25 ವರ್ಷ ಕಳೆದರೂ ಅಡ್ವಾಣಿಯನ್ನು ಬೆಂಬಿಡದ 'ಬಾಬ್ರಿ ಮಸೀದಿ' ಭೂತ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್ 6: ತಾಂತ್ರಿಕ ಕಾರಣಗಳಿಗಾಗಿ ಬಾಂಬ್ರಿ ಮಸೀದಿ ಪ್ರಕರಣದಲ್ಲಿ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಇತರರ ಮೇಲಿನ ಪ್ರಕರಣಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಈ ಮೂಲಕ ವಿವಾದಿತ ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷಗಳು ಕಳೆದರೂ ಅದರ ನೆರಳಿನಿಂದ ಕಳಚಿಕೊಳ್ಳಲು ಆಡ್ವಾಣಿ ಹಾಗೂ ಇತರರಿಗೆ ಸಾಧ್ಯವಾಗುತ್ತಿಲ್ಲ.

1992ರಲ್ಲಿ ವಿವಾದಿತ ಬಾಬ್ರಿ ಮಸೀದಿ ಕರಸೇವಕರಿಂದ ಧ್ವಂಸವಾಗಿತ್ತು. ಇದೆಲ್ಲಾ ನಡೆದು 25 ವರ್ಷಗಳಾಗುತ್ತಾ ಬಂತು. ಆದರೆ ಅದರ ಪ್ರಕರಣಗಳು ಮಾತ್ರ ಹಲವರನ್ನು ಇನ್ನೂ ಕಾಡುತ್ತಲೇ ಇದೆ. 2001ರಲ್ಲಿ ವಿಚಾರಣಾ ನ್ಯಾಯಾಲಯ ಅಡ್ವಾಣಿ ಮೇಲಿನ ಪ್ರಕರಣಗಳನ್ನು ತಾಂತ್ರಿಕ ಕಾರಣಗಳಿಗಾಗಿ ಕೈ ಬಿಟ್ಟಿತ್ತು. ಆದರೆ ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ರೀತಿ ತಾಂತ್ರಿಕ ಕಾರಣಗಳಿಗಾಗಿ ಪ್ರಕರಣ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ.[ಭಾಸ್ಕರ್ ರಾವ್ ಗೆ ಹಿನ್ನಡೆ, ತನಿಖೆ ಮುಂದುವರೆಯಲಿ : ಸುಪ್ರೀಂ]

 Wont drop charges against Advani in Babri case, SC says

ಈ ಹಿಂದೆ ಸುಪ್ರೀಂ ಕೋರ್ಟ್ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಮೇಲಿನ ಸಂಚಿನ ಪ್ರಕರಣಗಳನ್ನು ಮತ್ತೆ ಯಾಕೆ ಆರಂಭಿಸಿಲ್ಲ ಎಂದೂ ಕೇಳಿತ್ತು. ವಿಚಾರಣಾ ನ್ಯಾಯಾಲಯ 2001ರಲ್ಲಿ ಬಿಜೆಪಿ ನಾಯಕರ ಮೇಲಿನ ಪ್ರಕರಣಗಳನ್ನು ಕೈ ಬಿಟ್ಟಿತ್ತು. ಇದನ್ನು ಅಲಹಾಬಾದ್ ಹೈಕೋರ್ಟ್ ಕೂಡ 2010ರಲ್ಲಿ ಎತ್ತಿ ಹಿಡಿದಿತ್ತು.

ಇದೆಲ್ಲಾ ಆಗಿ 9 ತಿಂಗಳ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. 'ಸಿಬಿಐ ಸುಪ್ರಿಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವಲ್ಲಿ ತಡವಾಗಿದೆ. ಹಾಗಾಗಿ ಪ್ರಕರಣವನ್ನು ಕೈಬಿಡುವಂತೆ ಅಡ್ವಾಣಿ ಮೊದಲಾದವರು ಸುಪ್ರಿಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು.[ಗಾಯತ್ರಿ ಪ್ರಜಾಪತಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ]

ಆದರೆ ಇದನ್ನು ತಳ್ಳಿ ಹಾಕಿರುವ ಸುಪ್ರೀಂ ಕೊರ್ಟ್ ತಾಂತ್ರಿಕ ಕಾರಣಗಳಿಗಾಗಿ ಪ್ರಕರಣ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on Monday said that it would not accept dropping of charges against BJP leader L K Advani and others in the Babri Masjid case on technical grounds. The case is being heard by the Supreme Court after charges were dropped by a trial court in 2001.
Please Wait while comments are loading...