ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಕೊರೊನಾ ಸೋಂಕು; ಕೇಂದ್ರದಿಂದ ಸಮಗ್ರ ಸಿದ್ಧತೆ ಭರವಸೆ

|
Google Oneindia Kannada News

ನವದೆಹಲಿ, ಜೂನ್ 01: ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕಿನ ಸಾಧ್ಯತೆ ಹೆಚ್ಚಿರುವುದಾಗಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ಮಕ್ಕಳಲ್ಲಿ ಈ ಕೊರೊನಾ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಇದಾಗ್ಯೂ ಸರ್ಕಾರ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗಲುವ ಎಚ್ಚರಿಕೆ ನಡುವೆ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದೆ. "ಮಕ್ಕಳಲ್ಲಿ ಕೊರೊನಾ ಸೋಂಕಿನ ಕುರಿತು ಸದ್ಯಕ್ಕೆ ನಮ್ಮ ಗಮನ ಹರಿಸಿದ್ದೇವೆ. ಅವರಿಗೆ ಸೋಂಕು ತಗುಲುತ್ತದೆ. ಅವರಿಗೆ ಕೊರೊನಾ ಸೋಂಕು ಬಂದರೂ ಅದು ಗಂಭೀರ ಸ್ವರೂಪ ಪಡೆಯುವುದಿಲ್ಲ. ಆಸ್ಪತ್ರೆಗೆ ಸೇರುವ ಸಾಧ್ಯತೆಯೂ ಕಡಿಮೆ ಇರುತ್ತದೆ ಎಂದು ನೀತಿ ಆಯೋಗ ಸದಸ್ಯ ಡಾ. ವಿ.ಕೆ. ಪೌಲ್ ತಿಳಿಸಿದ್ದಾರೆ.

ವೈರಸ್ ಸ್ವರೂಪ ಬದಲಾದರೆ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ: ಕೇಂದ್ರ ಕಳವಳವೈರಸ್ ಸ್ವರೂಪ ಬದಲಾದರೆ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ: ಕೇಂದ್ರ ಕಳವಳ

"ಮಕ್ಕಳಲ್ಲಿ ಸೋಂಕಿನ ನಡವಳಿಕೆ ಬೇರೆ ರೀತಿ ಇರಬಹುದು. ರೋಗಶಾಸ್ತ್ರದ ಬದಲಾವಣೆಯೂ ಆಗಬಹುದು. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ಸಿದ್ಧತೆ ನಡೆಸಿಕೊಳ್ಳುತ್ತಿದ್ದೇವೆ" ಎಂದು ಪೌಲ್ ಹೇಳಿದ್ದಾರೆ.

Working Very Systematically To Address Covid In Kids Says Govt

ವ್ಯವಸ್ಥಿತವಾಗಿ ಹಾಗೂ ಸಮಗ್ರವಾಗಿ ಈ ಕುರಿತು ಕೆಲಸ ಮಾಡುತ್ತಿದ್ದೇವೆ. ಭವಿಷ್ಯದಲ್ಲಿ ಮಕ್ಕಳಿಗೆ ಸೋಂಕಿನ ಸಾಧ್ಯತೆ ಸಂಬಂಧ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೇವೆ. ಆರೋಗ್ಯ ಸೌಲಭ್ಯಗಳನ್ನು ಬಲಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ.

English summary
Government is working very systematically to address covid in kids says Niti ayog member VK Paul,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X