ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಉದ್ಯೋಗಿಗಳು ಡಿ.31ರ ತನಕ ಮನೆಯಿಂದ ಕೆಲಸ ಮಾಡಲು ಒಪ್ಪಿಗೆ

|
Google Oneindia Kannada News

ನವದೆಹಲಿ, ಜುಲೈ 22 : ಐಟಿ ಮತ್ತು ಬಿಪಿಒ ಉದ್ಯೋಗಿಗಳಿಗೆ ಡಿಸೆಂಬರ್ 31ರ ತನಕ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಹಲವು ಕಚೇರಿಗಳು ಇನ್ನೂ ಬಾಗಿಲು ತೆರೆದಿಲ್ಲ.

ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದಾಗ ಏಪ್ರಿಲ್ 30ರ ತನಕ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು. ಬಳಿಕ ಅದನ್ನು ಜುಲೈ 31ರ ತನಕ ವಿಸ್ತರಣೆ ಮಾಡಲಾಗಿತ್ತು. ಈಗ ಡಿಸೆಂಬರ್ 31ರ ತನಕ ಅವಕಾಶ ನೀಡಲಾಗಿದೆ.

 ಭಾರೀ ಸಂಖ್ಯೆಯಲ್ಲಿ ನೌಕರರನ್ನು ಕೆಲಸದಿಂದ ವಜಾಗೊಳಿಸುತ್ತಿವೆ ಐಟಿ ಕಂಪನಿಗಳು..! ಭಾರೀ ಸಂಖ್ಯೆಯಲ್ಲಿ ನೌಕರರನ್ನು ಕೆಲಸದಿಂದ ವಜಾಗೊಳಿಸುತ್ತಿವೆ ಐಟಿ ಕಂಪನಿಗಳು..!

ಪ್ರಸ್ತುತ ದೇಶದಲ್ಲಿ ಶೇ 85ರಷ್ಟು ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ತೀರಾ ಅಗತ್ಯ ಇರುವವರು ಮಾತ್ರ ಕಚೇರಿಗೆ ತೆರಳುತ್ತಿದ್ದಾರೆ. ಡಿಸೆಂಬರ್ ತನಕ ಮನೆಯಿಂದಲೇ ಕೆಲಸ ಮಾಡಲು ಸರ್ಕಾರವೇ ಈಗ ಒಪ್ಪಿಗೆ ನೀಡಿದೆ.

18,000 ಟೆಕ್ಕಿಗಳಿಗೆ ಪಿಂಕ್ ಸ್ಲಿಪ್, ಕರ್ನಾಟಕ ಐಟಿ ಯೂನಿಯನ್ ಗರಂ 18,000 ಟೆಕ್ಕಿಗಳಿಗೆ ಪಿಂಕ್ ಸ್ಲಿಪ್, ಕರ್ನಾಟಕ ಐಟಿ ಯೂನಿಯನ್ ಗರಂ

Work From Home Of IT And BPO Extended Till December 31

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಆದ್ದರಿಂದ, ಹಲವು ರಾಜ್ಯಗಳಲ್ಲಿ ಐಟಿ ಕಂಪನಿಗಳು ಇನ್ನೂ ಬಾಗಿಲು ತೆರೆದಿಲ್ಲ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆಗಳನ್ನು ನೀಡಿವೆ.

ಕೊರೊನಾ ಭೀತಿ: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಿ ಎಂದ ಟ್ವಿಟ್ಟರ್ ಕೊರೊನಾ ಭೀತಿ: ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಿ ಎಂದ ಟ್ವಿಟ್ಟರ್

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 37,724 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,92,915ಕ್ಕೆ ಏರಿಕೆಯಾಗಿದೆ.

English summary
Due to Coronavirus outbreak in India work from home for IT and BPO companies extended till December 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X