ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮಕ್ಕಳ ಶ್ವಾಸಕೋಶದ ಸ್ಥಿತಿ ಹೇಗಿದೆ?

|
Google Oneindia Kannada News

ನವದೆಹಲಿ, ಮೇ. 5: ಹೆಚ್ಚಿದ ವಾಯು ಮಾಲಿನ್ಯ ಭಾರತದ ಮಹಾನಗರಗಳ ಮಕ್ಕಳ ಶ್ವಾಸಕೋಶಕ್ಕೆ ಎಂಥ ಪರಿಣಾಮ ಬೀರುತ್ತಿದೆ ಎಂಬುದನ್ನು ಅವಲೋಕಿಸಿದರೆ ಭಯವಾಗುತ್ತದೆ. ಮೂರರಲ್ಲಿ ಒಂದು ಭಾಗ ವಿದ್ಯಾರ್ಥಿಗಳ ಶ್ವಾಸಕೋಶ ಶಕ್ತಿ ಕಳೆದುಕೊಂಡಿದೆ ಎಂದು ಸಮೀಕ್ಷೆಯೊಂದು ದೃಢಪಡಿಸಿದೆ.

ವಿಶ್ವ ಆಸ್ತಮಾ ದಿನದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಈ ಬಗ್ಗೆ ಚಿಂತಿಸಲೇಬೇಕಾಗಿದೆ. ನವದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದ 2,373 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ನವದೆಹಲಿಯ 735 ಮಕ್ಕಳಲ್ಲಿ ಶೇ. 21 ರಷ್ಟು ಜನರ ಶ್ವಾಸಕೋಶ ಶಕ್ತಿ ಕಳೆದುಕೊಳ್ಳುವ ಹಂತದಲ್ಲಿತ್ತು. ಶೇ. 19 ಮಕ್ಕಳ ಶ್ವಾಸಕೋಶ ಸಂಪೂರ್ಣ ಹಾಳಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದ್ದು ನಿಜಕ್ಕೂ ಬೆಚ್ಚಿಬೀಳುವ ಸಂಗತಿಯಾಗಿದೆ.[ಲೈಂಗಿಕ ತೃಪ್ತಿ, ಜಾಗತಿಕ ಸಮೀಕ್ಷೆಯ ಫಲಿತಾಂಶ ಪ್ರಕಟ]

air pollution

ವಿಶ್ವದ 1,600 ಮಹಾನಗರಗಳಲ್ಲಿ ದೆಹಲಿಯಷ್ಟು ವಾಯು ಮಾಲಿನ್ಯ ಎಲ್ಲೂ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ವರದಿ ನೀಡಿದೆ. ಬೆಂಗಳೂರಿನಲ್ಲಿ ಶೇ. 36 ರಷ್ಟು ಮಕ್ಕಳ ಶ್ವಾಸಕೋಶ ಮಾಲಿನ್ಯಕ್ಕೆ ಬಲಿಯಾದ ಪ್ರಮಾಣ ಕಂಡುಬಂದಿದ್ದು ಅದರಲ್ಲಿ ಶೇ. 14 ಶಕ್ತಿ ಕಳೆದುಕೊಳ್ಳುವ ಸ್ಥಿತಿ ಮತ್ತು ಶೇ. 22 ಕೆಟ್ಟ ಸ್ಥಿತಿ ತಲುಪಿರುವ ಆಘಾತಕಾರಿ ಅಂಶವನ್ನು ಸಮೀಕ್ಷೆ ತೆಗೆದಿರಿಸಿದೆ.

ಹೀಲ್ ಫೌಂಡೇಶನ್ ನಡೆಸಿರುವ ಸಮೀಕ್ಷೆ ಇದರ ಜತೆಗೆ ಇನ್ನಿತರ ಅಂಶಗಳನ್ನು ಬಹಿರಂಗ ಮಾಡಿದೆ. ವಾಯು ಮಾಲಿನ್ಯ ತಡೆ ಸರ್ಕಾರದ ಜವಾಬ್ದಾರಿ ಎಂದೇ ಹೆಚ್ಚಿನ ಜನರು ಭಾವಿಸಿದ್ದಾರೆ. ಕೆಲವರು ಮಾತ್ರ ಪರಿಸರ ಪ್ರೇಮದ ಬಗ್ಗೆ ಕಳಕಳಿ ತೋರುತ್ತಾರೆ ಎಂದು ಹೇಳಿದೆ.[ನಿಮ್ಮ ಸಂಬಳ ಈ ಬಾರಿ ಎಷ್ಟು ಹೆಚ್ಚಾಗಲಿದೆ? ಸಮೀಕ್ಷೆ ಹೇಳುತ್ತೆ ಉತ್ತರ]

ಒಟ್ಟಿನಲ್ಲಿ ಹೆಚ್ಚಿತ್ತಿರುವ ಪರಿಸರ ಮಾಲಿನ್ಯ ಅದರಲ್ಲೂ ವಾಯು ಮಾಲಿನ್ಯ ತಡೆಗೆ ನಾವೆಲ್ಲರೂ ಇಂದೇ ಕಂಕಣ ಬದ್ಧವಾಬೇಕಿದೆ. ಇಲ್ಲವಾದಲ್ಲಿ ಉಸಿರಾಟ ಸಮಸ್ಯೆಯಿಂದ ನರಳುವ ಕಾಲ ಬಹಳ ದೂರವಿಲ್ಲ.

ನಿಮ್ಮ ಮಕ್ಕಳು ಯಾವ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದಾರೆ?

ನಿಮ್ಮ ಮಕ್ಕಳು ತೆರೆದ ಆಟೋ ರಿಕ್ಷಾದಲ್ಲಿ, ಇಲ್ಲವೇ ಅಸುರಕ್ಷಿತ ವಾಹನದಲ್ಲಿ ಪ್ರತಿದಿನ ಶಾಲೆಗೆ ತೆರಳುತ್ತಿದ್ದಾರೆಯೇ?ಹಾಗಾದರೆ ಮತ್ತಷ್ಟು ಎಚ್ಚರಿಕೆ ವಹಿಸಬೇಕು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುವಂತೆ ಬೆಂಗಳೂರಿನ ಶೇ. 36 ರಷ್ಟು ಮಕ್ಕಳಲ್ಲಿ ಶ್ವಾಸಕೋಶದ ತೊಂದರೆ ಕಂಡುಬರುತ್ತಿದೆ. ಇದಕ್ಕೆ ತೆರೆದ ವಾಹನದಲ್ಲಿ ತೆರಳುತ್ತಿರುವುದು ಬಹುಮುಖ್ಯ ಕಾರಣ. ಅಪಾಯದ ಪ್ರಮಾಣದಲ್ಲಿ ದೆಹಲಿ ನಂತರದ ಸ್ಥಾನ ಬೆಂಗಳೂರಿಗೆ ಎಂಬುದು ಭಯಾನಕವಾದರೂ ಒಪ್ಪಿಕೊಳ್ಳಬೇಕಾದ ಸತ್ಯ.

English summary
More than a third of schoolchildren in four big cities of India suffer from reduced lung capacity, with Delhi showing the worst results, claims a new study whose results could be pointing to how air pollution is impacting the health of kids in urban India. In the survey, 2,373 kids in Delhi, Mumbai, Bengaluru and Kolkata underwent a lung health screening test (LHST). Of the 735 students who took the test in Delhi, 21% were found to have 'poor' lung capacity while another 19% had 'bad' capacity. Heal Foundation conducted the survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X