ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮಕ್ಕೆ ‌ಸೈನ್ಯದಲ್ಲಿ ಅವಕಾಶ ನೀಡುವುದಿಲ್ಲ: ಬಿಪಿನ್ ರಾವತ್

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಜನವರಿ 10: ಸಲಿಂಗ ಲೈಂಗಿಕತೆಗೆ ‌ಸೈನ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ಹೇಳಿದ್ದಾರೆ. ಸಲಿಂಗಾಕಾಮ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

"ಅದಕ್ಕೆ ನಾವು ಸೈನ್ಯದಲ್ಲಿ ಅವಕಾಶ ನೀಡುವುದಿಲ್ಲ" ಎಂದು ವಾರ್ಷಿಕ ಪತ್ರಿಕಾ ಗೋಷ್ಠಿಯಲ್ಲಿ ರಾವತ್ ಹೇಳಿದ್ದಾರೆ. ಸಲಿಂಗಕಾಮದ ವಿಚಾರವಾಗಿ ಭಾರತೀಯ ಸೈನ್ಯಕ್ಕೆ ಅದರದೇ ಕಾನೂನು ಇದೆ ಎಂದಿದ್ದಾರೆ.

'ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?''ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?'

ನಾವು ದೇಶದ ಕಾನೂನಿಗೆ ಮೀರಿದವರಲ್ಲ. ಆದರೆ ಸೈನ್ಯಕ್ಕೆ ಸೇರಿದ ಮೇಲೆ ನೀವು ಅನುಭವಿಸುವ ಕೆಲವು ಹಕ್ಕು ಹಾಗೂ ವಿನಾಯ್ತಿಗಳು ನಮಗೆ ಇರುವುದಿಲ್ಲ. ಕೆಲವು ವಿಚಾರಗಳು ನಮಗೆ ಭಿನ್ನವಾಗಿರುತ್ತವೆ ಎಂದು ಹೇಳಿದ್ದಾರೆ.

Wont allow gay sex in the army, says General Rawat

ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಲಿಂಗ ಕಾಮದ ವಿಚಾರವಾಗಿ ಒಮ್ಮತದ ತೀರ್ಪು ನೀಡಿತ್ತು. ಬ್ರಿಟಿಷರ ಕಾಲದ ಕಾನೂನು ಬದಲಾಯಿಸಿ, ಸಹಮತ ಸಲಿಂಗ ಲೈಂಗಿಕತೆ ಅಪರಾಧವಲ್ಲ ಎಂದಿತ್ತು.

ಕೆನಡಾದ ಗರ್ಲ್‌ಫ್ರೆಂಡ್ ಜತೆ ಜಾಕಿ ಚಾನ್ ಮಗಳ ಮದುವೆ!ಕೆನಡಾದ ಗರ್ಲ್‌ಫ್ರೆಂಡ್ ಜತೆ ಜಾಕಿ ಚಾನ್ ಮಗಳ ಮದುವೆ!

ಅದೇ ರೀತಿ 'ಹಾದರ'ದ ವಿಚಾರವಾಗಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಈ ವಿಚಾರದಲ್ಲಿ ಸೇನೆಯು 'ಬಹಳ ಸಾಂಪ್ರದಾಯಿಕ' ಎಂದಿದ್ದಾರೆ. ಹೆಣ್ಣನ್ನು ಆಕೆಯ ಗಂಡನ ಆಸ್ತಿ ಎಂದು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

English summary
Gay sex will not be allowed in the Indian Army, its chief General Bipin Rawat said on Thursday when asked to comment on the Supreme Court decriminalizing homosexuality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X