ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ನಿಂದ 4 ಕೋಟಿ ವಲಸೆ ಕಾರ್ಮಿಕರ ಬದುಕಿಗೆ ಸಂಕಷ್ಟ: ವಿಶ್ವ ಬ್ಯಾಂಕ್

|
Google Oneindia Kannada News

ನವದೆಹಲಿ, ಏಪ್ರಿಲ್ 23: ಲಾಕ್‌ಡೌನ್ 4 ಕೋಟಿ ವಲಸೆ ಕಾರ್ಮಿಕರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

Recommended Video

ಕಾವೇರಿ ತೀರದಲ್ಲಿ ಅಂಬೇಡ್ಕರ್ ಫೋಟೋ ಇಟ್ಟು ಚಕ್ರವರ್ತಿ ಸೂಲಿಬೆಲೆ ಏನ್ ಹೇಳಿದ್ದಾರೆ ನೋಡಿ | Chakravarthi|Aambedkar

ದೇಶದಲ್ಲಿ ಸುಮಾರು 4 ಕೋಟಿ ವಲಸೆ ಕಾರ್ಮಿಕರಿದ್ದಾರೆ, ಲಾಕ್‌ಡೌನ್‌ನಿಂದಾಗಿ ಅವರ ದೈನಂದಿನ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ.

ಕೆಲವು ದಿನಗಳ ಹಿಂದೆಯಷ್ಟೇ ಸುಮಾರು 50-60 ಸಾವಿರ ಮಂದಿ ವಲಸೆ ಕಾರ್ಮಿಕರು ನಗರ ಬಿಟ್ಟು ಹಳ್ಳಿಗಳಿಗೆ ವಾಪಸ್ ಆಗಿದ್ದಾರೆ.ಮೊದಲ ಹಂತದಲ್ಲಿ ಬಿಕ್ಕಟ್ಟು ತಲೆದೋರಿದಾಗ ಗಲ್ಫ್‌ ರಾಷ್ಟ್ರಗಳಲ್ಲಿರುವವರು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದಾರೆ.

World Bank Says Lockdown In India has impacted 4 Crore Internal Migrants

ವಿಮಾನ ಸೇವೆ ಸ್ಥಗಿತಗೊಳ್ಳುವವರೆಗೆ ಜನರು ವಾಪಸ್ ಆಗಿದ್ದಾರೆ. ಚೀನಾ ಮತ್ತು ಇರಾನ್‌ನಲ್ಲಿದ್ದ ವಲಸಿಗರನ್ನು ಆಯಾ ದೇಶದವರು ಸ್ಥಳಾಂತರಿಸಿದ್ದಾರೆ.ವಲಸೆ ಕಾರ್ಮಿಕರ ಆರೋಗ್ಯ, ನಗದು ವರ್ಗಾವಣೆ ಮತ್ತು ಇತರೆ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸರ್ಕಾರ ಅವರಿಗೆ ನೆರವಾಗಬೇಕು ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ದಕ್ಷಿಣ ಭಾಗದಲ್ಲಿರುವ ವೆನೆಜುವೆಲಾ-ಕೊಲಂಬಿಯಾ, ನೇಪಾಳ-ಭಾರತ, ಜಿಂಬಾಬ್ವೆ-ದಕ್ಷಿಣ ಆಫ್ರಿಕಾ, ಮ್ಯಾನ್ಮಾರ್ -ಥಾಯ್ಲೆಂಡ್ ಮೊದಲಾದ ಗಡಿಗಳನ್ನು ಹೊರತುಪಡಿಸಿ ಸ್ವಯಂ ನಿರ್ಧಾರದಿಂದ ತಾಯ್ನಾಡಿಗೆ ಮರಳುವವರ ಸಂಖ್ಯೆ ಕಡಿಮೆಯಾಗಿದೆ.

English summary
The nationwide lockdown in India which started about a month ago has impacted nearly 40 million internal migrants, the World Bank has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X