ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಮರಿಯನ್ನು ರಕ್ಷಿಸಲು ಹಾವಿನೊಂದಿಗೆ ಸೆಣಸಾಡಿದ ಮರಕುಟಿಕ

|
Google Oneindia Kannada News

ತಾಯಿಯ ಪ್ರೀತಿಯೇ ಅಂತಹದ್ದು. ಮಕ್ಕಳಿಗೆ ಏನಾದರೂ ಅಪಾಯ ಬಂದರೆ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ತನ್ನ ಮಗುವನ್ನು ರಕ್ಷಿಸುವಂತಹ ಗುಣ ತಾಯಿ. ಇಂತಹ ಗುಣವನ್ನು ಪ್ರಾಣಿ ಮತ್ತು ಪಕ್ಷಿಗಳ ಸಂಕುಲದಲ್ಲು ಕಾಣಬಹುದು.

ಇದಕ್ಕೆ ತಾಜಾ ನಿದರ್ಶನ ಮರಕುಟಿಕವೊಂದು ಅಪಾಯಕಾರಿ ಹಾವಿನೊಂದಿಗೆ ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಡಿರುವ ಘಟನೆ. ಮರಕುಟಿಕ ಮರಿ ಇದ್ದ ಮರದ ತೊಗಟೆಯಲ್ಲಿ ಹಾವೊಂದು ಸೇರಿಕೊಂಡಿದೆ. ಇದನ್ನು ಗಮನಿಸಿದ ಮರಕುಟಿಕ ಹಾವಿನೊಂದಿಗೆ ಕಾಳಗಕ್ಕೆ ಬಿದ್ದಿದೆ.

ಹಾವಿನ ಜೊತೆ ಸೆಣಸಾಡುವುದು ಅಪಾಯ ಎಂದು ತಿಳಿದಿದ್ದರೂ ತನ್ನ ಮರಿಯ ರಕ್ಷಿಸಬೇಕು ಎಂಬ ಹಠ, ಎಷ್ಟೇ ಕಷ್ಟವಿದ್ದರೂ ಮತ್ತೆ ಮತ್ತೆ ಹಾವಿನ ಜೊತೆ ಹೋರಾಡಿದೆ. ಈ ವಿಡಿಯೋ ಈಗ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.

woodpecker-dangers-fight-with-snake

ಐ ಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ಈ ವಿಡಿಯೋ ಟ್ವೀಟ್ ಮಾಡಿದ್ದು, ''ಈ ಗ್ರಹದಲ್ಲಿ ತಾಯಿಯ ಪ್ರೀತಿಯನ್ನು ಯಾವ ಶಕ್ತಿಯೂ ಸೋಲಿಸಲು ಸಾಧ್ಯವಿಲ್ಲ. ಹಾವಿನೊಂದಿಗೆ ಯುದ್ಧದ ಬಳಿಕ ತನ್ನ ಮರಿಯನ್ನು ಉಳಿಸುತ್ತೆ ಮರಕುಟಿಕ'' ಎಂದು ಕ್ಯಾಪ್ಷನ್ ನೀಡಿದ್ದಾರೆ.

ಅಂದ್ಹಾಗೆ, ಈ ವಿಡಿಯೋವನ್ನು ಮೂಲತಃ ಪೆರುವಿನ ಇಸ್ರೇಲಿ ಪ್ರವಾಸಿ ಅಸ್ಸಫ್ ಅಡ್ಮೋನಿ ಸೆರೆಹಿಡಿದಿದ್ದರು. ಸುಶಾಂತ್ ನಂದಾ ಅವರ ಹಂಚಿಕೊಂಡಿರುವ ವಿಡಿಯೋ ಇದುವರೆಗೂ 14 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಶ್ಚರ್ಯವಾಗಿದ್ದು, ಮರಕುಟಿಕದ ಧೈರ್ಯಕ್ಕೆ ಮರುಳಾಗಿದ್ದಾರೆ. ತಾಯಿ ಪ್ರೀತಿಯ ಬಗ್ಗೆ ಭಾವುಕ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

English summary
Woodpecker's do or die fight with dangerous snake to protect babies. viral video watch....
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X