡಿನೀವೂ ರಕ್ತದಾನ ಮಾಡಬೇಕಾ? ಹಾಗಾದರೆ ಇವುಗಳನ್ನು ನೆನಪಿಡಿ

ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಮತ್ತು ರಕ್ತದಾನ ಮಾಡಿ ಪರರ ಪ್ರಾಣ ಉಳಿಸಿದ ದಾನಿಗಳಿಗೆ ಕೃತಜ್ಞತೆ ಹೇಳುವ ಸಲುವಾಗಿ ಪ್ರತಿ ವರ್ಷ ಜೂನ್ 14 ನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಜನರು ರಕ್ತದಾನದ ಕುರಿತು ಅರಿವು ಮೂಡಿಸುವ ಮೂಲಕ ಮತ್ತು ರಕ್ತದಾನ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 2004 ರಲ್ಲಿ ಆರಂಭವಾದ ಈ ಆಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿವೆ.

ಅಂಗಾಂಗ ದಾನ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿಅಂಗಾಂಗ ದಾನ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಸಾಂಆಜಿಕ ಜಾಲತಾನಗಳಲ್ಲಿ ಜೋರಾಗಿಯೇ ನಡೆಯುತ್ತಿದೆ. ಅ ಅದರ ಭಾಗವಾಗಿ ಟ್ವಿಟ್ಟರ್ ನಲ್ಲಿ #DonateBloodSaveLife ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ನೀವು ಹೀರೋ ಆಗಬೇಕೆ? ರಕ್ತದಾನ ಮಾಡಿ!

ನೀವು ಹೀರೋ ಆಗಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಾದರೆ ಒಂದು ರೂಪಾಯಿಯನ್ನು ಖರ್ಚು ಮಾಡದೆ ಹೀರೊ ಆಗುವುದಕ್ಕೆ ಒಂದು ಮಾರ್ಗವಿದೆ. ರಕ್ತದಾನ ಮಾಡಿ. ನಿಮ್ಮ ರಕ್ತದ ಕೆಲವೇ ಕೆಲವು ಹನಿಗಳು ಒಬ್ಬರ ಜೀವ ಉಳಿಸಬಹುದು, ನಿಮ್ಮನ್ನು ಹೀರೋ ಆಗಿ ಮಾಡಬಹುದು ಎಂದು ಕೋಮಲ್ ಸಿಂಗ್ಲಾ ಟ್ವೀಟ್ ಮಾಡಿದ್ದಾರೆ.

ರಕ್ತದಾನ ಹಲವು ರೋಗಗಳಿಗೆ ಪರಿಹಾರ!

ರಕ್ತದಾನ ಮಾಡಿ. ಏಕೆಂದರೆ ಅದರ ಕೊರತೆಯಿಂದ ಯಾರೂ ಜೀವ ಕಳೆದುಕೊಳ್ಳಬಾರದು. ಇದು ದಾನಿಗೆ ಸಾರ್ಥಕತೆಯನ್ನು ನೀಡುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಅಶಕ್ತತೆ ಆಗುವುದಿಲ್ಲ. ಬದಲಾಗಿ ಇದು ಹಲವು ರೋಗಗಳಿಗೆ ಪರಿಹಾರ ನೀಡಬಹುದು. ರಕ್ತದಾನ ಮಾಡುವುದಕ್ಕಿಂತ ಹೆಚ್ಚಿನ ಸೇವೆ ಮನುಕುಲದಲ್ಲಿ ಬೇರೆ ಇಲ್ಲ ಎಂದಿದ್ದಾರೆ ತರುಣ್ ತಾನೆಜಾ.

ನಮ್ಮೆಲ್ಲರ ರಕ್ತವೂ ಒಂದೇ!

ನಾವೆಲ್ಲರೂ ಒಂದು, ನಮ್ಮೆಲ್ಲರ ಜಾತಿ ಮಾನವೀಯತೆ. ನಮ್ಮೆಲ್ಲರ ನರಗಳಲ್ಲಿ ಹರಿಯುತ್ತಿರುವ ರಕ್ತವೂ ಒಂದೆ. ಅದು ನಮ್ಮ ಜಾತಿಯನ್ನು ನೋಡಿ ಹರಿಯುವುದಿಲ್ಲ! ಆದ್ದರಿಂದ ರಕ್ತದಾನ ಮಾಡಿ. ದೇವರ ಆಅಶೀರ್ವಾದ ಪಡೆಯಿರಿ ಎಂದೊಬ್ಬರು ಟ್ವೀಟ್ ಮಾಡಿದ್ದಾರೆ.

ಮಾನವೀಯತೆ ಬದುಕಿರುವುದಕ್ಕೆ ಸಾಕ್ಷಿ ಅದು!

ರಕ್ತದಾನ ಕೇವಲ ಒಂದು ಜೀವವನ್ನು ಉಳಿಸುವುದಿಲ್ಲ. ಬದಲಾಗಿ ಆದು ಈ ಜಗತ್ತಿನಲ್ಲಿ ಮಾನವೀಯತೆಯ ಇರುವನ್ನು ನೆನಪಿಸುತ್ತದೆ. ನಮ್ಮಿಂದ ರಕ್ತದಾನ ಮಾಡುವುದಕ್ಕೆ ಸಾಧ್ಯವಿದೆ ಎಂದಾದರೆ ನಾವದನ್ನು ಮಾಡಲೇಬೇಕು ಎಂದಿದ್ದಾರೆ ಇನ್ನೊಬ್ಬರು.

English summary
Every year on 14 June, countries around the world celebrate World Blood Donor Day (WBDD). The event, established in 2004, serves to raise awareness of the need for safe blood and blood products, and to thank blood donors for their voluntary, life-saving gifts of blood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X